ಮೊದಲನೆಯ ಭಾಗ. ಆಆ ಮಾಡಿ ತನ್ನ ದೇಹದ ರಕ್ತದಹಾಗೆ ಕಾಪಾಡಿ ಇಟ್ಟುಕೊಂಡಿದ್ದ ಅಧೀತವಾದ ಅಧ್ಯಯ ನೀಯವಾದ ಗ್ರಂಥಗಳನ್ನೆಲ್ಲಾ ತಂದು ಒಟ್ಟುಮಾಡಿ ಅಂಗಳದಲ್ಲಿ ಅವುಗಳನ್ನು ಒಂದೊಂ ದನ್ನಾಗಿ ತೆಗೆದು ಬಿಚ್ಚಿ ನೋಡಿ, ಓದದೆ ಹಾಗೆಯೇ ಕಟ್ಟ ಸಾಲುಸಾಲಾಗಿ ಬಂದರಮೇಲೆ ಒಂದನ್ನಿಟ್ಟು ರಾಠವಾಡಿದನು. ರಾತಿಮಾಡಿ ಅದಕ್ಕೆ ಬೆಂಕಿಯನ್ನಿಟ್ಟನು. ಬೆಂಕಿಯು ಉರಿಯಿತು, ಪುರಾಣ, ಇತಿಹಾಸ, ತಾವ್ಯ, ಅಲಂಕಾರ, ವ್ಯಾಕರಣ, ಇವುಗಳಿಗೆಲ್ಲ ಕ್ರಮವಾಗಿ ಬೆಂಕಿಯು ಹತ್ತಿತು. ಮನು, ಯಾಜ್ಞವಲ್ಯ, ಪರಾಶರ ಮುಂತಾದ ಸ್ಮತಿಗಳು: ನ್ಯಾಯ, ವೇದಾಂತ, ಸಾಂಖ್ಯ ಮುಂತಾದ ದರ್ಶನಗಳು ; ಕಲ್ಪ ಸೂತ) , ಅರಣ್ಯಕ, ಉಪನಿಷದು, ಮುಂತಾದವುಗಳೆಲ್ಲಾ ಒಂದೊಂದಾಗಿ ಅಗ್ನಿ ಸ್ಪಪ್ಟ್ ವಾಗಿ ಜ್ವಲಿಸಲಾರಂಭಿಸಿದವು. ಬಹುಪ್ರಯತ್ನದಿಂದ ರೇಖರವಾಗಿದ್ದ, ಬಹುಕಾಲದಿಂದ ಅಧೀತವಾಗಿದ್ದ ಆ ಅಮೂಲ್ಯವಾದ ಗ್ರಂಥರಾತ್ರಿಯು ಭಾವಶೇಷವಾಗಿ ಹೋಯಿತು. ರಾತ್ರಿ ಮೊದಲನೆಯ ದಾನಕ್ಕೆ ಗ್ರಂಥದ ಕನವು ಸಮಾಪನವಾಗಿ ಚಂದ್ರಶೇಖರನು ಒಂದು ಉತ್ತರೀಯವನ್ನು ಮಾತ್ರ ತೆಗೆದು ಕೊಂಡು ಪಿತಾ)ಲಯವನ್ನು ಬಿಟ್ಟು ಹೊರ ಟುಹೋದನು, ಎಲ್ಲಿ ಹೋದನೋ ಯಾರೂ ಅರಿಯರು, ಯಾರೂ ವಿಚಾರಿಸಲೂ ಇಲ್ಲ. 'ಖSSON 5
ಪುಟ:ಚಂದ್ರಶೇಖರ.djvu/೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.