೧ಳಿ ಚಂದ್ರಶೇಖರ ರಿಯು ಪುನಃ ಮಾತನಾಡಲಿಲ್ಲ. ಕೊಂಕಳಲ್ಲಿದ್ದ ಕೊಡವನ್ನು ಕೆಳಗಿಟ್ಟು ಬಿಟ್ಟು ಊರ್ಧ್ವ ಕ್ಯಾಸದಿಂದ ಓಡಿಹೋದಳು. ಹಿತ್ತಾಳೆ ಕೊಡ, ಗಡಗಡಾಯಿಸಿ ಉರುಡುತ್ತ ಢಕಥಕ ಶಬ್ದ ಮಾಡುತ್ತ ಉದರಸ್ಥನಾಗಿದ್ದ ನೀರನ್ನು ಗಿಯುತ್ತ ಪುನಃ ಪುಷ್ಕರಿಣಿಯ ಜಲದಲ್ಲಿ ಪ್ರವೇಶಮಾಡಿಬಿಟ್ಟಿತು, - ಸುಂದರಿಯು ತಾಳವೃಕ್ಷದ ತಳದಲ್ಲಿ ಒಬ್ಬ ಇಂಗ್ಲೀಷರವನನ್ನು ನೋಡಿದಳು. ಇಂಗ್ಲೀಷರವನನ್ನು ನೋಡಿ ಕೈವಲಿನಿಯು ಅಲ್ಲಾಡಲಿಲ್ಲ, ಕದಲಲಿಲ್ಲ, ನೀರಿನಿಂದ ಏಳ ಲಿಲ್ಲ. ಕುತ್ತಿಗೆಯವರೆಗೂ ಮುಣುಗಿ ಒದ್ದೆಯಾದ ನೀರೆಯ ಸೆರಗಿನಿಂದ ಕಬರಿಯ ಸಮೇತವಾಗಿ ತಲೆಯು ನೆನದುಹೋದಭಾಗವನ್ನು ಮುಚ್ಚಿಕೊಂಡು, ವಿಕಸಿತವಾದ ಕನು ಲದಂತೆ ಬಲದಲ್ಲಿ ಕುಳಿತಿದಳು. ಮೇಘಮಧ್ಯದಲ್ಲಿ ಅಚಲವಾದ ಮಿಂಚು ನಕ್ಕ ಹಾಗೆ ಭೀಮಾಪುಷ_ರಿಣಿಯು ಆ ಸ್ಥಾವಲವಾದ ತರಂಗದಲ್ಲಿ ಈ ಸ್ವರ್ಣಕಮಲವು ಹುಟ್ಟಿತು. ಸುಂದರಿಯು ಓಡಿಹೋದಳು. ಯಾರೂ ಇಲ್ಲದಿರುವುದನ್ನು ಕಂಡು ಇಂಗ್ಲೀಷರ ವನು ಮೆಲ್ಲಮೆಲ್ಲಗೆ ತಾಳೇಮರಗಳ ಮರೆಯಲ್ಲಿ ಘಾಟಿಯ ಹತ್ತಿರ ಬಂದನು. - ಇಂಗ್ಲೀಷ್ಕರವನು ನೋಡುವುದಕ್ಕೆ ಅಲ್ಪವಯಸ್ತನಾಗಿ ಗಿಡ್ಡನಾಗಿದ್ದನು. ಮೀಸೆ ಹುಟ್ಟಿರಲಿಲ್ಲ. ಕೇಶವು ಸ್ವಲ್ಪ ಕೃಷ್ಣವರ್ಣ, ಕಣ್ಣುಗಳು ಇಂಗ್ಲೀಷರವರಿಗೆ ಇರು ವುದಕ್ಕಿಂತಲೂ ಸ್ವಲ್ಪ ಕೃಷ್ಣವರ್ಣವೆಂತಲೇ ಹೇಳಬೇಕು, ಉಡುಪು ಡಂಭವಾಗಿತ್ತು. ಸರಪಣಿ, ಉಂಗುರವುಂತಾದ ಅಲಂಕಾರಗಳ ಸಾರಿಸಾಟ್ಯವು ಸ್ವಲ್ಪ ಇತ್ತು. ಇಂಗ್ಲೀಷರವನು ಮೆಲ್ಲಮೆಲ್ಲಗೆ ಘಾಟಿಲು ಹತ್ತಿರ ಬಂದು, ಕ್ರಮವಾಗಿ ನೀರಿನ ಅಂಚಿಗೆ ಸರಿದು, 1 come Again, fair lady ( ಸುಂದರಿ ! ನಾನು ಪುನಃ ಬಂದೆ) ಯೆಂದನು. ಕೈವಲಿನೀ-ನಿನ್ನ ಆ ಹಾಳುಮಾತು ನನಿಗೆ ಗೊತ್ತಿಲ್ಲ. Oh-Ay-that astry gibberish,-I must speak it I s11}pose ( ಓಹೋ ! ಆ ಅರ್ಥರಹಿತವಾದ ಹಾಳುಮಾತೊ ! ಅದರಲ್ಲಿ ಮಾತನಾಡ ಬೇಕೊ - ) ನಾನು again ( ಪುನಃ ) ಬಂದಿದ್ದೇನೆ. ಶೈವಲಿನಿ ಏತಕ್ಕೆ ? ಯವಾಲಯಕ್ಕೆ ಇದೇ ಮಾರ್ಗವೋ ? ಇಂಗ್ಲೀಷರವನಿಗೆ ಗೊತ್ತಾಗದೆ ಏನು ಹೇಳುತ್ತಿ ? ಎಂದು ಕೇಳಿದನು. ಕೈವಲಿನೀ-ಏನು ಹೇಳಿದೆನೆಂದರೆ, ಜ (ಯು) ವನು ನಿನ್ನನ್ನು ಮರೆತು ಹೋದನೆ ? ಎಂದೆನು. (ಬಂಗಾಳಿಯಲ್ಲಿ ' ಯ ' ಕಾರವನ್ನು ' ಜ' ಕಾರದಹಾಗೆ ಉಚ್ಚರಿ ಸುತ್ತಾರೆ.) ಇಂಗ್ಲೀಷ-ಜವು ! ( ಯುವ ) John-you mean ? ( ಜಾನೆ ಎಂದು ಹೇಳುತ್ತೀಯೋ ? ) ನಾನು ಜಾನೆಂಬುವನಲ್ಲ. ನನ್ನ ಹೆಸರು ಲಾರೆನ್ಸಿ ಶೈವಲಿನೀ-ಬೃಳೆಯದು, ಒಂದು ಇಂಗ್ಲೀಸುಮಾತು ಬಂದಹಾಗಾಯಿತು. ಲಾರೆನ್ಸಿ ಎಂದರೆ ಮಂಗ ನೆಂದು ಅರ್ಥ.
ಪುಟ:ಚಂದ್ರಶೇಖರ.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.