ಈ ಪುಟವನ್ನು ಪ್ರಕಟಿಸಲಾಗಿದೆ
ಚಂದ್ರಮತಿ

ದ್ರಕ್ಕೆ ತಳ್ಳಿ ಅವರು ಮುಳುಮುಳುಗಿ ಎದ್ದು ಗೋಳಾಡುತ್ತಿರುವಾಗ ಕಣ್ಣಾರೆ ಕಂಡು ಪಶ್ಚಾತ್ತಾಪವಟ್ಟು ಆಗ ಏನನ್ನೂ ಮಾಡಲಾರದೆ ನಿಂದೆಗೆ ಗುರಿಯಾಗಿ ವ್ಯಸನಪಡುವಂತಹ ಮೂಢರಂತೆ ಅಪಕೀರ್ತಿಯನ್ನು ಹೊಂದಿ ಪಶ್ಚಾತ್ತಾಪಪಡುವರು."


ಎರಡನೆಯ ಪ್ರಕರಣ.


ವಿದ್ಯಾಸಮುದ್ರನು ಈಯುವನ್ಯಾಸವನ್ನು ಪ್ರಾರಂಭಿಸಿದ ಸ್ವಲ್ಪ ಕಾಲದೊಳಗಾಗಿ ಚಂದ್ರಮತಿಯು ಅಲ್ಲಿಗೆ ಬಂದು ತಂದೆಯ ತೊಡೆಯಮೇಲೆ ಕುಳಿತುಕೊಂಡು ಅದು ಮುಗಿಯುವವರೆಗೂ ತದೇಕಧ್ಯಾನದಿಂದ ಕಿವಿಗೊಟ್ಟು ಕೇಳುತ್ತಿದಳು. ಉಶೀನರನು ತನ್ನ ಮುದುಗುವರಿಯ ಈ ಬಗೆಯ ಉತ್ಸಾಹವನ್ನು ಕಂಡು, ಉಪನ್ಯಾಸವೆಲ್ಲ ಮುಗಿದೊಡನೆಯೇ ಅವಳನ್ನು ಮುದ್ದಿಸಿ ಬೆನ್ನನ್ನು ನೇವರಿಸುತ್ತೆ " ಮಗೂ! ನೀನೇನೋ ಬಲು ತಿಳಿದವಳಂತೆ ಇಷ್ಟು ಹೊತ್ತೂ ಅತ್ತಿತ್ತ ತಿರುಗಿನೋಡದೆ ಬಹು ಶ್ರದ್ದೆಯಿಂದ ಉಪನ್ಯಾಸವನ್ನೆಲ್ಲ ಕೇಳುತ್ತಿದ್ದೆಯಲ್ಲವೆ? ಅದರಲ್ಲಿ ನಿನಗೇನಾದರೂ ತಿಳಿಯಿತೋ? " ಎಂದು ಕೇಳಿದನು.

ಚಂದ್ರ-ನಾನು ಕೇಳಿ ದುದರಲ್ಲಿ ಬಾಲೆಯರಿಗೂ ವಿದ್ಯೆಯನ್ನು ಕಲಿ ಸುವುದು ಉಪಯೋಗಕರವಾದುದೆಂದು ಅವರು ತಿಳಿಸಿದಂತೆ ತೋರುವುದು. ಅವರು ಹೇಳಿದುದರ ಮುಖ್ಯತಾತ್ಪರ್ಯವು ಅಷ್ಟೇ ಅಲ್ಲವೆ?

ಉಶೀನರ-ಅಹುದು. ಅವರು ಈಗ ವಿವರಿಸಿದುದು ಅಷ್ಟು ವಿಷಯ ನನ್ನೇ, ನೀನು ಎವೆಯಿಕ್ಕದೆ ಜಾಗರೂಕತೆಯಿಂದ ಕಡೆಯವರೆಗೂ ಕೇಳುತ್ತಿದ್ದುದನ್ನು ನೋಡಿದಾಗಲೇ, ಅದರ ಅರ್ಥವನ್ನೆಲ್ಲ ಗ್ರಹಿಸಿ, ವಿದ್ಯೆಯನ್ನು ಕಲಿಯಬೇಕೆಂಬ ಅಭಿಲಾಷೆಯುಳ್ಳವಳಾದೆಯೆಂದು ನನ್ನ ಮನಸ್ಸಿಗೆ