ಈ ಪುಟವನ್ನು ಪ್ರಕಟಿಸಲಾಗಿದೆ
ಎರಡನೆಯ ಪ್ರಕರಣ.

ಗುರುವಿನ ಬಳಿಯಲ್ಲಿ ಓದಿದುದನ್ನೆಲ್ಲಾ ಬೋಧಿಸಿ ಆಡಿಕೊಳ್ಳುತ್ತೆ ಮತ್ತಷ್ಟು ಜ್ಞಾನವನ್ನು ಅಭಿವೃದ್ಧಿಪಡಿಸಿಕೊಂಡಳು. ಹಿರಿಯರೂ ಮತ್ತು ತಿಳಿದವರೂ ಹೇಗೆ ಪ್ರವರ್ತಿಸುವರೋ ಮಕ್ಕಳೂ ಮತ್ತೂ ತಿಳಿಯದವರೂ ಹಾಗೆಯೇ ನೋಡಿ ನಡೆಯುವುದು ಲೋಕಸ್ವಭಾವವಾದುದರಿಂದ, ಮನೆಯಲ್ಲಿ ತಾಯ್ತಂದೆಗಳ ಸತ್ಪ್ರವರ್ತನವನ್ನೂ ಹೊರಗೆ ಗುರುವಾದ ವಿದ್ಯಾಸಮುದ್ರನ ಒಳ್ಳೆಯ ನಡೆನುಡಿಗಳನ್ನೂ ಕಂಡು ಚಂದ್ರಮತಿಗೆ ಉಂಟಾದ ಸುಗುಣ ಸಂಪತ್ತುಗಳಷ್ಟಿಷ್ಟೆಂದು ಹೇಳಲು ಶಕ್ಯವಲ್ಲ. ಬಾಯಿಂದ ಆಡುವ ಬರಿಮಾತುಗಳಿಗಿಂತ ಕೈಯಿಂದ ಮಾಡಿ ತೋರಿಸುವ ಕಾರ್ಯಗಳೇ ಮನಸ್ಸಿಗೆ ಚೆನ್ನಾಗಿ ನಾಟತಕ್ಕುವುಗಳಾದುದರಿಂದ, ಗುರುವು ಬೋಧಿಸಿದ ಉಪದೇಶಗಳಿಗಿಂತ ಆತನ ಸದ್ವರ್ತನವೇ ಚಂದ್ರಮತಿಯನ್ನು ವಿಶೇಷ ನೀತಿಯುಕ್ತೆಯನ್ನಾಗಿ ಮಾಡಿತು.

ಆತನು ಚಂದ್ರಮತಿಗೆ ಇಹಲೋಕಾನುಕೂಲಗಳಾದ ಸಂಗತಿಗಳನ್ನು ಹೆಚ್ಚಾಗಿ ಬೋಧಿಸುತ್ತಿದನಾದರೂ, ಪರಲೋಕಸಾಧಕನಾದ ಭಗವದ್ವಿಷಯಕಜ್ಞಾನವನ್ನೂ ಉಂಟುಮಾಡಿಸದಿರಲಿಲ್ಲ. ಒಂದುದಿವಸ ಚಂದ್ರಮತಿಯು ಒಂದು ಚಿತ್ರಪಟವನ್ನು ಕೈಯಲ್ಲಿ ಹಿಡಿದುಕೊಂಡು, ಅದರ ಸೊಗಸನ್ನು ಕಂಡು ಅಚ್ಚರಿಗೊಂಡು ತಲೆದೂಗುತ್ತಿರುವಾಗ ಅವಳ ಗುರುವು ಅಲ್ಲಿಗೆ ಬಂದನು.

ಗುರು - ಮಗೂ! ನಾನು ಬಂದಿರುವ ಸಂಗತಿಯನ್ನೇ ಅರಿಯದೆ ನೀನು ಆ ಪಟವನ್ನು ಬಹುಶ್ರದ್ದೆಯಿಂದ ನೋಡುತ್ತಿರುವೆಯಲ್ಲವೆ? ಅದರಲ್ಲಿ ನಿನ್ನ ಮನಸ್ಸನ್ನು ಆಕರ್ಷಿಸುವಷ್ಟು ವಿಚಿತ್ರವಾದುದಾವುದಿರುವುದು?

ಚ೦ದ್ರ-ಈ ಪಟದಲ್ಲಿರುವ ಸರಸ್ವತೀ ವಿಗ್ರಹವು ಬಲು ಸೊಗಸಾಗಿರುವುದಾದರೂ, ಈ ವಿಗ್ರಹದ ಕೈಯಲ್ಲಿರುವ ತಾವರೆಯ ಪುಷ್ಪವನ್ನು ಕಂಡ ಬಳಿಕ ನನ್ನ ಮನಸ್ಸು ಮತ್ತೆಲ್ಲಿಯೂ ಚಲಿಸದೆ ಎಷ್ಟು ಹೊತ್ತು ನೋಡಿದರೂ ತೃಪ್ತಿಯೊಂದದಿರುವುದು.

ಗುರು-ಇದುವರೆಗೆ ನೀನು ಎಂದೂ ನೋಡದಿರುವ ಸುಂದರತರವಾದ ಆ ಸರಸ್ವತೀ ವಿಗ್ರಹಕ್ಕಿಂತ ಪ್ರತಿದಿನವೂ ನೀನು ಕೈಯಲ್ಲಿ ಹಿಡಿದು