ಈ ಪುಟವನ್ನು ಪ್ರಕಟಿಸಲಾಗಿದೆ
ನಾಲ್ಕನೆಯ ಪ್ರಕರಣ.
55

ಸರಿ. ನಾವು ಪರಲೋಕದಲ್ಲಿರಬೇಕಾದ ಕಾಲವಾದರೋ ಪರಿಮಿತಿಯಿಲ್ಲದುದಾಗಿರುವುದು. ನಾವು ಇರುವಂತೆಯೇ ಇದ್ದು ಯಾವಾಗಲೋ ಈ ಲೋಕವನ್ನು ಬಿಟ್ಟು ಪರಲೋಕವನ್ನು ಸೇರತಕ್ಕವರಾಗಿರುವೆವು. ಪರಲೋಕದಲ್ಲಿ ನಿತ್ಯಸುಖವನ್ನನುಭವಿಸಬೇಕಾದರೆ ಧರ್ಮವೊಂದೇ ನಮಗೆ ಸಾಧಕವಾದುದಲ್ಲದೆ ಮತ್ತೊಂದಿಲ್ಲವು. ನಾವು ಶಾಶ್ವತವಾದ ಪರಲೋಕಸುಖವನ್ನು ಅಪೇಕ್ಷಿಸುವೆವಾದರೆ ಈ ಲೋಕದಲ್ಲಿರುವ ತುಚ್ಛಗಳಾದ ನಿಮಿಷ ಸೌಖ್ಯಗಳಿಗೆ ಆಶೆಪಡದೆ ಎಂತಹ ಕಷ್ಟಗಳು ಸಂಭವಿಸಿದರೂ ಸೈರಿಸಿಕೊಂಡು ಧರ್ಮಮಾರ್ಗವನ್ನನುಸರಿಸಿ ನಡೆಯಬೇಕು.

ಚಂದ್ರ-ನಮಗೆ ಶಾಶ್ವತಸುಖವುಂಟಾಗುವಂತೆ ಸಹಾಯಕಗಳಾಗುವ ಧರ್ಮಗಳಾವುವೋ ಅವುಗಳನ್ನಾಚರಿಸುವ ಬಗೆಹೇಗೋ ಇವುಗಳನ್ನೆಲ್ಲಾ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು.

ಗುರು-ಧರ್ಮಸ್ವರೂಪನಾದ ಭಗವಂತನು ನಮಗೆ ಹೀಗೆಯೇ ನಡೆದುಕೊಳ್ಳಬೇಕೆಂದು ಉದ್ದೇಶಿಸಿ ವಿಧಿಸಿರುವ ಆಜ್ಞೆಗಳೇ ಧರ್ಮಗಳು. ಅಂತಹ ಧರ್ಮಗಳನ್ನು ಅನುಸರಿಸುವುದರಿಂದ ಸೌಖ್ಯವೂ, ಸೊರುವುದರಿಂದ ದುಃಖವೂ ಸಂಭವಿಸುವುವು. ನಾವು ಅನುಸರಿಸಬೇಕಾದ ಧರ್ಮಗಳೆಲ್ಲವೂ ನಾಲ್ಕು ಬಗೆಯಾಗಿರುವುದೆಂದು ಹೇಳಬಹುದು. ಮೊದಲನೆಯ ಬಗೆಯವು-ಸೃಷ್ಟಿಕರ್ತನಾದ ಪರಮೇಶ್ವರನ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳು, ಎರಡನೆಯಬಗೆಯವು-ನಮ್ಮ ದೇಹರಕ್ಷಣಾದಿಗಳಿಗೋಸುಗ ಸ್ವವಿಷಯವಾಗಿ ನಡೆದುಕೊಳ್ಳಬೇಕಾದ ಕ್ರಮಗಳು. ಮೂರನೆಯಬಗೆಯವು- ಭಗವತ್ಕುಟುಂಬದಲ್ಲಿ ನಮಗೆ ಸಹಜಾತಸಮಾನರಾಗಿರುವ ಮನುಜರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳು. ನಾಲ್ಕನೆಯಬಗೆಯವು-ಜೀವದಯಾಪರನಾದ ಈಶ್ವರನಿಂದ ನಿರ್ಮಿತಗಳಾದ ಇತರ ಜಂತುಗಳ ವಿಷಯದಲ್ಲಿ ನಾವು ನಡೆದುಕೊಳ್ಳಬೇಕಾದ ಕ್ರಮಗಳು.

ಚಂದ್ರ-ಮೊದಲು ಭಗವಂತನ ವಿಷಯದಲ್ಲಿ ನಾವು ನಡೆದುಕೊಳ್ಳ