ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಚ೦ದ್ರಮತಿ.

ಧಾರಣೆಯೂ, ನಿತ್ಯಸ್ನಾನವೂ, ಸುಖನಿದ್ರೆಯೂ, ಮುಖ್ಯಾಂಗಗಳಾಗಿರುವುವು.

ಚಂದ್ರ-ನಮ್ಮ ದೇಹಾರೋಗ್ಯಕ್ಕೆ ವಾಯುವೂ ಅಷ್ಟು ಆವಶ್ಯಕವಾದುದೇ?

ಗುರು-ನಾವು ಆಹಾರವಿಲ್ಲದೆಯೇ ಕೆಲದಿನಗಳು ಜೀವಿಸಬಲ್ಲೆವಾದರೂ, ವಾಯುವಿಲ್ಲದೆ ಒಂದು ನಿಮಿಷವಾದರೂ ಜೀವಿಸಲಾರೆವು. ನಾವು ಆಘ್ರಾಣಿಸುವ ವಾಯುವಿನಲ್ಲಿ ಒಂದುಭಾಗವೆಲ್ಲ ಪ್ರಾಣವಾಯುವು ಸೇರಿರುವುದು. ನಮ್ಮ ಉಚ್ಛಾಸ ನಿಶ್ವಾಸಗಳಿಂದ ಪ್ರಾಣವಾಯುವು ಒಳಕ್ಕೆ ಪ್ರವೇಶಿಸಿ, ರಕ್ತವನ್ನು ಶುದ್ಧಿಗೊಳಿಸುವುದರಿಂದ ಒಳಗಿರುವ ಕೆಟ್ಟ ಗಾಳಿಯು ಹೊರಕ್ಕೆ ಬರುವುದು. ಅಂತಹ ಗಾಳಿಯು ವಿಷಸ್ವಭಾವವನ್ನುಳ್ಳುದಾದುದರಿಂದ, ಜೀವಜಂತುಗಳು ಹೊರಕ್ಕೆ ಬಿಡುವ ನಿಶ್ವಾಸವಾಯುವನ್ನೇ ಆರಾದರೂ ಪ್ರತ್ಯೇಕವಾಗಿ ಸೇವಿಸುವಪಕ್ಷದಲ್ಲಿ, ಅಂತಹರು ಕೆಲನಿಮಿಷಗಳೊಳಗಾಗಿ ಮರಣವನ್ನು ಹೊಂದುವರು. ಆದುದರಿಂದ ಪ್ರತಿಮನುಷ್ಯನೂ ತಾನು ವಾಸಮಾಡುವಮನೆಗೂ, ಮಲಗುವಮನೆಗೂ ತಕ್ಕಷ್ಟು ಶುದ್ದವಾಯುವು ಪ್ರವೇಶಿಸುವಂತೆ ಅವಕಾಶವನ್ನುಂಟುಮಾಡಿರಬೇಕು. ಹೊಸವಾಯುವು ಹೆಚ್ಚಾಗಿಬರುವುದಕ್ಕೆ ಅವಕಾಶವಿಲ್ಲದಂತಹ ಒಂದು ಕಿರುಮನೆಯಲ್ಲಿ ಹಲವುಮಂದಿ ಮಲಗಿದಪಕ್ಷದಲ್ಲಿ, ಸ್ವಲ್ಪ ನಿಮಿಷಗಳೊಳಗಾಗಿ ಪ್ರಾಣವಾಯುವೆಲ್ಲ ಕಡಿಮೆಯಾಗಿ ಕಡೆಗೆ ಕೆಟ್ಟಗಾಳಿಯನ್ನೇ ಸೇವಿಸಬೇಕಾಗುವುದಾದುದರಿಂದ, ಬಹುರೋಗಗಳು ಸಂಭವಿಸುವುದಲ್ಲದೆ ಒ೦ದೊ೦ದುವೇಳೆ ಮರಣವೂ ಸಂಭವಿಸಬಹುದು. ಸಾಧಾರಣವಾಗಿ ನಮ್ಮವರಲ್ಲಿ ಕೆಲವರು ಹೆರಿಗೆಯ ಮನೆಗಳಿಗೆ ಒಳ್ಳೆಯ ಗಾಳಿಯನ್ನು ಬರಗೊಡದೆ ಬಾಗಿಲುಗಳನ್ನು ಮುಚ್ಚಿ ಬಿಡುವರಾದುದರಿಂದಲೇ ಹೆತ್ತ ಹತ್ತು ದಿನಗಳೊಳಗಾಗಿ ಮಗುವೋ ಬಾಣಂತಿಯೋ ಮರಣಕ್ಕೆ ಗುರಿಯಾಗುವರು.

ಚಂದ್ರ -ಮೊನ್ನೆ ನಾನಿಲ್ಲಿಗೆ ಹೊರಟುಬರುವಾಗ ಎಲ್ಲಿಯಾದರೂ ಹಾರಿಹೋದೀತೆಂಬ ಶಂಕೆಯಿಂದ ನನ್ನ ಗಿಳಿಯನುರಿಯನ್ನು ಪೆಟ್ಟಿಗೆಯಲ್ಲಿಟ್ಟು ಭದ್ರವಾಗಿ ಮುಚ್ಚಳವನ್ನು ಹಾಕಿಬಂದೆನು. ಒಳ್ಳೆಯ ಗಾಳಿಯು ಬಾರದಿದ್ದುದರಿ೦ದಲೆಯೋ ಏನೋ, ಆ ಮರಿಯು ನಾನು ಪೆಟ್ಟಿಗೆಯನ್ನು