ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10 ವಿದಾಯ ಅಲೆವೆಲರುಸಿರಿಂ ಹುಯ್ಯುವೆನು, ನಿನ್ನೆದೆಯಿಂ ನಿಡುಸುಯ್ಯುವೆನು; ಬಿಮ್ಮನೆ ತೋಳುಗಳಿಂದೆನ್ನ ಬಿಗಿವಿಡಿಯದೊಲೋಡುವೆ ನಿನ್ನ, ನೀರಿನ ಕಿರುಗೆರೆಯಾಗುತಲಿ, ಯಾರನ್ನರಿಯದೋಲೀಸುತಲಿ, ಮಾಯುವ ನಿನ್ನನು ಬಲವಂದು ಮುರಿಮುರಿದಪ್ಪಿ ಕೊಳುವೆನಂದು ಪೊರಗೋಡೆನ್ನನು ತಾಯೆ ಬಿಡು, ಮುದ್ದಿನ ತಾಯ ಪೊಗಗೊಡು ಸೂಸುವ ಸೇಸೆಯ ಸೋನೆಯಲಿ ಇರುಳಲಿ ನೀನಮ್ಮ ಮನೆಯಲಿ ಒಂಟಿ ಮಲಗಿ ನಮ್ಮ ಹಸೆಯಲ್ಲಿ ಮಯೂರೆತೆನ್ನನೆ ನೆನೆವಲ್ಲಿ, ತಟತಟ ತಟಕುವ ತನಿಯೆಲೆಯಿಂ ತೊದಲಾಡುವೆನಿಂಬನಿಯುಲಿಯಿಂ ಮುಚ್ಚಲು ಮರೆತಿಹ ಕಿಟಕಿಗಳಿಂ ಮಿಂಚುವ ಮಿಂಚಿನ ಮೊಟಕುಗಳಿಂಅಂದಿನ ನನ್ನಟ್ಟಸವನ್ನ ಬಗೆಯಲಳವೆ ಅನ್ನಾ ನಿನ್ನ ? ಮೂಾರಿದಿರುಳ ಕಗ್ಗತ್ತಲಲಿ ನೀನೆಚ್ಚರವಿರೆ ಮರುಗುತಲಿ, ಮಿರುರೆಪ್ಪೆಯ ತಾರಗೆಯಾಗಿ ಮಲಗಪ್ಪಾ ಎನುವೆನು ಬಾಗಿ ಅಳಲಿ ಬಳಲಿ ಕಡೆಯಲಿ ದಣಿದು ಪವಡಿಸುತಲೆ ನೀನರೆಮಣಿದು, ಚಂದ್ರುನ ಪೊದೆಗದಿರಾಗುವೆನು,