ಐದನೆಯ ಭಾಗ. ೧of ಫಾಸ್ಟರನು ಜಾಗ್ರತೆಯಾಗಿ ಕಾಸೀಂಬಜಾರು, ಫರಷಡಾಂಗಾ, ಸೈದಾಬಾದು, ರಾಂಗಾಮಾಟ, ಈ ಸ್ಥಳಗಳನ್ನು ಬಿಟ್ಟು ಮುಂದೆ ಹೋದನು. ಆದರೂ ಭರವು ಹೋಗಲಿಲ್ಲ. ಹಿಂದುಗಡೆ ಯಾವ ಹಡಗು ಬಂದರೂ ಅದು ಮುಸಲ್ಮಾನರ ಹಡಗೆಂತಲೇ ಭಾವಿಸಿಕೊಳ್ಳುವನು. - ಹೀಗೆ ಕಳವಳವುಳ್ಳವನಾಗಿ ನೋಡುತಿದ್ದ ಹಾಗೆ ಬಂದು ಚಿಕ್ಕ ಹಡಗು ಹಿಂದುಗಡೆ ಬರುತಲಿತ್ತು, ಅದನ್ನು ಮುಸಲ್ಮಾನರ ಹಡಗೆಂದು ತಿಳಿದುಕೊಂಡನು. ಏನು ನೋಡಿ ದರೂ ಅದು ಎಡಬಿಡದೆ ಹಿಂದುಗಡೆಯೇ ಬರುತಲಿತ್ತು. - ಅನಂತರ ಭಾಸ್ಕರನು ಪ್ರಾಣರಕ್ಷಣೆಗೆ ಉಪಾಯವನ್ನು ಯೋಚಿಸಲಾರಂಭಿಸಿದನು. ಭ್ರಾಂತವಾದ ಬುದ್ದಿಗೆ ನಾನಾ ವಿಧವಾದ ಯೋಚನೆಗಳುಂಟಾದವು. ಬಂದು ತಡವೆ, ಹಡ ಗನ್ನು ಬಿಟ್ಟ ತೀರದ ಮೇಲೆ ಹೋಗಿ ಓಡಿಹೋಗಿ ಎಂದು ಯೋಚಿಸಿದನು, ಪುನಃ, ಓಡಿಹೋಗಲಾರೆ. ಓಡಿಹೋಗಲು ಬಲವಿಲ್ಲವೆಂದು ತೋಚಿತು. ಪುನಃ, ನೀರಿನಲ್ಲಿ ಧುಮುಕಿ ಮುಣುಗಲೆ ? ಎಂದು ಯೋಚಿಸಿದನು, ನೀರಿನಲ್ಲಿ ಮುಣುಗಿದರೆ ಬದುಕಿಕೊ ಇಲಾರೆನೆಂದು ಹೊಳೆಯಿತು, ಪುನಃ, ಈ ಇಬ್ಬರು ಹೆಂಗಸರನ್ನು ನೀರಿನಲ್ಲಿ ತಳ್ಳಿಬಿಟ್ಟರೆ ಹಡಗು ಹಗುರವಾಗಿ ಬೇಗನೆ ಹೋಗಬಹುದೆಂದು ಯೋಚಿಸಿದನು. ಅಕಸ್ಮುತ್ತಾಗಿ ಅವನಿಗೆ ಒಂದು ದುರ್ಬುದ್ಧಿಯು ಹುಟ್ಟಿತು. ಅವನಿಗೆ ಮನಸ್ಸಿ ನಲ್ಲಿ ಈ ಹೆಂಗಸರಿಗೋಸ್ಕರ ಯವನರು ಹಿಂದಟ್ಟಿ ಬರುತ್ತಾರೆಂದು ದೃಢವಾದ ನಂಬುಗೆ ಯುಂಟಾಯಿತು. ಅದಲ್ಲದೆ ದನಿಯು ನವಾಬಿನ ಬೀಗಂ ಎಂದು ಕೇಳಿ, ಬೇಗಮಿಗೋ ಸ್ವರವೇ ಮುಸಲ್ಮಾನರು ಇಂಗ್ಲೀಷರ ಚನ್ನಪ್ಪಿದ್ದಾರೆಂದೂ, ಆದುದರಿಂದ ಬೇಗನನ್ನು ಬಿಟ್ಟು ಹೋದರೆ ರಗಳೆ ದಾವದೂ ಇರಲಾರದೆಂದೂ ಸ್ಥಿರವಾಗಿ ನಂಬಿದನು. - ದಳನಿಯನ್ನು ಕುರಿತು, ಆ ಚಿಕ್ಕ ಹಡಗು ಹಿಂದೆ ಬರುವುದು ನೋಡಿದೆಯಾ ? ಎಂದು ಕೇ ದನು. ದಳನೀ-ನೋಡಿದೆ. ಭಾಸ್ಕರನು--ಅದು ನಿಮ್ಮ ಜನರ ಹಡಗು, ನಿನ್ನನ್ನು ನಮ್ಮಿಂದ ಬಿಡಿಸಿಕೊಂಡು ಹೋಗುವುದಕ್ಕಾಗಿ ಬರುವುದು. ಈ ರೀತಿಯಾಗಿ ತಿಳಿದುಕೊಳ್ಳುವುದಕ್ಕೆ ಕಾರಣವೇನೂ ಇರಲಿಲ್ಲ. ನಾಸ್ಸರನ ವಿಕೃತವಾದ ಬುದ್ಧಿಯೇ ಅದಕ್ಕೆ ಕಾರಣವಾಗಿತ್ತು. ಅವನು ರಜ್ಜುವಿನಲ್ಲಿ ಸರ್ಪವನ್ನು ಕಾಣುತಲಿದ್ದನು. ದನಿಯು ವಿವೇಚನೆ ಮಾಡಿ ನೋಡಿದ್ದರೆ ಅವನ ಮಾತಿನಲ್ಲಿ ಸಂದೇ ಹಪಡುತಲಿದ್ದಳು. ಆದರೆ ಯಾರು ಯಾವದಕ್ಕೋಸ್ಕರ ವ್ಯಾಕುಲರಾಗಿರುವರೋ ಅಂತ ಹವರು ಅದರ ನಾಮೋಚ್ಛಾರಣ ಮಾತ್ರದಿಂದಲೇ ಅಂಧರಾಗಿ ವಿಚಾರ ಮಾಡುವುದಕ್ಕೆ ಪರಾಣ್ಮುಖರಾಗುವರು, ದಲಿನಿಯು ಆಕೆಯಿಂದ ಮುಗ್ಗೆಯಾಗಿ ಅವನು ಹೇಳಿದ ಮಾತ ನ್ನು ನಂಬಿದಳು. ನಂಬಿ, ಹಾಗಾದರೆ ನನ್ನನ್ನು ಆ ಹಡಗಿಗೆ ಕಳುಹಿಸುವುದಿಲ್ಲವೇತಕ್ಕೆ? ಕಳುಹಿಸಿದರೆ ನಿನಗೆ ಬಹಳ ಹಣವನ್ನು ಕೊಡುವೆನೆಂದಳು. לו
ಪುಟ:ಚಂದ್ರಶೇಖರ.djvu/೧೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.