ಚಂದ್ರಶೇಖರ. ಭಾಸ್ಕರ-ಬಂದಿದ್ದೆನು - ತಮ್ಮ ಅಭಿರುಚಿ ಯಿದ್ದ ಹಾಗೆ ಮಾಡಬಹುದು. ನಾನು ತಮ್ಮ ಕೈಗೆ ಸಿಕ್ಕಿದ್ದೇನೆ. ಏತಕ್ಕೆ ಬಂದಿದ್ದೆನೋ ಅದರ ವಿಚಾರ ಪ್ರಯೋಜನವಿಲ್ಲ. ವಿಚಾ ರಮಾಡಿದರೂ ಏನೊಂದುತ್ತರವೂ ಬರಲಾರದು. ನಬಾಬನು ಕ್ರುದ್ಧನಾಗದೆ ನಕ್ಕು, ನೀನು ಭಯಶೂನ್ಯನೆಂದು ಗೊತ್ತಾಯಿತು. ಸತ್ಯವಾದುದನ್ನು ಹೇಳಬೇಕೆಂದನು. ಫಾಸ್ಟರ -ಇಂಗ್ಲೀಷರು ಯಾವಾಗಲೂ ಸುಳ್ಳು ಹೇಳುವುದಿಲ್ಲ. ನಬಾಬ-ನಿಜ, ನೋಡುವುದರಲ್ಲಿ ತಿಳಿದೀತು, (ಯಾರೋ, ಚಂದಶೇಖರನು ಬಂ ದಿದ್ದಾನೆಂದು ಹೇಳಿದ್ದರು, ಅವನನ್ನು ಕರೆಯಿಸಬೇಕೆಂದು ಅಪ್ಪಣೆಯಾಯಿತು. ) - ಮುಹಮ್ಮದ ಅರಸನು ಚಂದ್ರಶೇಖರನನ್ನು ಕರೆತಂದನು. ನವಾಬನು ಚಂದ ಶೇ ಖರನನ್ನು ಫಾಸ್ಟರನಿಗೆ ತೋರಿಸಿ, ಇವನನ್ನು ಬಲ್ಲೆಯಾ ? ಎಂದು ಕೇಳಿದನು. ಫಾಸ್ಟರ ಹೆಸರು ಕೇಳಿದ್ದೇನೆ, ಗುರುತು ಇಲ್ಲ. ನಬಾಬ-ಒಳ್ಳೆಯದು, ( ಕುಲಸಂಬಿಯನ್ನು ಕರೆತರಲು ಅಪ್ಪಣೆಯಾದರೆ, ಅವಳು ಬಂದಳ), ಈ ಹೆಂಗಸನ್ನು ಬಲ್ಲೆಯಾ ? ಫಾಸ್ಟರ-ಬಲ್ಲೆ. ನಬಾಬ -ಇವಳು ಯಾರು ? ಫಾಸ್ಟರ-ತಮ್ಮ ದಾಸಿ. ಮಹಮ್ಮದತಕಿಯು ಬರುವಹಾಗೆ ಅಪ್ಪಣೆಯಾದಮೇರೆ ಅವನು ಬಂದನು. ಅವನು ಶೃಂಖಲಾಬದ್ಧನಾಗಿದ್ದನು. ನಬಾಬನು ಮಹಮ್ಮದತಕಿಯ ಕಡೆ ತಿರುಗಿ ನೋಡದೆ, ಕುಲಸಂ ! ಹೇಳು, ನೀನು ಮಾಂಗೀರನಿಂದ ಕಲಿಕತ್ತೆಗೆ ಹೇಗೆ ಹೋದೆ ? ಎಂದನು. ಕುಲನಂಬಿದು ಆನುಪೂರ್ವಕವಾಗಿ ಹೇಳಿದಳು. ದಳನಿಯ ವೃತ್ತಾಂತವನ್ನೂ ಹೇಳಿದಳು. ಹೇಳಿ ಕೈಮುಗಿದುಕೊಂಡು ಸಜಲನಯನೆಯಾಗಿ ಉಚ್ಚಸ್ವರದಿಂದ, ಜಹಾ ಪನಾ ! ನೆರದಿರುವ ದರಬಾರಿನಲ್ಲಿ, ಪಾಪಿಷ್ಠನಾದ ನರಾಧವನಾದ ೩ ಘಾತಕನಾದ ಈ ಮಹಮ್ಮದತಕಿಯಮೇಲೆ ನಾನು ಫಿರಾದು ಮಾಡುತ್ತೇನೆ, ತಾವು ಲಾಲಿಸಬೇಕು ! ಅವನು ನನ್ನ ಪ್ರಭುವಿನ ಪತ್ನಿ ಮೇಲೆ ಮಿಥ್ಯಾಪವಾದವನ್ನು ಹುಟ್ಟಿಸಿ, ನನ್ನ ಪ್ರಭು ವನ್ನು ವಂಚಿಸಿ ಸಂಸಾರದಲ್ಲಿ ಸ್ತ್ರೀ ರತ್ನಸಾರಳಾದ ದಳನಿಯನ್ನು ಪಿಪೀಲಿಕದಹಾಗೆ ಅಕಾ ತರನಾಗಿ ಹತ್ಯಮಾಡಿದ್ದಾನೆ. ಜಹಾಪನಾ ! ಏನೀಲಕದಹಾಗೆ ಈ ನರಾಧವನನ್ನು ಅಕಾ ತರರಾಗಿ ಹತ್ಥಮಾಡಬೇಕು, ಎಂದು ಹೇಳಿದಳು. ಮಹಮ್ಮದತಕಿಯು ರುದ್ಧ ಕಂಠನಾಗಿ, ಸುಳ್ಳುಮಾತು, ನಿನ್ನ ಸಾಕ್ಷಿಯಾರು ? ಎಂದನು.
ಪುಟ:ಚಂದ್ರಶೇಖರ.djvu/೧೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.