೧೦ಳಿ ಚಂದ್ರಶೇಖರ. ಪುನಃ ಬದುಕಿಕೊಂಡು ಎದ್ದು ಬರುವನು-ಗೋರಿ ಮಾಡಿದರೂ ಭೂಮಿಯನ್ನು ಸೀಳಿ ಕೊಂಡು ಹೊರಗೆ ಬರಬಹುದಾಗಿ ಅವನನ್ನು ಬೆಂಕಿಯಲ್ಲಿ ಸುಡಬೇಕೆಂದು ಮೊದಲು ಸಿದ್ಧಾಂತವಾಡಿಕೊಂಡನು. ಏತಕ್ಕೆಂದರೆ, ಇಂಗ್ಲೀಷರಲ್ಲಿ ಅನೇಕ ಫಾಸ್ಟರಗಳು ಇರು ವರು. ಹೀಗೆ ಯೋಚಿಸಿಕೊಳ್ಳುತ್ತಿದ್ದ ಹಾಗೆ ಪ್ರತಾಪನು ಅದೇ ಹಡಗಿನಲ್ಲಿ ಮಾಂಗೀರಿಗೆ ಹಿಂದಿರುಗಿ ಬಂದನು. ಪ್ರತಾಪನು ಕೋಟೆಗೆ ಹೋದನು, ಅಲ್ಲಿ ನೋಡಲಾಗಿ ನಬಾಬನು ಇಂಗ್ಲೀಷರ ಸಂಗಡ ಯುದ್ಧ ಮಾಡುವುದಾಗಿ ಹೇಳಿ, ಯುದ್ಧಕ್ಕೆ ಯತ್ನಗಳು ನಡೆಯುತಲಿದ್ದುದನ್ನು ನೋಡಿದನು. ಪ್ರತಾಪನಿಗೆ ಆಹ್ಲಾದವುಂಟಾಯಿತು, ಅವನು, ನವಾಬನು ಈ ಅಸುರರನ್ನು ಬಂಗಾಳೆಯಿಂದ ಹೊರಡಿಸಲಾರನೆ ? ಫಾಸ್ಟಂನು ಸಿಕ್ಕಲಾರನೆ ? ಎಂದು ಯೋಚಿಸಿ ಕಂಡನು. ಯಾರಿಗೆ ಎಷ್ಟು ಶಕ್ತಿಯುಂಟೋ, ಅವರು ಈ ಕಾರ್ಯದಲ್ಲಿ ನವಾಬನಿಗೆ ಅಪ್ನಷ್ಟು ಸಹಾಯಮಾಡುವುದು ಅವರಿಗೆ ಕರ್ತವ್ಯವೆಂದಂದುಕೊಂಡು, ಅಳಲು ಕೂಡ ಸಮು ದ್ರಕ್ಕೆ ಸೇತುವೆಯನ್ನು ಕಟ್ಟಿತು ಎಂದು ಹೇಳಿಕೊಂಡನು. ಅನಂತರ ಮನಸ್ಸಿನಲ್ಲಿ, ನನ್ನಿಂದ ಏನೂ ಸಹಾಯವಾಗಲಾರದೆ ? ನಾನೇನು ಮಾಡ ಎಲ್ಲೆ ? ಎಂದು ಯೋಚಿಸಿದನು. ಅನಂತರ, ನನಗೆ ಸೈನವಿಲ್ಲ-ಬರೇ ದೊಣ್ಣೆಯವರು ಮಾತ್ರ ಇದ್ದಾರೆ-ಕಳ್ಳರೂ ಇದ್ದಾರೆ ಅವರಿಂದ ಏನು ಕಾರ್ಯವಾದೀತು ? ಎಂದು ಯೋಚಿಸಿದನು. - ಪುನಃ, ಕಳ್ಳರಿಂದ ವುತ್ತಾವತಾರ್ದುವಾಗದಿದ್ದರೂ ಅವರು ಊಟಮಾಡಬಲ್ಲರು. ಯಾವ ಗ್ರಾಮದವರು ಇಂಗ್ಲೀಷರಿಗೆ ಸಹಾಯವನ್ನು ಮಾಡುವರೋ ಆ ಗ್ರಾಮವನ್ನು ಊಟಮಾಡಬಲ್ಲೆನು, ಎಲ್ಲಿ ಇಂಗ್ಲೀಷರಿಗೆ ಸರಬರಾಯಿ ಹೋಗುವುದನ್ನು ನೋಡುವೆ ನೋ ಅಲ್ಲಿ ಆ ಸರಬರಾಯಿ ಸಾಮಾನುಗಳನ್ನು ಊಟಮಾಡಬಲ್ಲೆನು, ಎಲ್ಲಿ ಇಂಗ್ಲಿಷರ ಸಾ ಮಾನು ಕಣ್ಣಿಗೆ ಬೀಳುವುದೋ ಅಲ್ಲಿ ದಸ್ಯುವೃತ್ತಿಯನ್ನ ವಲಂಬನಮಾಡಬಲ್ಲೆನು. ಇಷ್ಟು ಮಾಡಿದರೆ ನವಾಬನಿಗೆ ಬಹಳ ಸಹಾಯಮಾಡಿದಹಾಗಾಗುವುದು, ಮುಂದೆ ನಡೆಯುವ ಯುದ್ಧದಲ್ಲಿ ಶತ್ರುಗಳನ್ನು ವಿನಾಶಮಾಡುವುದಕ್ಕೆ ಸೈನ್ಯವನ್ನು ಬೆನ್ನಟ್ಟಿಕೊಂಡು ಹೋಗಿ ಅದರ ಆಹಾರಕ್ಕೆ ವಿಘಾತವನ್ನು ಮಾಡುವುದು ಮುಖ್ಯವಾದ ಉಪಾಯವಾಗಿರು ವುದು, ಎಷ್ಟುದೂರ ಕೈಲಾಗುವುದೊ ಅಹ್ಮರವಟ್ಟಗೆ ಮಾಡಿಯೇ ತೀರುವೆನು, ಎಂದು ಯೋಚಿಸಿದನು. ಅನಂತರ, ನಾನೇನಕ್ಕೆ ಇಷ್ಟು ಮಾಡಬೇಕು ? ಮಾಡುವುದಕ್ಕೆ ಅನೇಕ ಕಾರಣಗ ೪ವೆ. ಮೊದಲನೆಯದು, ಇಂಗ್ಲೀಷರು ಚಂದ್ರಶೇಖರನಿಗೆ ಸರ್ವನಾಶವನ್ನುಂಟುಮಾಡಿ
ಪುಟ:ಚಂದ್ರಶೇಖರ.djvu/೧೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.