ಈ ಪುಟವನ್ನು ಪ್ರಕಟಿಸಲಾಗಿದೆ
೫೦
ಚ೦ದ್ರಮತಿ.

ಯುವುದಕ್ಕಿಂತ ಕ್ರೂರ ಕೃತ್ಯವು ಮತ್ತೊಂದಿಲ್ಲ. ಕೆಲವರು ವಶುಗಳಿಗೆ ತಾವೇ ಜ್ಯೇಷ್ಠ ಪುತ್ರರಾದವರಂತೆ ಎಳೆಗರುಗಳಿಗಾದರೂ ಹಾಲನ್ನು ಸದೆ ಜ್ಯೇಷ್ಠಂಶವನ್ನು ತೆಗೆದುಕೊಂಡಂತೆ ಎಲ್ಲವನ್ನೂ ತಾವೇ ಕರೆದುಕೊಳ್ಳು ವರು; ಎಳೆಗರುಗಳು ಚೆನ್ನಾಗಿ ಹುಲ್ಲು ಮೇಯುವ ವರೆಗೂ ಅವುಗಳಿಗೆ ಬೇಕಾಗುವಷ್ಟು ಹಾಲನ್ನು ಬಿಟ್ಟು ಉಳಿದ ಹಾಲನ್ನು ಕರೆದುಕೊಳ್ಳುವುದೇ ಮಾನುಷಧರ್ಮವು, ಹಸು, ಎಮ್ಮೆ, ಎತ್ತು, ಆಡು, ಕುದುರೆ, ನಾಯಿ ಮೊದಲಾದ ಜಂತುಗಳು ನಮಗೆಷ್ಟೋ ಪ್ರಯೋಜನಕಾರಿಗಳಾಗಿರುವುವು. ಅವಿಲ್ಲದಪಕ್ಷದಲ್ಲಿ, ಈಗ ನಮಗಿರುವ ಸೌಖ್ಯ ದಲ್ಲಿ ಅರ್ಧವಾದರೂ ಇಲ್ಲದೆ ಹೋಗುತ್ತಿದ್ದಿತು. ಕೆಲ ದುರ್ಮಾರ್ಗರು ಕಪ್ಪೆ, ಆಡು ಮೊದಲಾದ ಸಾಧು ಜಂತುಗಳನ್ನು ನಿಷ್ಕಾರಣವಾಗಿ ಹಿಂಸಿಸುವರು. ಇಂಧವುಗಳಿಗೆ ಹಿಂಸೆ ಮಾಡುತ್ತಿದ್ದರೆ ದುಶ್ಚೇಷ್ಟೆಗಳು ಕ್ರಮಕ್ರಮವಾಗಿ ಅಭ್ಯಾಸವಾಗಿಹೋಗಿ ಮನುಷ್ಯರ ವಿಷಯದಲ್ಲಿಯೂ ಕ್ರೌರ್ಯವನ್ನು ತೋರಿಸುವಂತಹ ಸ್ವಭಾವವುಂಟಾಗುವುದು. ನಾವು ನಿರ್ಲಕ್ಷಮಾಡುವ ಸಣ್ಣ ಪ್ರಾಣಿಗಳನ್ನೂ ನಮ್ಮನ್ನು ಸೃಷ್ಟಿಸಿದ ಈಶ್ವರನೇ ಸೃಷ್ಟಿಸಿ, ನಮ್ಮ ಮೇಲಿಟ್ಟಿರುವಂತೆಯೇ ಅವುಗಳ ಮೇಲೆಯೂ ಪ್ರೇಮವನ್ನಿಟ್ಟು ಕಾಪಾಡುತ್ತಿರುವನು. ಆದುದರಿಂದ ಅವುಗಳನ್ನು ಬಾಧಿಸಿದರೆ ನಾವು ಭಗವಂತನ ವಿಷಯದಲ್ಲಿ ಮಹಾಪರಾಧವನ್ನು ಮಾಡಿದವರಾಗುವೆವು. ಈ ಕಾರಣದಿಂದಲೇ ಜೀವಕಾರುಣ್ಯವೆಂಬುದು ನಮಗೆ ವಿಧಾಯಕಗಳಾದ ಮುಖ್ಯ ಧರ್ಮಗಳಲ್ಲಿ ಒಂದೆನಬಹುದು ಆದರೆ ಮನುಷ್ಯರಲ್ಲಿ ದುಷ್ಟರನ್ನು ಶಿಕ್ಷಿಸುವುದು ಹೇಗೆ ಧರ್ಮವೋ ಹಾಗೆಯೇ ಜಂತು ಗಳಲ್ಲಿ ಹಾವು, ಚೇಳು, ಹುಲಿ ಮುಂತಾದುವುಗಳನ್ನು ಕೊಲ್ಲುವುದು ಧರ್ಮ ವಾಗಿರುವುದು. ಕೆಲವರು ಹೇನು, ತಿಗಣೆ, ಚೇಳು ಮೊದಲಾದುವು ಗಳಲ್ಲಿಯೂ ದಯೆಯುಳ್ಳವರಾಗಿ ಅವುಗಳನ್ನು ಕೊಲ್ಲದೆ ಬಿಟ್ಟು ಬಿಡುವರು. ಹಾಗೆ ಮಾಡುವುದು ಸರಿಯಾದುದಲ್ಲ. ನಮಗೆ ಬಾಧೆಯನ್ನುಂಟುಮಾಡುವ ಜಂತುಗಳನ್ನು ಅವಶ್ಯವಾಗಿ ನಾಶಮಾಡಲೇಬೇಕು. ಚೇಳು ಮೊದಲಾದುವು ಗಳನ್ನು ಕೊಲ್ಲುವುದು ದೋಷವಲ್ಲದಿದ್ದರೂ, ಅವುಗಳನ್ನು ಬಾಧೆಪಡಿಸಿ ಕೊಲ್ಲುವುದು ಮಾತ್ರ ಒಳ್ಳೆಯದಲ್ಲ. ಸಾಧ್ಯವಾದಷ್ಟು ಮಟ್ಟಿಗೆ ಅವು ಗಳನ್ನು ಬಹುಕಾಲ ಬಾಧಿಸದೆ ಜಾಗ್ರತೆಯಾಗಿ ಕೊಂದುಹಾಕಬೇಕು.