ಕಪಟಸಂಕಟವನ್ನು ಸೂಚಿಸಿ ನರಲುತ್ತೆ ನಡುನಡುವೆ ಕುಳಿತುಕೊಳ್ಳುತ್ತೆ ತನ್ನ ಕಾಲು ನೋಯುತ್ತಿರುವುದೆಂದೂ, ನಾಲಗೆಯೊಣಗಿ ಹೋಗುತ್ತಿರುವುದೆಂದೂ ಹೇಳಿಕೊಂಡು ಹಲವು ಬಗೆಯಾಗಿ ಅವರನ್ನು ನಿಂದಿಸುತ್ತೆ, ಕಾಲುಗಳನ್ನೊತ್ತಬೇಕೆಂದೂ, ಒಳ್ಳೆಯ ನೀರನ್ನು ತಂದುಕೊಡಬೇಕೆಂದೂ, ಬಹುವಾಗಿ ಪೀಡಿಸತೊಡಗಿದನು. ಆದ೦ಪತಿಗಳಾತನ ಹಿಂಸೆಯನ್ನು ಸೈರಿಸಿಕೊಂಡಿದು ತಮ್ಮ ಕಷ್ಟವನ್ನು ಪರಿಗಣಿಸದೆ ಅವನನ್ನು ಉಪಚರಿಸತೊಡಗಿದರು. ಹೀಗೆಯೇ ಮುಂದೆಹೋಗುತ್ತೆ ಭೇತಾಳವಟವೆಂಬ ಒಂದು ಆಲದಮರದಬಳಿಗೆ ಹೋಗಿ ಆ ರಾತ್ರಿ ಅಲ್ಲಿಯೇ ವಿಶ್ರಮಿಸಿಕೊಳ್ಳಬೇಕೆಂದು ನಿಶ್ಚಯಿಸಿ, ನಕ್ಷತ್ರಕನಿಗೆ ಚಿಗುರಿನಲ್ಲಿ ಒಂದು ಹಾಸಿಗೆಯನ್ನು ಕಲ್ಪಿಸಿಕೊಟ್ಟು ತಾವು ಆ ಕಲ್ಲುನೆಲದಮೇಲೆಯೇ ಒಂದು ಬಟ್ಟೆಯನ್ನು ಹಾಸಿ ಮಲಗಿದರು. ಅತ್ಯಾಯಾಸಗೊಂಡಿದ್ದರಾದುದರಿಂದ ಚಂದ್ರಮತಿಯೂ ನಕ್ಷತ್ರಕನೂ ಜಾಗ್ರತೆಯಾಗಿ ನಿದ್ರೆಗೊಳಗಾದರು. ಹರಿಶ್ಚಂದ್ರನಾದರೋ ಮನಸ್ತಾಪದಿಂದ ನಿದ್ರೆಯಿಲ್ಲದೆ, ಕತ್ತಲೆಯಾಗಿದ್ದುದರಿಂದ ಖಡ್ಗವನ್ನು ಹಿಡಿದುಕೊಂಡು ಅವರಿಗೆ ಕಾವಲಾಗಿದನು. ಸುತ್ತಮುತ್ತ ವಾಸವಾಗಿದ್ದ ಕಳ್ಳರಲ್ಲೊಬ್ಬನು ಅವರನ್ನು ಕಂಡು, ಆಲದಮರದ ಅಡಿಯಲ್ಲಿ ಮಾರ್ಗಸ್ಥರಾರೋ ಮಲಗಿರುವರೆಂದು ತನ್ನ ಸಮೂಹಕ್ಕೆ ತಿಳಿಸಲು ಅವರೆಲ್ಲರೂ ಒಂದುಗೂಡಿ ಬಂದು ಬಟ್ಟೆ ಬರೆಗಳನ್ನು ಅಪಹರಿಸಬೇಕೆಂದು ಪ್ರಯತ್ನಿಸಿದರು. ಹರಿಶ್ಚಂದ್ರನು ಆ ದಾರಿಹೋಕರನ್ನು ದೂರದಲ್ಲಿಯೇ ನೋಡಿ, ಅವರ ಉದ್ದೇಶವನ್ನೂಹಿಸಿ, ಅವರನ್ನಿದಿರಿಸಿ ಹೋರಾಡಿ ಅವರಲ್ಲಿ ಕೆಲವರನ್ನು ಸಂಹರಿಸಿಯೂ, ಕೆಲವರನ್ನು ಗಾಯವಡೆಯಿಸಿಯೂ ಓಡಿಸಿಬಿಟ್ಟನು. ಸ್ವಲ್ಪ ಹೊತ್ತಿನೊಳಗಾಗಿ ಮೇಘಗಳೆಲ್ಲ ಒಟ್ಟುಗೂಡಿ ಕೊಪ್ಪರಿಗೆಗಳಿ೦ದ ಸುರಿದಂತೆ ದೊಡ್ಡ ಮಳೆಯನ್ನು ಕರೆಯಲು ನಕ್ಷತ್ರಕನು ಕಟಕ್ಕನೆ ಬೆಚ್ಚಿ ಎದ್ದನು. ಹರಿಶ್ಚಂದ್ರನೂ ಚಂದ್ರಮತಿಯೂ ಆತನನ್ನು ಧೈರ್ಯಗೊಳಿಸಿ, ಗಿಡದ ಬುಡದಲ್ಲಿ ಮಲಗಿಸಿ ತಮ್ಮ ಬಟ್ಟೆಗಳನ್ನು ಆತನಿಗೆ ಹೊದೆಯಿಸಿ, ಒಬ್ಬೊಬ್ಬರು ಸ್ವಲ್ಪ ಸ್ವಲ್ಪ ಕಾಲ ಲೋಹಿತಾಸ್ಯನನ್ನು ನನೆಯದಂತೆ ಎತ್ತಿ ಕೊಳ್ಳುತ್ತೆ ಮಳೆಯಲ್ಲಿ ನೆನೆಯುತ್ತೆ ಬೆಳಕು ಹರಿಯುವವರೆಗೂ ಬಹು ಶ್ರಮಪಟ್ಟರು. ಮತ್ತೊಂದುದಿನ ಪ್ರಯಾಣವು ಅರ್ಧಕಳೆದಿರುವಾಗ
ಪುಟ:ಚಂದ್ರಮತಿ.djvu/೭೦
ಈ ಪುಟವನ್ನು ಪ್ರಕಟಿಸಲಾಗಿದೆ
ಹನ್ನೆರಡನೆಯ ಪ್ರಕರಣ,
೬೩