ಎರಡನೆಯ ಪರಿಚ್ಛೇದ. ಪುನಃ ಅವನೇ. ರಾಮಚರಣನ ಗುಂಡಿನ ಪೆಟ್ಟು ತಿಂದು ಫಾಸ್ಟರನು ಗಂಗೆಯಲ್ಲಿ ಬಿದ್ದು ಹೋದಮೇಲೆ ಪ್ರತಾಪನು ಹಡಗನ್ನು ಬಿಚ್ಚಿಕೊಂಡು ಹೊರಟು ಹೋದನು. ಅನಂತರ ಭಾಸ್ಕರನ ದೇಹವು ಆಯುಧಗಳ ಹಡಗಿನ DANI ಪಕ್ಕದಲ್ಲಿ ತೇಲಿಹೋಗುತಲಿದ್ದುದನ್ನು ಕಂಡು ಆಯುಧಗಳ ಹಡ ಗಿನ ಅಂಬಿಗರು ನೀರಿನಲ್ಲಿ ಧುಮುಕಿ ಆ ದೇಹವನ್ನು ಎತ್ತಿಕೊಂಡು ಬಂದು ಹಡಗಿನಮೇಲೆ ಹಾಕಿದರು. - ಅಮಿಯನು ಆ ಹಡಗಿಗೆ ಬಂದು ನೋಡಲಾಗಿ ಭಾಸ್ಕರನು ಅಚೇತನನಾಗಿ ದ್ದನು, ಆದರೆ ಪ್ರಾಣಹೋಗಿರಲಿಲ್ಲ. ಮಸ್ತಿಷ್ಯವು ಕೃತವಾಗಿ ಚೇತನವು ಹೋಗಿತ್ತು. ಅವನು ಸಾಯುವ ಸಂಭವವೇ ಹೆಚ್ಚಾಗಿತ್ತು, ಆದರೆ ಬದುಕಿದರೂ ಬದುಕಿಕೊಳ್ಳ ಬಹುಧಾದ ಸ್ಥಿತಿಯಲ್ಲಿದ್ದನು. ಅವಿಯಟನಿಗೆ ಚಿಕಿತ್ಸೆ ಮಾಡುವುದಕ್ಕೆ ಗೊತ್ತಿತ್ತಾಗಿ ರೀತಿವತವಾಗಿ ಭಾಸ್ಕರ ನಿಗೆ ಚಿಕಿತ್ಸೆ ಮಾಡಲಾರಂಭಿಸಿದನು. ಬಕಾವುಲ್ಲನು ಕೊಟ್ಟ ಸಮಾಚಾರದಮೇಲೆ ನಾಸ್ಟ್ರನ ಹಡಗನ್ನು ಹುಡಕಿ ಪತ್ತೆ ಮಾಡಿ ಘಾಟಗೆ ತಂದನು. ಅಮಿಯಟನು ಮಾಂಗೀರನಿಂದ ಹೊರಟಾಗ ಸಾಯುವಹಾಗಿದ್ದ ಭಾಸ್ಕರನನ್ನೂ ಆ ಹಡ ಗಿನಲ್ಲಿಯೇ ಕರೆತಂದನು. ಫಾಸ್ಟ್ರನಿಗೆ ಆಯುಸ್ಸು ಇತ್ತು, ಅಮಿಂಟನು ಮಾಡಿದ ಚಿಕಿತ್ಸೆಯಿಂದ ಉತ್ತಿ ದುಕೊಂಡನು. ಆದರೆ ಈಗವನು ರುಗನಾಗಿದ್ದನು. ಬಲಹೀನ: ಈಗ ಆ ಸಾಹಸ ವಿಲ್ಲ; ಆ ದಂಭವಿಲ್ಲ. ಈಗ ಆ ಪ್ರಾಣ ಭಯದಿಂದ ಭೀತನಾಗಿ, ಆ ಪ್ರಾಣಭಯದಿಂದ ಪಲಾಯನವಾಗಿ ಬಂದಿದ್ದನು. ಮಸ್ತಿಷ್ಯದ ಆಘಾತದಿಂದ ಬುದ್ಧಿಯ ಸೃಲ್ಪ ವಿಕೃತಿ ಮಾಗಿತ್ತು. - ಫಾಸ್ಟೆರನು ಹಡಗನ್ನು ಬೇಗಬೇಗನೆ ತೆಗೆಯಿಸಿಕೊಂಡು ಹೋಗುತಲಿದ್ದನು. ಆದರೂ ಭಯ, ಮುಸಲ್ಮಾನರು ಚಿನ್ನ ಬಂದಾರೆಂಬ ಭಯ, ಮೊದಲು ಕಾಸೀಂಬಜಾರನಲ್ಲಿ ರುವ ರೆಸಿರ್ಡೆಸಿ ಬಂಗ್ಲೆಗೆ ಹೋಗಿ ಆಶ್ರಯವನ್ನು ತೆಗೆದುಕೊಳ್ಳಬೇಕೆಂದು ಯೋಚಿ ಸಿದನು, ಮುಸಲ್ಮಾನರು ಬಂದು ರೆಸಿರ್ಡೆಸಿಗೆ ಮುತ್ತಿಗೆ ಹಾಕುವರೆಂಬ ಭಯವುಂಟಾ ಯಿತು. ಆದುದರಿಂದ ಆ ಅಭಿಪ್ರಾಯವನ್ನು ಬಿಟ್ಟನು. ಈ ಸ್ಥಳದಲ್ಲಿ ಅವನ ಅನು. ಮಾನವೇ ಸ್ಥಿರವಾಯಿತು, ಸ್ವಲ್ಪ ಹೊತ್ತಿನಲ್ಲಿಯೇ ಮುಸಲ್ಮಾನರು ಬಂದು ರೆಸಿರ್ಡೆಸಿ ಯನ್ನು ಆಕ್ರಮಣ ಮಾಡಿ ಕೊಳ್ಳೆ ಹೊಡೆದರು.
ಪುಟ:ಚಂದ್ರಶೇಖರ.djvu/೧೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.