ನೀನು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿದ್ದುದರಿಂದಲೇ ಈಗ ನಿನ್ನ ಬೆರಲಮೇಲೆ ಕಜ್ಜಿಯೆದ್ದಿರುವುದು. ಭಗವಂತನ ಆಜ್ಞಾರೂಪಗಳಾದ ಯಾವ ಧರ್ಮಗಳನ್ನು ಮಾರಿದರೂ, ಅದಕ್ಕೆ ಅನುಸಾರವಾಗಿ ತಕ್ಕ ಶಿಕ್ಷೆಗಳುoಟಾಗದಿರವು.
ಚಂದ್ರ-ಓದುವುದರಲ್ಲಿಯೇ ಆಸಕ್ತೆಯಾಗಿ ನಾನು ಇಂದಿನ ದಿನಗಳಲ್ಲಿ ನನ್ನ ದೇಹಸೌಖ್ಯವನ್ನು ಕುರಿತು ಅಷ್ಟುಶ್ರದ್ಧೆಯನ್ನು ವಹಿಸಲಿಲ್ಲ. ಆದರೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿರುವುದೂ ಧರ್ಮಾತಿಕ್ರಮಣವೆನಿಸಿಕೊಳ್ಳುವುದೇ?
ಗುರು-ನಾವು ಶುಚಿಯಾಗಿರಬೇಕಾದುದೂ ನಮಗೆ ವಿಧಾಯಕವಾದ ಕೃತ್ಯವೇ ಅಹುದು, ಇದರಲ್ಲಿ ಸಂಶಯವಿಲ್ಲ. ನೆನ್ನೆಯದಿನ ನಾನು ನಿನ್ನೊಡನೆ ಎರಡನೆಯ ಧರ್ಮವೆಂದು ತಿಳಿಸಿದ ಸ್ವವಿಷಯಿಕವಾದ ಧರ್ಮಗಳಲ್ಲಿ ಇದೊಂದಾಗಿರುವುದು. ಓದುವುದರಲ್ಲಿ ಶ್ರದ್ಧೆಯನ್ನು ವಹಿಸುವುದು ಮುಖ್ಯವೇ ಆದರೂ, ಅದಕ್ಕೋಸುಗ ದೇಹಾರೋಗ್ಯವನ್ನು ಕೆಡಿಸಿಕೊಳ್ಳಬಾರದು.
ಚಂದ್ರ-ಹಾಗಾದರೆ ಸ್ವವಿಷಯದಲ್ಲಿ ಪ್ರವರ್ತಿಸಬೇಕಾದ ಧರ್ಮಗಳಾವುವೋ ಅವುಗಳನ್ನತಿಕ್ರಮಿಸುವುದರಿ೦ದ ಆವಕೇಡುಗಳುಂಟಾಗುವುವೋ, ಅದನ್ನೆಲ್ಲ ನನ್ನಲ್ಲಿ ಅನುಗ್ರಹವಿಟ್ಟು ವಿವರಿಸಿರಿ
ಗುರು- ಶರೀರಸಂರಕ್ಷಣೆಗೋಸುಗ ನಾವು ಆಚರಿಸಬೇಕಾಗಿರುವ ಕೃತ್ಯವೆಲ್ಲ ಸ್ವವಿಷಯಕವಾದ ಧರ್ಮವೇ, ಅವುಗಳನ್ನು ಮಾರಿ ನಡೆಯುವುದರಿಂದ ಹಲವುಬಗೆಯ ವ್ಯಾಧಿಗಳು ಸಂಭವಿಸಿ ಬಹುಬಾಧೆಯುಂಟಾಗುವುದು. ದೇಹವು ಆರೋಗ್ಯದಶೆಯಲ್ಲಿರುವವರೆಗೆ ಮಾತ್ರವೇ ನಾವು ಆವ ಧರ್ಮ ಕಾರ್ಯವನ್ನಾದರೂ ಮಾಡುವುದಕ್ಕೆ ಸಮರ್ಥರಾಗಿರುವೆವು. ಅದಕ್ಕೆ ಸ್ವಲ್ಪ ವಿಘಾತವುಂಟಾಗುವ ಪಕ್ಷದಲ್ಲಿ, ಸಮಸ್ತಧರ್ಮಗಳೂ ತ್ಯಜಿಸಲ್ಪಡುವುವು. ಆದುದರಿಂದ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸೌಖ್ಯವನ್ನು ನೋಡಿಕೊಂಡು ದೇಹವನ್ನು ಕಾಪಾಡಿಕೊಳ್ಳುತ್ತಿರಬೇಕು. ದೇಹಾರೋಗ್ಯಕ್ಕೆ ಶುದ್ದವಾಯುವೂ, ನಿರ್ಮಲೋದಕವೂ, ಯುಕ್ತಾಹಾರವೂ, ಶುಭ್ರವಸ್ತ್ರ