೧೧೬ ಚಂದ್ರಶೇಖರ. ಒದೆಯನ್ನು ಒದ್ದು ಅವಳನ್ನು ತಲೆಕೆಳಗಾಗಿ ಬಿಸಾಟವು. ಅವಳು ಸುತ್ತಿ ಸುತ್ತಿ ಬೀಳಲಾರಂಭಿಸಿದಳು. ಕ್ರಮವಾಗಿ ಸುತ್ತುವ ವೇಗವು ಹೆಚ್ಚಾಗುತ್ತಎಂದು ಕಡೆಗೆ ಕುಂಬಾರನ ಚಕ್ರದಂತೆ ಸುತ್ತಲಾರಂಭವಾಯಿತು, ಅವಳ ಬಾಯಿಯಿಂದಲೂ ಮೂಗಿ ನಿಂದಲೂ ರಕ್ಷವು ಸುರಿ ಖುಲಾರಂಭಿಸಿತು. ಕೈವವಾಗಿ ನರಕದ ಶಬ್ದ ಹತ್ತಿರಹತ್ತಿರ ಕೇಳಿಸಲಾರಂಭವಾಯಿತು, ದುರ್ಗಂಧವು ಹೆಚ್ಚಾಗುತ್ತಾಬಂದಿತು. ಅಕಸ್ಮಾತ್ತಾಗಿ ಜ್ಞಾನ ದಿಂದೊಡಗೂಡಿ ಮೃತಳಾದ ಶೈವಲಿನಿಯು ದೂರದಲ್ಲಿ ನರಕವನ್ನು ನೋಡಿದಳು. ಅನಂತರವೇ ಅವಳ ಕಣ್ಣುಗಳು ಕುರುಡಾಗಿ ಕಿವಿಗಳು ಕಿವುಡಾಗಿಹೋದವು. ಆಗ ವಳು ಮನಸ್ಸಿನಲ್ಲಿ, ಚಂದ್ರಶೇಖರನನ್ನು ಧ್ಯಾನಮಾಡಿಕೊಂಡು ಮನಸ್ಸಿನಲ್ಲಿ, ಸ್ವಾಮಿ ! ನೀನೆಲ್ಲಿರುತ್ತಿ ! ೩ ಜಾತಿಯ ಜೀವನಸಹಾಯ ಸ್ವರೂಪನಾಗಿ, ಆರಾಧನ ದೇವತಾಸ್ತ್ರ ರೂಪನಾಗಿ ಸರ್ವಮಂಗಳ ಸ್ವರೂಪನಾಗಿರುವ ಸ್ವಾಮಿ ! ನೀನೆಲ್ಲಿ ! ನೀನೆಲ್ಲಿ, ಸ್ಯಾಮಿ ಚಂದ್ರಶೇಖರ ! ನಿನ್ನ ಚರಣಾರವಿಂದಕ್ಕೆ ಸಹಸ್ರ ಸಹಸ, ಪ್ರಣಾಮಗಳು ! ನನ್ನನ್ನು ರಕ್ಷಿಸು ! ನಿನ್ನಲ್ಲಿ ಅಸಾಧಮಾಡಿದವಳಾಗಿ ನಾನು ಈ ನರಕಕುಡದಲ್ಲಿ ಬಿದ್ದಿದ್ದೇನೆ-ನೀನು ರಕ್ಷಿಸದಿದ್ದರೆ ಯಾವ ದೇವರೂ ನನ್ನನ್ನು ರಕ್ಷಿಸಲಾರನ , ನನ್ನ ನ್ನು ಉದ್ಘಾರಮಾಡು. ನೀನು ನನ್ನನ್ನು ಕಾಪಾಡಿ ಪ್ರಸನ್ನ ನಾಗು...ಇಲ್ಲಿಯೇ ಬಂದು ನಿನ್ನ ಚರಣಯುಗಳ ವನ್ನು ನನ್ನ ಮಸ್ತಕದಲ್ಲಿಡ-ಹಾಗೆ ಮಾಡಿದರೆ ನಾನು ಈ ದುರಂತವಾದ ನರಕದಿಂದ ಉದ್ಧಾರವಾಗುವೆನೆಂದು ಕೂಗಿದಳು. ಆಗ ಆ ಅಂಧೆಯಾದ, ಬಧಿರೆಯಾದ, ಮೃತಳಾದ ವಲನಿಗೆ ಯಾರೋ ಬಂದು ತನ್ನನ್ನು ಎತ್ತಿಕೊಂಡು ಕೂಡಿಸಿಕೊಂಡಹಾಗೆ ಬೋಧೆಯಾಯಿತು, ಆತನ ದೇಹದ ಸರಭದಿಂದ ದಿಕ್ಕೆಲ್ಲಾ ಸುವಾಸಿತವಾಯಿತು. ಆ ದುರಂತವಾದ ನರಕದ ರವವೂ ಇದ್ದಕ್ಕಿದ್ದಹಾಗೆ ಅಂತರ್ಹಿತವಾಯಿತು. ಪೂತಿಗಂಧಕ್ಕೆ ಬದಲಾಗಿ ಕುಸುಮಗಂಧವೆ ದ್ವಿತು. ಅವಳ ಕಿವುಡು ಹೋಯಿತು, ಕಣ್ಣುಗಳು ನೋಡಲು ಸಾಮರ್ಥ್ಯವುಳವಾ ದವು. ಅವಳಿಗೆ ಇದು ವರಣವಲ್ಲ ; ಜೀವನವೆಂದು ಬೋಧೆಯಾಯಿತು, ಇದು ಸ್ವಪ್ನ ವಲ್ಲ.-ನಿಜವಾದುದೆಂದು ಗೊತ್ತಾಯಿತು. ಕೈವಲಿನಿಗೆ ಚೇತನವ್ರಂಟಾಯಿತು. - ಕಣ್ಣು ಬಿಟ್ಟು ನೋಡಲಾಗಿ ಗುಹೆಯೊಳಗೆ ಸ್ವಲ್ಪ ಬೆಳ ಕಾಗಿತ್ತು, ಹೊರಗಡೆ ಪ್ರಭಾತದಲ್ಲಿ ಪಕ್ಷಿಗಳು ಕೂಗುತಲಿದ್ದವು. ಇದೇನಿದು ! ಯಾರ ತೊಡೆಯಮೇಲೆ ಅವಳ ತಲೆಯು ಇಡಲ್ಪಟ್ಟಿತು ! ಉಾರ ಮುಖಮಂಡಲವು ಅವಳ ತಲೆಯಮೇಲೆ ಗರ ನದಲ್ಲಿ ಉದಯವಾದ ಪೂರ್ಣಚಂದ್ರನಪಾಗೆ ಪ್ರಭಾತದ ಅಂಧಕಾರವನ್ನು ಹೋಗಲಾಡಿಸು ತಲಿತ್ತು ? ಶೈವಲಿನಿಯು ಗುರ್ತಿಸಿ ನೋಡಿದಳು-ಚಂದ್ರಶೇಖರ....ಎಹ್ಮಚಾರಿಯ ವೇಷದಲ್ಲಿ ಚಂದ್ರಶೇಖರ ! ortu..."
ಪುಟ:ಚಂದ್ರಶೇಖರ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.