ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಕೋಳುಗುಳದ ಮನವಿ ನೀಡ ರಣದೀಕ್ಷೆಯೊಡೆಯಾ ! ವಶಗೆಯ್ಯಲಿಳೆಯೆಲ್ಲ ಮಸಗಿ ಕಾದುವೆನಲ್ಲ ಸ್ವಾರಾಜ್ಯ ವರ್ಜ್ಯಮನ್ಯರ ರಾಜ್ಯಮೇಕೆ ? ತಾಯ ಸೆರೆಯಂ ಸವರಲೆಂದೆ ವೆರಲೂಾ ಬವರ ದಬ್ಬಾಳಿಕೆಯ ಮಟ್ಟಡಿಯ ತಬ್ಬಬೇಕೆ ? ವಿಸ್ತಾರಿಸೆನ್ನೆದೆಯ ಧಮನಿಯೊಡೆಯಾ ! ತಾರ ಸಮರಾಜ್ಞೆಯೊಡೆಯಾ ! 28 ತಾರ ಸಮರಾಜ್ಞೆಯೊಡೆಯಾ ? ಅನ್ಯದೇಶಾಕ್ರಾಂತಿ ಸ್ಪಪರನಾಶಭ್ರಾಂತಿ ಯಿಂ ದ್ವಿಪಕ್ಷದ ರಕ್ಷೆಗೀಕ್ಷಿಸದೆ ಬಗೆಯಂ, ರಣವೊಂದೆ ಶರಣೆಂದೆ ಬಂದೆ ಮುಂದೆದೆಯಿಂದ ತೊಳೆದು ಕಂಬನಿಯೊಳೆದುರಾಳಿಗಳ ಪಗೆಯಂಸನ್ನದ್ಧನಾಂ ಧರ್ಮಯುದ್ಧ ಕೊಡೆಯಾ ! ಬೆಂಬಲಿಸು ನನ್ನ ತೊಡೆಯಾ ! 35 ಬೆಂಬಲಿಸು ನನ್ನ ತೊಡೆಯಾ ! ಎನ್ನೆವರೆಗೀ ಪ್ರಾಣಮೆನ್ನೆವರೆಗೆ ಈ ಪಾಣ ಮನ್ನೆಗಂ ಕಾದೆಂದು ಬೀಳ್ಕೊಡಿಂದೆನ್ನ ! ನೀನೆ ವಿಜಯಧ್ವಜಂ ! ನೀನೆ ಹೃದಯಸ್ತುಜಂ | ನೀನೆ ನಿಷ್ಪಕ್ಷೇನ ಸೇನಾನಿಯೆನ್ನ ! ಸೋಲಗೆಲವೆನ್ನದೇಂ ? ನಿನ್ನದೊಡೆಯಾ ! ಕಾದುವುದೆ ನನ್ನದೊಡೆಯಾ ! 42 ಕಾದುವುದೆ ನನ್ನದೊಡೆಯಾ ! ಸರ್ವಭಾರಮನಿಂದು ನಿನಗಿರಿಸಿ ತರಿಸಂದು ನಿನ್ನ ಹೆಸರೆತ್ತು ತೆತ್ತುವೆ ಕತ್ತಿಯನ್ನ !