ಈ ಪುಟವನ್ನು ಪ್ರಕಟಿಸಲಾಗಿದೆ
ಎರಡನೆಯ ಪ್ರಕರಣ

ತೋರಿ ಬಹು ಸಂತೋಷವುಂಟಾಯಿತು. ನೀನು ವಿದ್ಯೆಯನ್ನು ಕಲಿಯುವುದಕ್ಕೆ ಮೊದಲುಮಾಡಿ ನನಗೂ ನಿಮ್ಮ ತಾಯಿಗೂ ಎಂದು ಸಂತೋಷವನ್ನುಂಟುಮಾಡುವೆಯೋ!

ಚಂದ್ರ--ಅವರು ಹೇಳಿದುದನ್ನು ಕೇಳಿದ ಬಳಿಕ ನನಗೆ ನೀವು ಯಾವಾಗ ವಿದ್ಯೆಯನ್ನು ಕಲಿಸತೊಡಗುವಿರೋ ಎಂಬ ಬುದ್ದಿಯು ಹುಟ್ಟಲು, ನಿಮ್ಮನ್ನು ಆ ವಿಷಯವಾಗಿಯೇ ಕೇಳ ಬೇಕೆಂದು ನಿಶ್ಚಯಿಸಿದೆನು. ಇಷ್ಟ ರೊಳಗಾಗಿ ನೀವು ನನ್ನ ಮನಸ್ಸಿನಲ್ಲಿದ್ದುದನ್ನೇ ಕೇಳಿದಿರಿ. ನೀವು ನನ್ನನ್ನು ಎಷ್ಟು ಜಾಗ್ರತೆಯಾಗಿ ವಿದ್ಯಾಭ್ಯಾಸಕ್ಕೆ ಬಿಡುವಿರೋ ಅಷ್ಟು ಸಂತೋಷದಿಂದ ನಾನೂ ವಿದ್ಯೆಯನ್ನು ಕಲಿಯುವುದಕ್ಕೆ ಸಿದ್ಧಳಾಗಿರುವೆನು. ಇದುವರೆಗೆ ನಮ್ಮ ತಾಯಿಯು ಕೆಲವಕ್ಷರಗಳನ್ನೂ ಬರೆಯುವ ಕ್ರಮವನ್ನೂ ಸ್ವಲ್ಪ ಸ್ವಲ್ಪವಾಗಿ ಕಲಿಸಿರುವಳು.

ಎಂದು ಚಂದ್ರಮತಿಯು ಪ್ರತ್ಯುತ್ತರವನ್ನು ಕೊಡಲು ರಾಜನು ಅಪರಿಮಿತಾನಂದವನ್ನು ಹೊಂದಿ, ತತ್ಕ್ಷಣದ ವಿದ್ಯಾಸಮುದ್ರನಿಗೆ ಆಕೆಯನ್ನು ತೋರಿಸಿ, "ನಿಮ್ಮ ಶಿಷ್ಯಳಾದ ಇವಳಿಗೆ ವಿದ್ಯಾ ಬುದ್ದಿಗಳನ್ನು ಕಲಿಸಿ ಸನ್ಮಾರ್ಗದಲ್ಲಿರುವಂತೆ ತಿದ್ದುವ ಭಾರವು ನಿಮಗೇ ಸೇರಿರುವುದು" ಎಂದು ಹೇಳಿ ಚಂದ್ರಮತಿಯನ್ನೊಪ್ಪಿಸಿ, ಧನಕನಕವಾದಿಗಳಿಂದ ಆತನನ್ನು ಸತ್ತರಿಸಿ ಕಳುಹಿಸಿದನು. ಬಳಿಕ ವಿದ್ಯಾಸಮುದ್ರನು ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಅಂದಿನಿಂದ ಚಂದ್ರಮತಿಗೆ ವಿದ್ಯೆಯನ್ನು ಕಲಿಸುವುದಕ್ಕೆ ಮೊದಲುಮಾಡಿ, ಎರಡು ವರ್ಷಗಳೊಳಗಾಗಿ ಹೇಳಿದುದನ್ನೆಲ್ಲ ತಪ್ಪಿಲ್ಲದೆ ಬರೆಯುವುದನ್ನೂ, ಕೊಟ್ಟ ಪುಸ್ತಕವನ್ನು ಚೆನ್ನಾಗಿ ಓದುವುದನ್ನೂ, ಸುಲಭವಾದ ಪದ್ಯಗಳನ್ನು ಇತರರ ಸಹಾಯವಿಲ್ಲದೆಯೇ ಅರ್ಥಮಾಡಿಕೊಳ್ಳುವುದನ್ನೂ, ಸಾಮಾನ್ಯವಾಗಿ ಕುಶಲಪತ್ರಿಕೆಗಳನ್ನು ಬರೆಯುವುದನ್ನೂ, ನಿರಾಯಾಸವಾಗಿ ಕಲಿಸಿದನು. ಮಕ್ಕಳನ್ನು ಆಟಪಾಟಗಳಿಗೆ ಸ್ವಲ್ಪ ಕಾಲವಾದರೂ ಬಿಡದೆ ನಿರ್ಬಂಧಪಡಿಸಿ ಓದಿಸಿದಪಕ್ಷದಲ್ಲಿ ಮನಸ್ಸಿಗೆ ಹಿಡಿಯದೆ ಅದರಿಂದ ಅವರಿಗೆ ಲಾಭವುಂಟಾಗಲಾರದೆಂದೂ, ಪ್ರತಿದಿನವೂ ಸ್ವಲ್ಪ ಕಾಲ ಆಟಪಾಟಗಳನ್ನಾಡುವುದು ದೇಹಾರೋಗ್ಯಕ್ಕೆ ಆವಶ್ಯಕವಾದುದೆಂದೂ ವಿದ್ಯಾ