9છે ಚಂದ್ರಶೇಖರ ಈ ಸಮಯದಲ್ಲಿ ಅವರಿಬ್ಬರೂ ಅಂಧಕಾರದಲ್ಲಿ ಒಬ್ಬ ದೀರ್ಘಾಕಾರವುಳ್ಳ ಪುರುಷ ಮೂರ್ತಿಯು ಗಂಗಾ ತೀರಾಭಿಮುಖವಾಗಿ ಹೋಗುತಲಿದ್ದುದನ್ನು ಕಂಡು ಭಯವಿಹ್ನ ಲರಾದರು. ನೋಡಿ ಅವರಿಬ್ಬರೂ ಮರದ ನೆರಳಿನಲ್ಲಿ ಅದರ ಹಿಂದೆ ಔತುಕೊಂಡರು. ಪುನಃ ನೋಡುತಿದ್ದ ಹಾಗೆ ಆ ಮನುಷ್ಯನು ತಾನು ಹೋಗುತ್ತಿದ್ದ ಗಂಗೆಗೆ ಹೋಗುವ ಮಾರ್ಗವನ್ನು ಬಿಟ್ಟು, ಇವರು ಆಶ್ರಯಿಸಿಕೊಂಡು ನಿಂತಿದ್ದ ಮರದ ಕಡೆಗೆ ಬರುವು ದನ್ನು ಕಂಡು ಪುನಃ ಭಯದಿಂದ ಕುಂದಿ ಇನ್ನೂ ಹೆಚ್ಚು ಅಂಧಕಾರವಾಗಿದ್ದ ಕಡೆಗೆ ಸರಿದರು. ದೀರ್ಘಕಾರನಾದ ಪುರುಷನು ಅಲ್ಲಿಗೆ ಬಂದು, ಇಲ್ಲಿಗೆ ನೀವೇತಕ್ಕೆ ಬಂದಿರಿ ? ಎಂದು ಕೇಳಿ ತನ್ನೊಳು ತಾನೇ, ನನ್ನ ಹಾಗೆ ನಿತಿಯಲ್ಲಿ ಮಾರ್ಗದಲ್ಲಿ ಜಾಗರಣಮಾಡುವ ಹತಭಾ ಗ್ಯರು ಮತ್ತಾರು ಇರುವರೆಂದು ಯೋಚಿಸಿದನು. ದೀರ್ಘಾಕಾರ ಪುರುಷನನ್ನು ಕಂಡು ಭಯಪಟ್ಟಿದ್ದ ಹೆಂಗಸರು ಅವನ ಕಂತಸ್ವರ ವನ್ನು ಕೇಳಿ ಅವರ ಭಯವು ದೂರವಾಯಿತು. ಕಂಗವು ಅತಿಮಧುರವಾಗಿಯೂ ಅವನಾಡಿದಮಾತು ದುಃಖ ಮತ್ತು ದಯಾಪೂರ್ಣವಾಗಿತ್ತು. ಕುಲಸಂ-ನಾವು ಹೆಂಗಸರು, ನೀವಾರು ? ಪುರುಷ- ನಾವು ' ಎಂದ ಹೇಳುತ್ತೀರಿ-ನೀವು ಎಷ್ಟುಮಂದಿ ? ಕುಲಸಂ-ನಾವು ಇಬ್ಬರೆ. ಪುರುಷ-ಇಷ್ಟು ರಾತ್ರಿಯಲ್ಲಿ ನೀವಿಬ್ಬರೂ ಇಲ್ಲೇನುಮಾಡುತ್ತೀರಿ ? ಆಗ ದಳನಿಯು, ನಾವು ಹತಭಾಗಿನಿಯರು, ನಮ್ಮ ದುಃಖವನ್ನು ಕೇಳಿ ನಿಮಿಗೇ ನಾದೀತು ? ಎಂದಳು. ಕೇಳಿ ಆಗಂತುಕನು, ಅತಿ ಸಾಮಾನ್ಯನಾದ ಮನುಷ್ಯನಿಂದಲೂ ಉಪಕಾರವಾಗ ಬಹುದು. ನೀವು ಏನಾದರೂ ವಿಪದ ಸರಾಗಿದ್ದರೆ ಸಾಧ್ಯಾನುಸಾರವಾಗಿ ನಾನು ನಿಮಗೆ ಉಪಕಾರವನ್ನು ಮಾಡುಶೆನೆಂದನು. ದಳನಿ-ನಮಗೆ ಉಪಕಾರವನ್ನು ಮಾಡುವುದು ಪ್ರಾಯಃ ಅಸಾಧ್ಯ-ತಾವು ಯಾರು ? ಆಗಂತುಕ-ನಾನು ಒಬ್ಬ ಸಾಮಾನ್ಯನಾದ ಮನುಷ್ಯನು. ದರಿದ ಬ್ರಾಹ್ಮಣ. ಬ್ರಹ್ಮಚಾರಿ. ದಳನೀ-ತಾವು ಯಾರೇ ಆಗಲಿ-ಚಿಂತೆಯಿಲ್ಲ, ತಮ್ಮ ಮಾತನ್ನು ಕೇಳಿದರೆ ತಮ್ಮನ್ನು ನಂಬಬೇಕೆಂದು ಇಸ್ಮವಾಗುತ್ತದೆ. ನೀರಿನಲ್ಲಿ ಮುಣುಗಿ ತೇಲಿಹೋಗುತಲಿರುವವನು ಕೈಗೆ ಸಿಕ್ಕಿದ ಅವಲಂಬನದ ಯೋಗ್ಯತಾಯೋಗ್ಯತೆಯನ್ನು ಕುರಿತು ವಿಚಾರಮಾಡುವು ದಿಲ್ಲ, ಆದರೆ ನಮ್ಮ ವಿಪತ್ತನ್ನು ಕೇಳಲು ಇಷ್ಮವಿದ್ದರೆ ರಾಜಮಾರ್ಗವನ್ನು ಬಿಟ್ಟು ಸ್ವಲ್ಪ
ಪುಟ:ಚಂದ್ರಶೇಖರ.djvu/೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.