ಈ ಪುಟವನ್ನು ಪ್ರಕಟಿಸಲಾಗಿದೆ
ಹತ್ತನೆಯ ಪ್ರಕರಣ
೫೩

ವಿದ್ಯಾಸಮುದ್ರನನ್ನು ಹಲವುಬಗೆಯಾಗಿ ಸ್ತೋತ್ರಮಾಡಿ ಆತನಾವಾಗಲೂ ನೋಡಲಾರದಷ್ಟು ಧನವನ್ನೂ ಅಮೂಲ್ಯ ವಸ್ತುಗಳನ್ನೂ ಪಾರಿತೋಷಕವಾಗಿ ಇತ್ತು ಒಂದು ಅಗ್ರಹಾರವನ್ನು ಧಾರಾಪೂರ್ವಕವಾಗಿ ಕೊಟ್ಟನು. ಅರಸನ ಗುಣಗ್ರಹಣಶಕ್ತಿಗೂ ಔದಾರ್ಯ ವಿಶೇಷಕ್ಕೂ ವಿದ್ಯಾಸಮುದ್ರನು ವರ ಮಾನಂದಭರಿತನಾಗಿ ಯೋಗ್ಯವಾದ ರೀತಿಯಲ್ಲಿ ತನ್ನ ಕೃತಜ್ಞತೆಯನ್ನು ಸೂಚಿಸತಕ್ಕ ಕೆಲಮಾತುಗಳನ್ನಾಡಿದನು. ಅಷ್ಟರಲ್ಲಿ ಅರಸನು ಸಭೆಯನ್ನು ಬೀಳ್ಕೊಟ್ಟು ಸಮುಚಿತ ಪರಿವಾರದೊಡನೆ ಅಂತಃಪುರಕ್ಕೆ ಹೊರಟುಹೋದನು. ಮಂತ್ರಿ ಮೊದಲಾದ ಸಭಾಸದರೂ ತಂತಮ್ಮ ಮನೆಗಳಿಗೆ ಹಿ೦ತಿರುಗಿ ಹೊರಟುಹೋದರು.

ತರುವಾಯ ಚಂದ್ರಮತಿಯು ತಾನು ಕಲಿತ ವಿದ್ಯೆಯನ್ನು ದಿನಕ್ರಮವಾಗಿ ಅಭಿವೃದ್ಧಿ ಮಾಡಿಕೊಂಡು, ಪುಸ್ತಕದಲ್ಲಿ ಓದಿ ಕಲಿತುದಕ್ಕಿಂತ ಬುದ್ಧಿ ಬಲದಿಂದ ಹತ್ತರಷ್ಟು ಜ್ಞಾನವನ್ನು ಪಡೆದು ಎಂತಹ ಕಠಿನ ಪುಸ್ತಕವನ್ನಾದರೂ ಓದಿ ಅರ್ಥಮಾಡಿಕೊಳ್ಳುತ್ತೆ, ಎಂತಹ ತೊಡಕಾದ ಲೆಕ್ಕವನ್ನಾದರೂ ಆಲೋಚಿಸಿ ಸರಿಯಾದ ಉತ್ತರವನ್ನು ಕಂಡುಹಿಡಿಯುತ್ತೆ, ಮನೋಹರವಾದ ಲಲಿತ ಶೈಲಿಯ ಪದ್ಯಗಳನ್ನೂ ಹಾಡುಗಳನ್ನೂ ರಚಿಸುತ್ತೆ ಆವ ರಾಗವನ್ನಾದರೂ ಆಲಾಪನಮಾಡಿ ಕೇಳುವವರ ಮನಸ್ಸು ಕರಗುವಂತೆ ಮಾಡುತ್ತೆ, ಆವುದಾದರೂ ನೂತನವಿಷಯವನ್ನು ತೆಗೆದುಕೊಂಡು ಇಂಪಾಗಿ ಉಪನ್ಯಾಸ ಮಾಡುತ್ತೆ ಬಹುಸಮರ್ಥೆಯೆಂದು ಪ್ರಸಿದ್ಧಳಾದಳು. ಆಕೆಗಿದ್ದ ವಿದ್ಯಾ ವಿವೇಕಾದಿಗಳಿಗೆ ಪ್ರಕಾಶವನ್ನುಂಟುಮಾಡತಕ್ಕ ವಿನಯಾದಿ ಸದ್ಗುಣಗಳು ಆಕೆಯನ್ನು ಲೋಕದಲ್ಲಿರುವ ಸಮಸ್ತನಾರೀಮಣಿಗಳಲ್ಲಿಯೂ ಉತ್ತಮಳನ್ನಾಗಿ ಮಾಡಿದುವು. ಆದುದರಿಂದ ಎಲ್ಲಾ ಕಡೆಗಳಲ್ಲಿಯೂ ಈಕೆಯ ಗುಣ ಸಂಪತ್ತನ್ನೂ ವಿದ್ಯಾವಿಶೇಷವನ್ನೂ ಜನರೆಲ್ಲರೂ ಮನವಾರೆ ವರ್ಣಿಸಿ ವರ್ಣಿಸಿ ಹೇಳಿಕೊಳ್ಳುತ್ತಿದ್ದರು. ಆಕೆಯ ಕೀರ್ತಿಯು ಕ್ರಮಕ್ರಮವಾಗಿ ದೂರದೇಶಗಳಲ್ಲಿಯೂ ವ್ಯಾಪಿಸಿ ಎಲ್ಲರಿಂದಲೂ ಶ್ಲಾಘನೀಯವಾಯಿತು. ಇವಳಂತೆಯೇ ಕೋಸಲದೇಶಾಧೀಶನಾದ ತ್ರಿಶಂಕುಮಹಾರಾಜನ ಮಗನಾದ ಹರಿಶ್ಚಂದ್ರನ ಕೀರ್ತಿಯೂ ಸಮಸ್ತ ದೇಶಗಳನ್ನೂ ವ್ಯಾಪಿಸಿದ್ದಿತು. ಆಸೇತು ಹಿಮಾಚಲದವರೆಗಣ ದೇಶಗಳಲ್ಲೆಲ್ಲ ಅವನ ಧೈರ್ಯಶೌರ್ಯಾದಿಗಳೂ, ವಿನಯ