ಈ ಪುಟವನ್ನು ಪ್ರಕಟಿಸಲಾಗಿದೆ
೫೨
ಚಂದ್ರಮತಿ

ದುರ್ಗುಣಗಳೇ ಕಾರಣಗಳಾಗಿರುವುವು. ಲೋಕದಲ್ಲಿ ನಮ್ಮ ಶರೀರಗಳು ಸ್ಥಿರವಲ್ಲವಾದುದರಿಂದ ಬದುಕಿರುವ ನಾಲ್ಕು ದಿನಗಳಾದರೂ ನ್ಯಾಯಮಾರ್ಗದಲ್ಲಿ ಪ್ರವರ್ತಿಸುತ್ತೆ ಈ ಲೋಕದಲ್ಲಿ ಕೀರ್ತಿಯನ್ನೂ ಪರಲೋಕದಲ್ಲಿ ಶಾಶ್ವತವಾದ ಆನಂದವನ್ನೂ ಹೊಂದುವುದಕ್ಕೆ ಪ್ರಯತ್ನಿಸಬೇಕು.

ಚಂದ್ರ-ನೀವು ನನಗೆ ಮಾಡಿದ ಉಪದೇಶವು ಶಿಲಾಕ್ಷರಗಳಂತೆ ನನ್ನ ಮನಸ್ಸಿನಲ್ಲಿ ನಾಟಿರುವುದು. ನಾನಿದನ್ನೆಂದೂ ಮರೆಯದೆ ಯಾವಜ್ಜೀವವೂ ತಮ್ಮ ವಿಷಯದಲ್ಲಿ ಕೃತಜ್ಞತೆಯುಳ್ಳವಳಾಗಿ ಯುಕ್ತ ಮಾರ್ಗದಲ್ಲಿ ಪ್ರವರ್ತಿಸುವುದಕ್ಕೆ ಪ್ರಯತ್ನಿಸುವೆನು.

ಈ ಸಂಭಾಷಣೆಯು ಮುಗಿದ ಬಳಿಕ ಗುರುವೂ ಶಿಷ್ಯೆಯೂ ತೋಟದಿಂದ ಮನೆಗೆ ಹೊರಟುಹೋದರು. ಹೀಗೆಯೇ ವಿದ್ಯಾಸಮುದ್ರನು ಎರಡು ಮೂರು ವರ್ಷಗಳಲ್ಲಿ ಚಂದ್ರಮತಿಯನ್ನು ಸಮಸ್ತ ವಿದ್ಯೆಗಳಲ್ಲಿಯೂ ಪಾರಂಗತೆಯನ್ನಾಗಿ ಮಾಡಿದನು. ಈ ಕಾಲದಲ್ಲಿಯೇ ಚಂದ್ರಮತಿಯು ಪ್ರವೀಣರಾದ ಇತರ ಗುರುಗಳ ಬಳಿಯಲ್ಲಿ ಸಂಗೀತ ಮೊದಲಾದ ಸ್ತ್ರೀ ಜನೋಪ ಯುಕ್ತಗಳಾದ ವಿದ್ಯೆಯನ್ನೆಲ್ಲವನ್ನೂ ಕಲಿತುಕೊಂಡಳು.


ಹತ್ರನೆಯ ಪ್ರಕರಣ


ಉಶೀನರ ಮಹಾರಾಜನೊಂದಾನೊಂದುದಿನ ತನ್ನ ಮಗಳೊಡನೆ ಆಸ್ಥಾನಕ್ಕೆ ಬಂದು ಸಿಂಹಾಸನಾಸೀನನಾಗಿ, ವಿದ್ಯಾಸಮುದ್ರನನ್ನು ಕರೆಯಿಸಿ ಉಚಿತಾಸನದಲ್ಲಿ ಕುಳ್ಳಿರಿಸಿ, ಸಕಲವಿದ್ವಜ್ಜನರ ಇದಿರಾಗಿ ಚಂದ್ರಮತಿಯ ಸದ್ವಿದ್ಯೆಯನ್ನೆಲ್ಲ ಪರೀಕ್ಷಿಸುವುದಕ್ಕಾರಂಭಿಸಿದನು. ಅವಳು ಎಲ್ಲ ಪ್ರಶ್ನೆಗಳಿಗೂ ಸದುತ್ತರಗಳನ್ನು ಕೊಟ್ಟು ತನ್ನ ಬುದ್ಧಿಶಕ್ತಿಯನ್ನು ತೋರಿಸಲು, ಅವಳಾ ವಿದ್ಯಾ ವಿವೇಕಾದಿಗಳಿಗೂ ಗುರುವಿನ ಬೋಧನಾಶಕ್ತಿಗೂ ಸಭೆಯವರೆಲ್ಲರೂ ಆನಂದಾಶ್ಚರ್ಯಭರಿತರಾದರು. ತನ್ನ ಮಗಳಿಗೆ ವಿದ್ಯೋಪದೇಶವನ್ನು ಮಾಡಿ ನೀತಿವಂತೆಯನ್ನಾಗಿ ಮಾಡಿದುದಕ್ಕೋಸುಗ ಆಗ ರಾಜನು