ಭಿಕ್ಷಾಟನಲೀಲೆ +4 ದವನಾಗಿ, ಈತನೇನು ಶೃಂಗಾರರಸದ ಅಟ್ಟೋ ! ಮುಕ್ತಿಯ ಗುರು ವೊ ! ಮೋಹರಸದ ಸಮುದ್ರವೋ ! ಪುಣ್ಯದ ದೇಹವೋ ! ಸೌಖ್ಯ ವೆಂಬ ಬಳ್ಳಿಯ ಹೊಸಕುಡಿಯೋ ! ಸೊಗಸಿನ ಮನೆಯೋ ! ಪ್ರಣವದ ಜೋಡಿಯೋ ! ಶುಭದ ಆಕಾರವೋ ! ಶಿವತತ್ರ ದ ಸಾರವೋ ! ಮ ನೃಢರಾಜ್ಯದ ಬೆಳಸೋ ! ಭಕ್ತಿಯ ಬೆಳಕೋ ! ಎಂಬದಾಗಿ ಶಿವಯೋ ಗಳು ಯೋಚಿಸುತ್ತಿರಲು, ಮೋಹಬ್ರಹ್ಮನಾದ ಆ ಪರಶಿವನು ನಡೆ ಗೊಂಡನು ಮೊದಲು ವಿಷ್ಣುವಿನ ವೈಕುಂಠಲೋಕಕ್ಕೆ ತೆರಳ, ಆ ಪಟ್ಟ ಇವ ರಾಜವಿಧಿಯಲ್ಲಿ ಬರುತ್ತಿರಲು, ಅಲ್ಲಿನ ಸ್ತ್ರೀ ಜನವು ಈ ಮಹಾ ದೇವನ ಸಂದರ ಲಾವಣ್ಣಾದಿಗಳನ್ನು ನೋಡುವ ಆಸೆಯಿಂದ ತಮ್ಮ ಮನೆಗೆಲಸವನ್ನೆಲ್ಲ ಹಾಗೆ ಹಾಗೆಯೇ ಬಿಟ್ಟು, ಒಬ್ಬರಮೇಲೊಬ್ಬರು ಬಿ ದ್ದು ಓಡಿಬಂದು, ಸಾಲುಸಾಲಾಗಿ ನಿಂತು, ನೋಡಿ, ಆಳ್ವರಪಟ್ಟು, ಕಾ ನವಿಲೆಯಾಗುತ್ತಿದ್ದರು. ಆಗ ಪರಶಿವನು ನೆಟ್ಟಗೆ ಹರಿಯ ಅರಮ ನೆಯ ಬಾಗಿಲಿಗೆ ಬಂದು ಬಳಹುಗುತ್ತಿದ್ದನು. ದ್ವಾರಪಾಲಕನಾಗಿದ್ದ ವಿಷ್ಯಕ್ಕೇನನು ಒಳಕ್ಕೆ ಹೋಗಲಾಗದೆಂದು ಶಿವನನ್ನು ತಡೆಯಲು, ಆ ಕೂಡಲೆ ಅವನನ್ನು ಕರದ ಶೂಲದಿಂದಿರಿದು ಮೇಲಕ್ಕೆತ್ತಿದನು. ಶೂಲದ ಮೇಲಿರುವ ವಿಷಕೈನನು ಆ ಏಟಿಗೆ ಹೆದರದೆ ಕೇಕೆಹಾಕಿ ನಕ್ಕನು. ನಗುವುದಕ್ಕೆ ಕಾರಣವೇನೆಂದು ಶಿವನು ಕೇಳಲು, ಬ್ರಹ್ಮ ನಿಗುಕೂಡ ಗೋಚರವಾಗದ ನಿನ್ನ ಶಿರಸ್ಸಿನ ದರ್ಶನವು ನನಗೆ ಆದುದೇ ನನ್ನ ಸಂತೋ ಪಕ್ಕೆ ಕಾರಣವೆಂದು ನುಡಿದನು. ಆಗ ಶಿವನು ಮೆಚ್ಚಿ, ಶೂಲದಿಂದವ ನನ್ನು ಕೆಳಕ್ಕಿಳುಹಲು ಪ್ರಯತ್ನಿಸಿದನು, ತನ್ನನ್ನು ಅಲ್ಲೇ ಇರಿಸಬೇ ಕೆಂದು ವಿಷ್ಯಕ್ಕೇನನು ಪ್ರಾರ್ಥಿಸಿಕೊಂಡು ಶೂಲಾಗ್ರದ ಮೇಲೆಯೇ ನೆಲಸಿದನು. ಇವ್ಯರಲ್ಲಿ ಒಬ್ಬನು ಒಳಕ್ಕೆ ಹೋಗಿ ನಡೆದ ಸಂಗತಿಯ ನೈಜ ವಿಷ್ಣುವಿಗೆ ಅರಿಕೆಮಾಡಿದನು. ಆಗ ಹರಿಯು ಥಟ್ಟನೆದ್ದು ಓಡಿ ಬಂದು, ಬಾಗಿಲಲ್ಲಿ ನಿಂತಿರುವ ಶಿವನನ್ನು ಕಂಡು, ಹಿಗ್ಗಿ, ಭಕ್ತಿಯಿಂದ ದೂರದಲ್ಲೇ ಭೂಮಿಯಮೇಲೆ ಅಡ್ಡಬಿದ್ದು, ಕುಣಿದಾಡಿ, ಜಯ ಜಯ ! ವಿರೂಪಾಕ್ಷ ! ವಿಶೇಶ ! ಜನನಮರಣವಿನಾಶ ! ಕರುಣಾಕೋಶ ! ಜಯಜಯ ! ಎಂದು ಮೊದಲಾಗಿ ಸ್ತುತಿ ಮಾಡುತ್ತಿದ್ದನು. ಪರಶಿವನು
ಪುಟ:ಚೆನ್ನ ಬಸವೇಶವಿಜಯಂ.djvu/೧೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.