ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಚಂದ್ರಶೇಖರ. ಅವಳು ಈಜಿಕೊಂಡು ಹೋದಳು, ಈಜುವಾಗ ರಕ್ತವು ಬಾಯಿಗೆ ಹೋಗಲಾರಂಭ ವಾಯಿತು, ಮಹಾಕಾರ ಪುರುಷನೂ ಅವಳೊಂದಿಗೆ ನದಿದು ರಕ್ಷದಮೇಲೆ ನಡೆದು ಕೊಂಡು ಹೋಗುತಲಿದ್ದನು, ಆದರೆ ಅವನು ಮುಣುಗಿಹೋಗಲಿಲ್ಲ. ಹೋಗುತ್ತ ಮಧ್ಯೆಮಧ್ಯೆ ದುರ್ವಾಸನೆಯುಳ್ಳ ಕೊಳೆತುಹೋದ ಶವಗಳು ತೇಲಿಕೊ ಡುಬಂದು ಅವಳಮೈಗೆ ತಗುಲುತಲಿದ್ದವು. ಹೀಗಾಗುತ್ತ ಅವಳು ಈಜಿಕೊಂಡು ಹೋಗಿ ಆಚೆ ಯ ದಡವನ್ನು ಹತ್ತಿ ಅಲ್ಲಿ ಬಿರುಗಣ್ಣಿನಿಂದ ನೋಡಿ, ರಕ್ಷಣೆಮಾಡು ! ರಕ್ಷಣೆಮಾಡು ! ಎಂದು ಕೂಗಿಕೊಂಡಳು. ಕಣ್ಣುಗಳಿದಿರಿಗೆ ಯಾವುದೊ ಒಂದು ಕಂಡುಬಂದಿತು. ಅದಕ್ಕೆ ತುದಿಮೊದಲಿಲ್ಲ, ಆಕಾರವಿಲ್ಲ, ವರ್ಣವಿಲ್ಲ, ಹೆಸರಿಲ್ಲ. ಅಲ್ಲಿ ಬೆಳಕು ಬಹಳ ಸ್ವಲ್ಪ, ಅದು ಅತ್ಯಂತ ಉತ್ತಷ್ಟವಾಗಿ ಕಣ್ಣಿಗೆ ಗೋಚರವಾಗುತ್ತಲೆ ಕಣ್ಣುಗ ೪ರಡೂ ಸಿಡಿದುಹೋಗಲಾರಂಭವಾದವು. ವಿಷಸಂಯೋಗದಿಂದ ಹೇಗೆ ಬ್ಯಾಲೆಯುಂಟಾ ಗುವುದೊ ಅವಳ ಕಣ್ಣುಗಳು ಹಾಗೆ ಉರಿಯಲಾರಂಭಿಸಿದವು. ಮೂಗಿಗೆ ಬಹಳ ಅಸ ಹೃವಾದ ಪೂತಿಗಂಧವು ಪ್ರವೇಶವಾಗಿ ಮೂಗು ಮುಚ್ಚಿಕೊಂಡರೂ ಅವಳು ಉನ್ಮ ತ್ರೆಯ ಹಾಗಾಗುವಳು, ಕಿವಿಗಳಲ್ಲಿ ಅತಿಕಠೋರವಾದ ಕರ್ಕಶವಾದ ಭಯಾವಹ ವಾದ ಶಬ್ದಗಳು ಒಂದೇ ಕಾಲದಲ್ಲಿ ಪ್ರವೇಶಮೂಡಿದವು, ಹೃದಯ ವಿದಾರಕವಾದ ಆರ್ತನಾದ, ಪಿಶಾಚಿಗಳ ನಗು, ವಿಕಟವಾದ ಹುಂಕಾರ, ಪರ್ವತ ವಿದೀರ್ಣವಾಗುವ ಧ್ವನಿ, ಅಶನಿಪತನದ ಶಬ್ದ, ಶಿಲಾವರ್ಸಣ, ಜಲ ಕಲ್ಲೋಲ, ಅಗ್ನಿ ಗರ್ಜನ, ಮುಮರ್ಷನ ಕಂದನೆ-ಇವೆಲ್ಲಾ ಬಂದೇಕಾಲದಲ್ಲಿ ಕೇಳಿಸಿ ಕಿವಿಗಳು ಒಡೆದು ಹೋಗುವಹಾಗಾ ದವು. ಇದಿರಿಗೆ ಕ್ಷಣಕ್ಷಣಕ್ಕೂ ಭೀಷಣವಾಗಿ ಬೀಸುತಲಿದ್ದ ವಾಯುವು ಅವಳ ಮೈಯನ್ನೆಲ್ಲಾ ಬೆಂಕಿಯ ಉರಿಯಿಂದ ಸುಡುತಲಿತ್ತು, ಒಂದೊಂದು ತಡವೆ ಚಳಿಯು ಶತಸಹಸ್ರ ಭರ್ಜಿಗಳಿಂದ ಆಘಾತವಾಗುವಹಾಗೆ ಇರಿದು ಮೈಯನ್ನೆಲ್ಲಾ ಭಿನ್ನ ಭಿನ್ನವಾಗಿ ಮಾಡುತಲಿತ್ತು, ಆಗ ಕೈವಲಿನಿಯು, ಪ್ರಾಣ ಹೋಗುತ್ತದೆ, ರಕ್ಷಣೆ ಮಾಡು ಎಂದ ಬಾಯಿಬಿಟ್ಟು ಅರಿತಿಕೊಂಡಳು. ಆಗ ಬಂದು ಅಸಹ್ಯವಾದ ಕೊಳತ ವಾಸನೆಯುಳ್ಳ ಹುಳುವು ಬಾಯಿಯೊಳಗೆ ಪ್ರವೇಶಮಾಡಲೆತ್ನಿ ಸುತಲಿತ್ತು, ಶೈವಲಿನಿಯು ಪುನಃ, ರಕ್ಷಿ ಸು, ! ಇದು ನರಕ ! ನಾನು ಉದ್ಧಾರವಾಗಲುಸಾದವಿಲ್ಲವೆ ? ಎಂದು ಕೂಗಿದಳು. ಮಹಾಪುರುಷನು, ಉಪಾದುವುಂಟು ಎಂದನು. ಶೈವಲಿನಿಯು ಸಪ್ಪು ವಸ್ಥೆ ಯಲ್ಲಿ ಕೂಗಿಕೊಂಡದ್ದುದರಿಂದ ಅವಳ ಮೋಹ ನಿದೆ)ಯು ಭಂಗವಾಗಿ ಎಚ್ಚರವಾದಳು. ಆದರೆ ಆಗಲೂ ಭಾyಂತಿಯು ಹೋಗಿರಲಿಲ್ಲ. ಕಲ್ಲು ಬಿನ್ನನ್ನು ಒತ್ತಿ ತರಿಯುತಲಿತ್ತು. ಅವಳು ಆ ಭ್ರಾಂತಿಯಿಂದ ಎಚ್ಚರವಾಗಿದ್ದರೂ, ನನಗೇನಾದೀತೊ ! ನನಗೆ ಉದ್ಧಾರಕ್ಕೆ ಮಾರ್ಗವಿಲ್ಲವೆ ! ಎಂದು ಕೂಗುತಲಿದ್ದಳು. ಗುಹೆಯ ಮಧ್ಯದಿಂದ ಗಂಭೀರವಾದ ಧ್ವನಿಯಿಂದ ಇದೆ' ಎಂದು ಹೇಳಿದ ಮಾತು ಕಿವಿಗೆ ಬಿದ್ದಿತು.