ಈ ಪುಟವನ್ನು ಪ್ರಕಟಿಸಲಾಗಿದೆ
೨೨
ಚ೦ದ್ರಮತಿ.

ಬೇಕಾದ ಕ್ರಮಗಳನ್ನು ತಿಳಿಸಿ, ತರುವಾಯ ಉಳಿದ ಧರ್ಮಗಳನ್ನೂ ನನಗೆ ಕ್ರಮವಾಗಿ ತಿಳಿಸಬೇಕು.

ಗುರು- ಪರಮದಯಾಪರನಾದ ಈಶ್ವರನು ತನ್ನ ಕುಟುಂಬವಾದ ಮನುಷ್ಯಕೋಟಿಯು ವಾಸಮಾಡಲೋಸುಗ ಭೂಮಿಯೆಂಬ ದಿವ್ಯವಾದ ಮನೆಯನ್ನು ನಿರ್ಮಿಸಿ ಅವರ ಸುಖಕ್ಕೆ ಬೇಕಾಗುವ ಸಕಲಪದಾರ್ಧಗಳನ್ನೂ ಅಣಿಮಾಡಿರುವನು. ಅಂಗಡಿಯಲ್ಲಿರುವುವುಗಳನ್ನು ಕೊಂಡುಕೊಳ್ಳುವಂತೆಯೇ, ನಾವು ಸಸ್ಯಗಳಿಂದಲೂ, ಫಲವೃಕ್ಷಗಳಿಂದಲೂ ಭೋಜನ ಪದಾರ್ಥಗಳನ್ನು ಪಡೆಯುತ್ತಿರುವೆವು; ನಮಗೆ ಸೂರ್ಯಬಿಂಬವು ಎಣ್ಣೆಯಿಲ್ಲದೆಯೇ ಉರಿಯತಕ್ಕ ದೊಡ್ಡ ಬೆಳಕಾಗಿರುವುದು; ನದಿಯೇ ಮೊದಲಾದುವುಗಳು ನೀರನ್ನು ತುಂಬಿ ಇಟ್ಟು ಕೊಳ್ಳುವಂತಹ ದೊಡ್ಡ ಹರವಿಗಳಾಗಿರುವುವು. ನಮ್ಮ ಸುತ್ತಲಿರುವ ಸಮಸ್ತ ಜಂತುಗಳೂ, ಲತಾವೃಕ್ಷಾದಿಗಳೂ, ಲೋಹಗಳೂ ಸರ್ವಪ್ರಕಾರದಲ್ಲಿಯೂ ನಮಗೆ ಉಪಯುಕಗಳಾಗಿರುವುವು. ವಾಯುವು, ಬೆವರೇರಿರುವಾಗ ನಮಗೆ ತಣ್ಣಗಾಗುವಂತೆ ಬೀಸುತ್ತೆ ಸಂಬಳವಿಲ್ಲದ ಪರಿಚಾರಕನಾಗಿರುವುದು. ಮಧುರಧ್ವನಿಗಳನ್ನು ಮಾಡುವ ಕೋಗಿಲೆ ಮೊದಲಾದ ಪಕ್ಷಿಗಳು ಸಂಗೀತಪಾಠಕರಂತೆ ಕಿವಿಗಳಿಗೆ ಸಂತೋಷವನ್ನುಂಟುಮಾಡುತ್ತಿರುವುವು. ಇವೆಲ್ಲವೂ ಭಗವಂತನ ಅನುಗ್ರಹದಿಂದಲೇ ಲಭಿಸಿರುವುವಲ್ಲದೆ ಮತ್ತೆ ಬೇರೆಯಲ್ಲ. ಆದುದರಿಂದ ಇಷ್ಟು ಮಹೋಪಕಾರವನ್ನು ಮಾಡಿರುವ ಆ ಮಹಾನುಭಾವನ ವಿಷಯದಲ್ಲಿ ನಾವೆಷ್ಟು ಕೃತಜ್ಞರಾಗಿ ಆತನನ್ನು ಸ್ಮರಿಸಿದರೂ ಸಾಲದಿರುವುದು. ಸದ್ಗುಣ ವುಳ್ಳವರನ್ನು ಪ್ರೀತಿಸುವುದೂ ದುರ್ಗುಣವುಳ್ಳವರನ್ನು ದ್ವೇಷಿಸುವುದೂ ಲೋಕದಲ್ಲಿರುವ ಸಕಲರಿಗೂ ಸಹಜಗುಣಗಳಾಗಿರುವುವು. ಸಮಸ್ತ ಸದ್ಗುಣಗಳಿಗೂ ನೆಲೆಯಾಗಿದ್ದು ನಮ್ಮನ್ನು ನಿತ್ಯವೂ ಪುತ್ರವಾತ್ಸಲ್ಯದಿಂದ ಕಾಪಾಡುತ್ತಿರುವ ಆ ಕರುಣಾಕರನನ್ನು ನಾವು ಪ್ರೀತಿಸಬೇಕೆಂದು ಮತ್ತೆ ಹೇಳತಕ್ಕ ಆವಶ್ಯಕವಿಲ್ಲ. ನಮ್ಮ ಜನನಕ್ಕೆ ಕಾರಣಭೂತರಾದ ತಾಯ್ತಂದೆಗಳ ಆಜ್ಞೆಗೂ ನಮ್ಮನ್ನು ಪರಿಪಾಲಿಸುತ್ತೆ ನ್ಯಾಯವನ್ನು ತೀರಿಸುವ ರಾಜನ ಆಜ್ಞೆಗೂ ಅಧೀನರಾಗಿ ನಡೆದುಕೊಳ್ಳಬೇಕೆಂಬುದನ್ನು ನೀನೇ ಬಲ್ಲೆ ಯಲ್ಲವೆ ? ಹೀಗಿರುವಾಗ ನಮ್ಮೆಲ್ಲರ ಜನನಕ್ಕೂ ಆದಿ ಕಾರಣನಾಗಿ ನಮ್ಮ