ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೊದಲನೆಯ ಭಾಗ. ೨೧ ನಾವು ಮೊದಲು ಪಾರಕರಿಗೆ ಪರಿಚಯಮಾಡಿಕೊಟ್ಟ, ಸುಂದರಿಯೆಂಬಾಕೆಯು ಎಲ್ಲರೂ ಎದ್ದು ಹೋದಮೇಲೆ, ಹೊರಟು ಹೋದಳು, ಸುಂದರಿಯು ಚಂದ್ರಶೇಖರನ ನೆರೆಯವಳ ಮಗಳು, ವರಸೆಯಲ್ಲಿ ಅವನಿಗೆ ತಂಗಿಯಾಗಬೇಕು, ಮತ್ತು ಶೈವಲಿನಿಗೆ ಸ್ನೇಹಿತೆಯಾಗಿದ್ದಳು. ಪುನಃ ಇವಳ ಸಮಾಚಾರವನ್ನು ಹೇಳ ಬೇಕಾಗಿರುವುದರಿಂದ ಇಲ್ಲಿ ಇವಳ ಪರಿಚಯವನ್ನು ತಿಳಿಸಿದ್ದೇವೆ. ಸುಂದರಿಯು ಕೂತು ಕೂತು ಬೆಳಗ್ಗೆ ಎದ್ದು ಹೊರಟು ಹೋದಳು. ಮನೆಗೆ ಹೋಗಿ ಅಳುವುದಕ್ಕೆ ತೊಡಗಿದಳು. (66)