೧8 ಚಂದ್ರಶೇಖರ. ಸ್ವಾಮಿ--ನಾನು ಅದರ ತತ್ವವನ್ನು ತಿಳಿದುಕೊಂಡು ಬರುತ್ತೇನೆ. ಹೀಗೆಂದು ಹೇಳಿ ರಮಾನಂದಸ್ವಾಮಿಯು ಚಂದಶೇಖರನನ್ನೂ ಶೈವಲಿನಿಯನ್ನೂ ಕಳುಹಿಸಿ ಕೊಟ್ಟು ಯುದ್ದ ಕ್ಷೇತ್ರಾಭಿಮುಖವಾಗಿ ಹೊರಟನು. ಆ ಧೂಮವುಯವಾದ, ಆರ್ತಚೀತ್ಕಾರವುಳ್ಳ, ಭೀಷಣವಾದ ಯುದ್ಧಕ್ಷೇತ್ರದ ಅಗ್ನಿ ವೃತ್ಮಿಯ ಮಧ್ಯದಲ್ಲಿ, ಪ್ರತಾ ಪನನ್ನು ಹುಡುಕಿದನು, ನೋಡಲಾಗಿ ಶವದಮೇಲೆ ಶವಗಳು ಬಿದ್ದು ಸ್ಕೂಸಾಕಾರವಾ ಗಿದ್ದುವು. ಕೆಲವರು ಸತ್ತಿದ್ದರು, ಕೆಲವರು ಅರ್ಧ ಮೃತರಾಗಿದ್ದರು, ಕೆಲವರಿಗೆ ಅಂಗ ಛೇದನವಾಗಿದ್ದಿತು. ಕೆಲವರಿಗೆ ವಕ್ಷವು ಬಿದ್ದ ವಾಗಿದ್ದಿತು. ಕೆಲವರು ನೀರು ! ನೀರು !! ಎಂದು ಆರ್ತರಾಗಿ ಕೂಗುತಲಿದ್ದರು, ಕೆಲವರು, ಅಪ್ಪಾ ! ಎನ್ನು ತ್ತಿದ್ದರು, ಕೆಲವರು, ಅಮ್ಮಾ ! ಅಣ್ಣ ! ಬಂಧ ! ಎಂದು ಕೂಗುತಲಿದ್ದರು. ರವಾನಂದಸ್ವಾಮಿಯು ಆ ಶವ ಗಳ ಮಧ್ಯೆ ಪ್ರತಾಪನನ್ನು ಹುಡುಕಿದನು. ಸಿಕ್ಕಲಿಲ್ಲ. ಕೆಲವು ಅಶ್ವಾರೋಹಿಗಳು ರುಧಿ ರಾಕ್ಕೆ ಕಳೇಬರವುಳ್ಳವರಾಗಿ, ಅಸ್ತ್ರ ಶಸ್ತ್ರ ಗಳನ್ನು ಬಿಸಾಟು ಆಹತವಾದ ಕುದುರೆಗ ಇಮೇಲೆ ಓಡಿಹೋಗುತ್ತಿದ್ದರು, ಎಷ್ಟೋ ಜನ ಯೋಧರು ಕುದುರೆಗಳ ಕಾಲಿಗೆ ಸಿಕ್ಕಿ ಹತರಾಗಿ ಹೋಗುತಲಿದ್ದರು. ಅವರಲ್ಲಿ ಪ್ರತಾಪನನ್ನು ಹುಡುಕಿದನು. ಸಿಕ್ಕಲಿಲ್ಲ. ಕೆಲವರು ಪದಾತಿಗಳು ರಕ್ತಹಸ್ತರಾಗಿ ಊರ್ಧ್ವಶ್ಯಾಸದಿಂದ ರಕ್ಕಸ್ಥಾವಿತರಾಗಿ ಓಡಿಹೋ ಗುತಲಿದ್ದರು. ಅವರ ಮಧ್ಯದಲ್ಲಿಯ ಪ್ರತಾಪನು ಸಿಕ್ಕಲಿಲ್ಲ. ಶ್ರಾಂತನಾಗಿ ರಮಾನಂದಸ್ವಾಮಿಯು ಬಂದು ಮರದ ಕೆಳಗೆ ಕೂತನು. ಆ ಮಾ ರ್ಗವಾಗಿ ಒಬ್ಬ ಸಿಪಾಯಿಯು ಓಡಿಹೋಗುತಲಿದ್ದನು. ರಮಾನಂದಸ್ವಾಮಿಯು ಅವ ನನ್ನು ಕರೆದು, ನೀವೆಲ್ಲಾ ಓಡಿಹೋಗುತ್ತೀರಿ-ಯುದ್ಧ ಮಾಡುವವರು ಯಾರು ? ಎಂದು ಕೇಳಿದನು. ಸಿಖಾಯಿ-ಯಾರೂ ಇಲ್ಲ, ಒಬ್ಬ ಹಿಂದೂ ಮಾತ್ರ ಬಹಳ ಯುದ್ದ ಮಾಡುತ್ತಾನೆ. ಸ್ವಾಮಿ-ಅದು ಎಲ್ಲಿ ? ಸಿಪಾಯಿ.ಕೋಟೆಯ ಮುಂದುಗಡೆ ನೋಡಿರಿ. ಹೀಗೆಂದು ಹೇಳಿ ಹೊರಟುಹೋದನು. ರಮಾನಂದಸ್ವಾಮಿಯು ಕೋಟೆಯಕಡೆಗೆ ಹೋಗಿ ನೋಡಲಾಗಿ ಕೆಲವು ಇಂಗ್ಲೀಪು ಮತ್ತು ಹಿಂದೂ ಜನರ ಮೃತದೇಹಗಳು ಒಟ್ಟಿಗೆ ಸ್ಫೂಪಾಕಾರವಾಗಿ ಬಿದ್ದಿದ್ದುವು. ಸಾಮಿಯು ಅವುಗಳ ಮಧ್ಯೆ ಸತಾಸನನ್ನು ಹುಡುಕಿದನು. ಬಿದ್ದಿದ್ದ ಹಿಂದೂಗಳಲ್ಲಿ ಯಾರೋ ಒಬ್ಬನ ಕಾತರಪಡುತಲಿದ್ದನು. ರಮಾನಂದಸ್ವಾಮಿದು ಅವನನ್ನು ಹೊರಗೆ ತೆಗೆದನು. ನೋಡಲಾಗಿ ಪ್ರತಾಪ ! ಆಹತನಾಗಿ, ಮೃತಜಾ)ಯನಾಗಿ, ಜೀವಿತ ನಾಗಿದ್ದನು. ರಮಾನಂದಸ್ವಾಮಿಯು ನೀರನ್ನು ತಂದು ಅವನ ಬಾಯಿಗೆ ಬಿಟ್ಟನು. ಪ್ರತಾಪನು ಸ್ವಾಮಿಯನ್ನು ಗುರ್ತಿಸಿ, ಅವನಿಗೆ ಪ್ರಣಾಮವನ್ನು ಮಾಡುವುದಕ್ಕೋಸ್ಕರ ಕೈಯೆ ತಲು ಪ್ರಯತ್ನ ಪಟ್ಟನು. ಆದರೆ ಆಗಲಿಲ್ಲ.
ಪುಟ:ಚಂದ್ರಶೇಖರ.djvu/೧೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.