ನಾಲ್ಕನೆಯ ಭಾಗ. ೧೦೯ ಇದೇನಿದು ! ಶೈವಲಿನಿಯು ನಿಜವಾಗಿಯೂ ನರಕದಲ್ಲಿ ಬಿದ್ದಿದ್ದಳೆ ? ಕೈವಲಿನಿದು ವಿಸ್ಮಿತೆಯಾಗಿ, ವಿಮುಗ್ಗೆಯಾಗಿ, ಭೀತಿಗೊಂಡ ಚಿತ್ರವುಳ್ಳವಳಾಗಿ, ಉಪಾಯವೇನು ? ಬೇಗನೆ ಹೇಳು! ಎಂದು ಕೂಗಿದಳು. ಗುಹೆಯಲ್ಲಿ ಪುನಃ, ಹನ್ನೆರಡು ವರುಷ ವ್ರತವನ್ನು ಮಾಡಬೇಕೆಂದು ಶಬ್ದವಾ ಬಿತು. ಇದೇನು ದೈವವಾಣಿಯೆ ! ಶೈವಲಿನಿಯು ಕಾತರೆಯಾಗಿ, ಆ ವ್ರತವು ಯಾವುದು ? ಯಾರು ನನಗೆ ಅದನ್ನು ಹೇಳಿಕೊಡುವವರು ? ಎಂದು ಹೇಳಿದಳು. - ಉತ್ತರ-ನಾನು ಹೇಳಿಕೊಡುವೆನು. ಕೈವಲಿನೀ-ನೀನು ಯಾರು ? ಉತ್ತರ- 'ತವನ್ನು ಗ್ರಹಣಮಾಡು. ಶೈವಲಿನೀ -ಏನುಮಾಡಬೇಕು ? ಉತ್ತರ-ನೀನು ಉಟ್ಟಿರುವ ಉತ್ತಮವಾದ ಉಡುಪನ್ನು ತೆಗೆದುಹಾಕಿ ನಾನು ಕೂಡುವ ಬಟ್ಟೆಯನ್ನು ಟ್ಟುಕೊ, ಕೈನೀಡು. ಶೈವಲಿನಿಯು ಕೈನೀಡಿದಳು. ಅವಳು ನೀಡಿದ ಆ ಕೈಯೊಳಗೆ ಒಂದು ಬಟ್ಟೆಯು ಬಿದ್ದಿತು. ಕೈವಲಿನಿಯು ಮೊದಲುಟ್ಟಿದ್ದ ಬಟ್ಟೆಯನ್ನು ಬಿಚ್ಚಿ ಹಾಕಿ, ಆ ಹೊಸಬಟ್ಟೆ ಯನ್ನುಟ್ಟು, ಇನ್ನೇನು ಮಾಡಬೇಕೆಂದು ಕೇ 'ದಳು. ಉತ್ತರ.-ನಿಮ್ಮ ಅತ್ತೆಯವನೆ ಎಲ್ಲಿದೆ ? ಸೈನಲಿನೀವೇದಗ್ರಾಮದಲ್ಲಿ-ಅಲ್ಲಿಗೆ ಹೋಗಬೇಕೇನು ? ಉತ್ತರ-ಹಣದು-ಅಲ್ಲಿಗೆ ಹೋಗಿ ಊರುಮುಂದೆ ಬಂದು ಪರ್ಣಕುಟೀರವನ್ನು ಕಟ್ಟಿಕೊಳ್ಳಬೇಕು. ಕೈವಲಿನೀ-ಮತ್ತೇನು ? ಉತ್ತರ - ನೆಲದಮೇಲೆ ಮಲಗಬೇಕು. ಶೈವಲಿನೀ-ಮತ್ತೇನು ? ಉತ್ತರ -ಫಲಮೂಲಗಳ ಹೊರತು ಮತ್ತೇನನ್ನೂ ತಿನ್ನ ಕೂಡದು, ಅದೂ ಒಂದು ಹೊತ್ತು ಹೊರತು ಎರಡು ಹೊತ್ತು ಕೂಡದು. ಶೈವಲಿನೀ-ಮತ್ತೇನು ? ಉತ್ತರ-ಬಟೆಯನ್ನು ಧಾರಣಮಾಡಬೇಕು. ಕೈವಲಿನೀ -ಮತ್ತೇನು ? ಉತ್ತರ-ಪ್ರತಿದಿನವೂ ಸಾದುಂಕಾಲವಾದಮೇಲೆ ಗ್ರಾಮದೊಳಗೆ ಭಿಕ್ಷಾರ್ಥವಾಗಿ ಹೋಗಿ ಭಿಕ್ಷೆಯನ್ನು ಬೇಡುವಾಗ ನಿನ್ನ ಪಾಪಕೃತ್ಯಗಳನ್ನು ಕೂಗಿ ಹೇಳಿ ಕೊಳ್ಳಬೇಕು ಕೈವಲಿನೀ-ನನ್ನ ಪಾಪವು ಹೇಳಿ ಕೊಳ್ಳತಕ್ಕ ಪಾಪವಲ್ಲ ! ಮತ್ತೇನೂ ಪ್ರಯತೆ. ತೃವಿಲ್ಲವೆ ?
ಪುಟ:ಚಂದ್ರಶೇಖರ.djvu/೧೧೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.