ಎರಡನೆಯ ಭಾಗ કમ ದೂರ ಹೋಗಬೇಕು, ರಾತ್ರಿಹೊತ್ತು, ಯಾರಾದರೂ ಇಲ್ಲಿ ಎಲ್ಲಾದರೂ ಇದ್ದು ಕೇಳಿ ದರೂ ಕೇಳಬಹುದು, ನಮ್ಮ ವಿಚಾರವನ್ನು ಎಲ್ಲರಿದಿರಿಗೂ ಹೇಳತಕ್ಕದ್ದಲ್ಲ. - ಬ್ರಹ್ಮಚಾರಿಯು, ಹಾಗಾದರೆ ನೀವು ನಮ್ಮ ಸಂಗಡ ಬನ್ನಿರೆಂದುಹೇಳ ಕುಲಸಂ ಮತ್ತು ದಳನಿಯನ್ನು ಸಂಗಡ ಕರೆದುಕೊಂಡು ನಗರಾಭಿಮುಖವಾಗಿ ಹೋದನು. ಒಂದು ಚಿಕ್ಕದಾದ ಮನೆಯಯಿದಿರಿಗೆ ಹೋಗಿ ಅಲ್ಲಿ ಬಾಗಿಲನ್ನು ತಟ್ಟಿ, ರಾಮಚರಣ ! ಎಂದು ಕೂಗಿದನು. ರಾಮಚರಣನು ಬಂದು ಬಾಗಿಲನ್ನು ತೆರೆದನು. ಬ್ರಹ್ಮಚಾರಿಯು ರಾಮಚರಣನಿಗೆ ಬೆಳಕನ್ನು ತರುವಹಾಗೆ ಹೇಳಿದನು. ರಾಮಚರಣನು ದೀಪವನ್ನು ಹತ್ತಿಸಿ, ಬ್ರಹ್ಮಚಾರಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿದನು, ಬ್ರಹ್ಮಚಾರಿಯು ರಾಮಚರಣನನ್ನು ಕುರಿತು, ನೀನು ಹೋಗಿ ಮಲಗು ಎಂದು ಹೇಳಿ ದನು. ರಾವಂಚರಣನು ಕೂಡಲೆ ಕುಲಸಂ ಮತ್ತು ದಳನಿಯನ್ನು ಒಂದು ತಡವೆ ನೋಡಿ ಹೊರಟುಹೋದನು, ಅನನು ಪುನಃ ಆ ರಾತ್ರಿ ನಿದ್ರೆ ಹೋಗಲಿಲ್ಲ ವೆಂದು ಹೇಳಬೇಕಾದ ಅವಶ್ಯಕವಿಲ್ಲ. ಅವನ ಮನಸ್ಸಿನಲ್ಲಿ, ಬ್ರಹ್ಮಚಾರಿಯು ಇಷ್ಟು ರಾತ್ರಿಯಲ್ಲಿ ಇಬ್ಬರು ಯುವತಿಯರಾದ ಹೆಂಗಸರನ್ನು ಜತೆಯಲ್ಲಿ ಏತಕ್ಕೆ ಕರೆದುಕೊಂಡು ಬಂದಿರಬಹುದೆಂಬ ಯೋಚನೆಯು ಬಹಳ ಪ್ರಬಲವಾಗುತ್ತಬಂದಿತ), ರಾಮಚರಣನು ಬ್ರಹ್ಮಚಾರಿಯನ್ನು ಸಾಕ್ಷತೆ ದೇವರೆಂದು ತಿಳಿದುಕೊಂಡಿದ್ದನು, ಮತ್ತು ಅವನನ್ನು ಜಿತೇಂದಿ)ಯನೆಂತಲೂ ತಿಳಿದಿದ್ದನು. ಆ ನಂಬುಗೆಯಲ್ಲಿ ಏನೂ ಕೊರತೆ ಬರಲಿಲ್ಲ. ಕಡೆಗೆ ರಾಮಚರಣನು, ಈ ಇಬ್ಬರು ಹೆಂಗಸರೂ ಪ್ರಕೃತ, ಪತಿವಿಯೋಗವುಳ್ಳವರಾಗಿರ ಬೇಕೆಂದೂ, ಪತಿಯೊಂದಿಗೆ ಸಹಗಮನ ಮಾಡುವುದಕ್ಕೋಸ್ಕರ ಇವರಿಗೆ ಉಪದೇಶಮಾ ಡುವುದಕ್ಕೆ ತಾಕ್ರನು ಅವರನ್ನು ಕರೆತಂದಿದ್ದಾನೆಂದೂ ಮನಸ್ಸಿನಲ್ಲಿ ಸಿದ್ಧಾಂತವಾಡಿ ಕೊಂಡು, ಏನು ಅನ್ನಾದು ! ಇದುವರೆಗೂ ಅಮ್ಮ ತಿಳಿದುಕೊಳ್ಳಲಾರದೆ ಹೋದೆನಲ್ಲ ! ಎಂದಂದುಕೊಂಡು ಪಶ್ಚಾತ್ತಾಪ ಪಟ್ಟುಕೊಂಡನು. - ಬ್ರಹ್ಮಚಾರಿಯು ಬಂದು ಆಸನದಲ್ಲಿ ಕುಳಿತುಕೊಂಡನು. ಹೆಂಗಸರಿಬ್ಬರೂ ನೆಲದ ಮೇಲೆ ಕುಳಿತುಕೊಂಡರು. ಮೊದಲು ದಳನಿಯು ತನ್ನ ಸ್ವಂತ ಪರಿಚಯವನ್ನು ಹೇಳಿದಳು. ಆನಂತರ, ಆ ರಾತ್ರಿಯಲ್ಲಿ ನಡೆದ ವೃತ್ತಾಂತವನೆಲ್ಲ ಕಪಟವಿಲ್ಲದೆ ವಿವ ರಿಸಿ ಹೇಳಿದಳು. ಕೇ? ಬಹ್ಮಚಾರಿಯು ಮನಸ್ಸಿನಲ್ಲಿ, ಭವಿತವ್ಯವನ್ನು ಯಾರು ತಾನೇ ನಿಲ್ಲಿಸುವುದ ಕ್ಯಾದೀತು ? ಆಗತಕ್ಕದ್ದು ಅವಶ್ಯಕವಾಗಿ ಆಗಿಯೇ ತೀರುವುದು, ಆದರೆ ಹಾಗಂದು ಕೊಂಡು ಪುರುಷಾಕಾರವಾದ ನಮ್ಮ ಪ್ರಯತ್ನವನ್ನು ಮಾಡದಿರಕೂಡದು, ಮಾಡತ ಆದ್ದನ್ನು ಅವಶ್ಯವಾಗಿ ಮಾಡುವೆನೆಂದಂದುಕೊಂಡನು. ಅಯ್ಯೋ ! ಬ್ರಹ್ಮಚಾರಿಯೆ ! ಗ್ರಂಥಗಳನ್ನೆಲ್ಲಾ ಏತಕ್ಕೆ ಸುಟ್ಟು ಬೂದಿಮಾಡಿಬಿಟ್ಟೆ ! ಗ್ರಂಥಗಳೆಲ್ಲಾ ಭಸ್ಮಮಯವಾಯಿತಲ್ಲ ! ಆದರೆ ಹೃದಯದಲ್ಲಿದ್ದ ಗ್ರಂಥಿಯೋನೋ ಭಸ್ಮ
ಪುಟ:ಚಂದ್ರಶೇಖರ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.