ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ನಿನ್ನಿಚ್ಛೆ ಎಂತೆಂತು ನಡೆಸೆನ್ನನಂತಂತುಜಯಕೆ ಮುನ್ನಡೆಯಿಸಥವಾ ಮರಣಕೆನ್ನ ! ಮರಣಮೆ ವರಂ ಪರಾಶಯದಿನೊಡೆಯಾ ! ಮುನ್ನಡೆಯಿಸೆನ್ನ ನೊಡೆಯಾ ! ಮುನ್ನಡೆಯಿಸೆನ್ನನೊಡೆಯಾ ! ಇಂದು ಜೀವನನೆನ್ನ ತೆತ್ತೆ ಕೆಯ್ದು ದೊ ನಿನ್ನ ನೀನಿದಂ ನನಗಿತ್ತೆ, ನೀನೆ ಕೊಳಬಲ್ಲೆ ! ಹರಸೆನ್ನನುಳಿಯೆಂದೊ, ಹರಸನ್ನನಳಿಯೆಂದೂಅಳುವ ತಾಯಿಯೊಳೆನ್ನಳಿವುಳಿವನೋಲ್ಲ ! ಇದೆ ಜಲಾಂಜಲಿ ಜೀವಿತಾಶಗೊಡೆಯಾ ! ನಿನಗೆನ್ನನಿತ್ತೆನೊಡೆಯಾ ! 56 ನಿನಗೆನ್ನನಿತ್ತಡೆಯಾ ! ಸಿಡಿಲ ಸನ್ನೆಯಿನೆನ್ನ ನಂತಕಂ ಕರೆವನ್ನ, ಕೆಯ್ಯುಗಿಯುವಲಿ ನಿನಗೆ ಕಣ್ಮುಗಿಯುವೆನ್ನ ಜೀವನಂ ಬಸಿವನ್ನ ಭಾವನಂ ಕುಸಿವನ್ನ, ಮೂರ್ಛಿಯಿಂ ನಿನ್ನ ಹೆಸರುಚ್ಚರಿಸದನ್ನ, ಸ್ವಾಗತಮೆ ತವ ಪದಾಗತನಿಗೊಡೆಯ? ಇದೆ ಕೊನೆಯ ಮನವಿಯೊಡೆಯಾ ! ಇದೆ ಕೊನೆಯ ಮನವಿಯೊಡೆಯಾ ! ತಾಯ ಸಂಕಲೆ ಕಡಿಯೆ ಸಂಗಳಿಸದಾಂ ಮಡಿಯೆ, ನೀನದಂ ತವಕದಿಂ ತರಿವೆಂದು ಬಲ್ಲೆ ! ಮಡಿಯೆ ಜನಿತ ವ್ಯಕ್ತಿ, ಮಡಿವುದೇನನುರಕ್ತಿತಾಯೊಸಗೆ ತರ್ವಿನಂ ಸ್ವರ್ಗಸುಖಮೊಲ್ಲ ! ಭವಭವವನೆನಗಿಲ್ಲಿ ಸಲ್ಲಿಸೋಡೆಯಾ ! ಕರೆವೆ ನಾ ನಿನ್ನನೊಡೆಯಾ !