ಈ ಪುಟವನ್ನು ಪ್ರಕಟಿಸಲಾಗಿದೆ
೨೪
ಚ೦ದ್ರಮತಿ.

ಅದುಕಾರಣ ನಾವು ಪ್ರತಿದಿನವೂ ತ್ರಿಕಾಲದಲ್ಲಿಯೂ ಭಕ್ತಿಯಿಂದ ಈಶ್ವರಾರಾಧನೆಯನ್ನು ಮಾಡುತ್ತಿರಬೇಕು.

ಚಂದ್ರ-ನಿಮ್ಮ ಹಿತಬೋಧೆಗಳಿಂದ ನನ್ನ ಅಜ್ಞಾನಾಂಧಕಾರವು ಪರಿಕೃತವಾಗಿ ಮುಕ್ತಿಮಾರ್ಗದ ಲಕ್ಷಣವನ್ನು ಸ್ವಲ್ಪಮಾತ್ರ ತಿಳಿದುಕೊಳ್ಳುವಂತಾಯಿತು. ಇನ್ನುಮೇಲೆ ಪ್ರತಿದಿನವೂ ತಮ್ಮ ಉಪದೇಶಾನುಸಾರವಾಗಿ ತ್ರಿಕರಣಶುದ್ಧಿಯಾಗಿಯೂ ಈಶ್ವರನನ್ನು ಉಪಾಸಿಸುತ್ತಿರುವೆನು.


ಐದನೆಯ ಪ್ರಕರಣ.


ಮರುದಿನ ಚಂದ್ರಮತಿಯು ಪಾಠವನ್ನೊಪ್ಪಿಸುತ್ತಿದ್ದಾಗ ನಡುನಡುವೆ ಎಡಗೈಯನ್ನು ಕೆರೆದುಕೊಳ್ಳುತ್ತೆ ಬೆರಲನ್ನು ಮುರಿದುಕೊಳ್ಳುತ್ತಿದ್ದಳು. ವಿದ್ಯಾಸಮುದ್ರನು ಅದನ್ನು ಕಂಡು ಪಾಠವೆಲ್ಲ ಮುಗಿಯುವವರೆಗೂ ಸುಮ್ಮನಿದ್ದು ತರುವಾಯ ಈ ಪ್ರಕಾರವಾಗಿ ಸಂಭಾಷಿಸುವುದಕ್ಕೆ ಮೊದಲು ಮಾಡಿದನು.

ಗುರು-ಮಗೂ! ಈದಿನ ನೀನೇಕೋ ಹಲವುಬಾರಿ ಕೈಬೆರಲುಗಳನ್ನು ಹಿಸುಕಿಕೊಳ್ಳುತ್ತಿದ್ದೆ. ಹೀಗೆಮಾಡಲು ಕಾರಣವೇನು?

ಚಂದ್ರ-ನನ್ನ ಬೆರಲಸಂದಿಯಲ್ಲಿ ಸಣ್ಣ ಸಣ್ಣ ಕಜ್ಜಿಗುಳ್ಳೆಗಳು ಎದ್ದು ಕೈಯೆಲ್ಲ ಬಲುನವೆಯಾಗಿರುವುದಾದುದರಿಂದ ಕೆರೆದುಕೊಳ್ಳುತ್ತಿದ್ದೆನು. ಅದರಲ್ಲಿಯೂ ನಡುಬೆರಲಸಂದಿನಲ್ಲಿ ಎದ್ದಿರುವ ಈ ಸಣ್ಣ ಗುಳ್ಳೆಯು ನನ್ನನ್ನು ಅತಿಯಾಗಿ ಬಾಧಿಸುತ್ತಿರುವುದು.

ಗುರು-ನಮಗೆ ವಿಧಾಯಕಗಳಾಗಿರುವ ಧರ್ಮಗಳನ್ನು ನೀನು ಮಾರಿರುವೆಯಾದುದರಿಂದ ನಿನಗೆ ಈ ಬಗೆಯ ಶಿಕ್ಷೆಯುಂಟಾಗಿರುವುದು,