ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಭಾಗ ೧೫ ಆ ಸಂಧ್ಯಾಕಾಲದಲ್ಲಿ ಶೈವಲಿನಿಯ ಹತ್ತಿರ ಲಾರೆನ್ಸಿ ಫಾಸ್ಟರನು ಏಷ್ಟೋ ದೇಶೀಯ ಬೈಗಳನ್ನು ತಿಂದು ಸ್ವಸ್ಥಾನಕ್ಕೆ ಹೊರಟು ಹೋದನು. ಅವನು ಪುಷ್ಕರಿಣಿಯ ಆಚೆ ಇದ್ದ ಬೆಟ್ಟಗಳನ್ನು ಇಳಿದು ಅಲ್ಲಿದ್ದ ಮಾವಿನ ತೋಪಿನಲ್ಲಿ ಮರಕ್ಕೆ ಕಟ್ಟಿದ್ದ ಕುದುರೆ ಯನ್ನು ಬಿಚ್ಚಿಕೊಂಡು ಅದರ ಮೇಲೆ ಸವಾರನಾಗಿ ತಬಿಯತೆ ನದಿಯ ತೀರದಲ್ಲಿದ್ದ ಪರ್ವ ತದಲ್ಲಿ ಪ್ರತಿಧ್ವನಿತವಾಗಿ ಕೇಳಿಸುವಹಾಗೆ ಗೀತವನ್ನು ಹಾಡುತ್ತ ಹೊರಟು ಹೋದನು. ಹೋಗುತ್ತ ಬಂದೊಂದು ಸಲ ಮನಸ್ಸಿನಲ್ಲಿ, ತನ್ನ ತೀಪ್ರಧಾನವಾದ ದೇಶದ ತುಷಾರರಾ ತಿಯ ಹಾಗಿರುವ ಮೇರಿಯು ತಿಖಾರೂಪಿಣಿಯಾದ ಉದೇಶದ ಸುಂದರಿಯಹಾಗೆ ಇದ್ದಾ ಳೆಂದು ಹೇಳುವುದಕ್ಕಾಗಲಾರದೆಂದಂದು ಕೊಳ್ಳುತ್ತಿದ್ದನು. ಘಸ್ಸರನು ಹೊರಟು ಹೋದಕೂಡಲೆ ಕೈವಲಿನಿಯು ನೀರಿನಿಂದ ಎದ್ದು ಬಂದು ಕೊಡ ದಲ್ಲಿ ನೀರು ತುಂಬಿಕೊಂಡು ಕುಂಭಕಕ್ಷೆಯಾಗಿ ಮೆಲ್ಲಮೆಲ್ಲಗೆ ವಸಂತದ ನವನಾರೂಢ ವಾದ ಮೇಘದಂತೆ ಗಜೇಂದ್ರಗವನದಲ್ಲಿ ಮನೆಗೆ ಬಂದಳು. ದುಧಾಸ್ಥಾನದಲ್ಲಿ ಕೊಡ ವನ್ನು ಇಟ್ಟು ಶರಾಗೃಹಕ್ಕೆ ಹೋದಳು. ಅಲ್ಲಿ ಶೈವಲಿನಿಯ ಸ್ವಾಮಿಯಾದ ಚಂದ್ರಶೇಖರನು ಚಿತ್ರಾಸನದಲ್ಲಿ ಯೋಗಾರೂಢನಾಗಿ ಕುಳಿತುಕೊಂಡು ಮಣ್ಣಿನ ಹಣಿತಿಯಲ್ಲಿ ಉರಿಯುತಲಿದ್ದ ದೀಪಕ್ಕಿದಿರಾಗಿ ಕೈಯಲ್ಲಿ ಬರೆ ದಪುಸ್ತಕವನ್ನು ಹಿಡಿದುಕೊಂಡು ಓದುತಲಿದ್ದನು. ನಾವು ಹೇಳುವ ಕಥೆಯು ನಡೆದು ಈಗ ಒಂದು ನೂರುಹತ್ತು ವರುಷಗಳಾಗಿವೆ. ಚಂದ್ರಶೇಖರನಿಗೆ ಮೂವತ್ತೈದು ನಾಲ್ವತ್ತು ವರುಷ, ದೀರ್ಘಕಾರವುಳ್ಳವನು. ಅದಕ್ಕೆ ತಕ್ಕ ಹಾಗೆ ಬಲಿಷ್ಯನಾಗಿದ್ದನು. ದೊಡ್ಡ ತಲೆ. ಪ್ರಶಸ್ತವಾದ ಲಲಾಟ ಲಲಾಟದಲ್ಲಿ ಚಂದನರೇಖೆ. ಕೈವಲಿನಿಯು ಮಲಗುವ ಕೊಠಡಿಗೆ ಹೋಗುತ್ತಲೆ, ಮನಸ್ಸಿನಲ್ಲಿ, ಗಂಡನು ಹೊ ತಾಗಿ ಬಂದುದೇತಕ್ಕೆಂದು ಕೇಳಿದರೆ, ಏನು ಹೇಳಬೇಕೋ ಅದನ್ನು ಯೋಚಿಸುತಲಿ ದೃಳು, ಆದರೆ ಕೈವಲಿನಿಯು ಒಳಗೆ ಬಂದ ಮೇಲೆ ಚಂದ್ರಶೇರಖನು ಏನೂ ಹೇಳಲಿಲ್ಲ. ಅವನು ಆಗ ಶಂಕರಾಚಾರರ ಬ್ರಹ್ಮಸೂತ್ರದ ಭಾಷ್ಯವನ್ನು ಓದುತ್ತ ಅದಕ್ಕೆ ಅರ್ಥ ವನ್ನು ಯೋಚಿಸುತಲಿದ್ದನು. ಕೈವಲಿನಿಯು ನಕ್ಕಳು. ಆಗ ಚಂದ್ರಶೇಖರನು ತಲೆಯನ್ನೆ ತಿನೋಡಿ, ಈ ಹೊತ್ತು ಇಷ್ಟು ಅವೇಳೆಯಲ್ಲಿ ಮಿಂಚುವುದೇತಕ್ಕೆ ? ಎಂದನು. ಶೈವಲಿನಿ-ತಾವು ನನ್ನನ್ನು ಎಷ್ಟೋ ಗದರಿಸಿ ಕೋಪಮಾಡುವಿರಿ ಎಂದು ತಿಳಿದು ಕೊಂಡಿದ್ದನು. ಚಂದ್ರ-ಗದರಿಸಿಕೊಳ್ಳುವುದೇತಕ್ಕೆ ? ಕೈವಲಿನಿ-ನಾನು ಪುಷ್ಕರಿಣಿಯಿಂದ ಬರುವುದಕ್ಕೆ ಹೊತ್ತಾಯಿತೆಂದು. ಚಂದ್ರ-ಹೌದು-ನಿಜ-ಏತಕ್ಕೆ ಇಷ್ಟು ಹೊತ್ತಾಯಿತು ? ಶೈವಲಿನಿ-ಬದ್ಧ ಕೆಂಪುಮನುಷ್ಯನು ಬಂದಿದ್ದನು. ಆಗ ಸುಂದರಿರಾಕರಣೆಯು