ಈ ಪುಟವನ್ನು ಪ್ರಕಟಿಸಲಾಗಿದೆ

ಹದಿಮೂರನೆಯ ಪ್ರಕರಣ.


ರಿಶ್ಚಂದ್ರನು ಕಾಶೀಪಟ್ಟಣವನ್ನು ಸೇರಿದ ತರುವಾಯ ಕೆಲದಿನಗಳು ಪ್ರತಿದಿನವೂ ಮಣಿಕರ್ಣಿಕಾದಿ ಘಟ್ಟಗಳಲ್ಲಿ ಗಂಗಾಸ್ನಾನವನ್ನು ಮಾಡುತ್ತೆ, ವಿಶ್ವೇಶ್ವರನನ್ನು ಭಜಿಸುತ್ತೆ, ಇತರ ಮಹಾಸ್ಥಳಗಳನ್ನು ಸೇವಿಸಿ ಕಾಲಯಾಪನೆ ಮಾಡುತ್ತಿದ್ದನು. ಅತ್ತ ವಿಶ್ವಾಮಿತ್ರನೂ ರಾಜ್ಯವನ್ನು ಪೂರ್ವದ ಮಂತ್ರಿಗಳ ವಶದಲ್ಲಿಯೇ ಬಿಟ್ಟು, ಪ್ರಜೆಗಳನ್ನು ನ್ಯಾಯವಾಗಿ ಪರಿಪಾಲನ ಮಾಡುವಂತೆ ನಿಯಮಿಸಿ, ತಾನು ವೇಷಾಂತರದಿಂದ ಹರಿಶ್ಚಂದ್ರನ ಚರ್ಯೆಗಳನ್ನು ಪರೀಕ್ಷಿಸುತ್ತೆ ಆತನ ಹಿಂದೆಯೇ ಇದ್ದು, ಸಮಯ ದೊರೆತಾಗಲೆಲ್ಲ ರಹಸ್ಯವಾಗಿ ಶಿಷ್ಯನಿಗೆ ಕರ್ತವ್ಯವನ್ನು ಬೋಧಿಸುತ್ತೆ, ಬಗೆಬಗೆಯ ಮಾಯೋಪಾಯಗಳನ್ನು ಮಾಡಿ ಹೇಗಾದರೂ ಹರಿಶ್ಚಂದ್ರನಿಂದ ಅಸತ್ಯವನ್ನಾಡಿಸಬೇಕೆಂದು ನಿಶ್ಚಯಿಸಿಕೊಂಡು ಕಾಶೀಪಟ್ಟಣದಲ್ಲಿಯೇ ರಹಸ್ಯವಾಗಿ ಅಡಗಿದ್ದನು. ಹೀಗಿರುವಾಗ ಒಂದುದಿನ ನಕ್ಷತ್ರಕನು ಹರಿಶ್ಚಂದ್ರನನ್ನು ನೋಡಿ "ಎಲೈ, ಅರಸೇ! ನೀನು ಹೇಳಿದ ಒಂದು ತಿಂಗಳು ಗಡುಬದಲ್ಲಿ ಒಂದೆರಡು ದಿನಗಳು ಮಾತ್ರ ಉಳಿದಿರುವುದು, ನೀನಿದುವರೆಗೂ ನಮಗೆ ಒಂದು ಹಣವನ್ನಾದರೂ ಕೊಡಲಿಲ್ಲ. ಹಣವನ್ನು ಕೊಡಲಾರೆನೆಂದು ನೀನು ಮೊದಲೇ ಹೇಳಿದ್ದಪಕ್ಷದಲ್ಲಿ ನಾನಿದುವರೆಗೂ ತಪಸ್ಸಂಧ್ಯಾದ್ಯನುಷ್ಠನಗಳನ್ನು ಬಿಟ್ಟು ನಿನ್ನ ಹಿಂದೆ ಕಾಡುಮೇಡುಗಳಲ್ಲಲೆದು ಆಯಾಸ ಪಡುತ್ತೆ ವ್ಯರ್ಥಕಾಲಕ್ಷೇಪವನ್ನು ಮಾಡುತ್ತಿರಲಿಲ್ಲ. ಈಗಲಾದರೂ ನಾನು ಹಣವನ್ನು ಕೊಡಲೊಪ್ಪಲಿಲ್ಲ ಎಂದು ಹೇಳಿಬಿಡು. ಇನ್ನು ನಾನು ನಿನ್ನನ್ನು ನಿಂದಿಸಿ ಕಠಿನೋಕ್ತಿಗಳನ್ನಾಡದಿದ್ದರೆ ಮಹಾನುಭಾವರಾದ ನಮ್ಮ ಗುರುಗಳ ಕೋಪಕ್ಕೆ ಪಾತ್ರನಾಗಬೇಕಾದೀತು! ಪತ್ನಿಯನ್ನೋ ಪುತ್ರನನ್ನೋ ಮಾರಿ ಜಾಗ್ರತೆಯಾಗಿ ನಮ್ಮ ಧನವನ್ನು ಕೊಟ್ಟು ಕಳುಹಿಸಿಬಿಡು" ಎಂದು ಮುಂತಾಗಿ ಬಹು ವಿಧಗಳಿಂದ ಬಿರುಮಾತುಗಳನ್ನಾಡಿದನು. ಹರಿಶ್ಚಂದ್ರನಿಗೆ ದಿಕ್ಕೇ ತೋರದಂತಾಗಲು ಅವನು ಮರುಮಾತನ್ನಾಡದೆ ನೆಲವನ್ನು ನೋಡುತ್ತೆ ತಲೆಬಾಗಿಸಿಕೊಂಡು ಆತನ ಪರುಷವಾಕ್ಯಗಳನ್ನೆಲ್ಲ