+6 ಚೆನ್ನ ಬಸವೇಶದಿಜಯಂ (Fಂಡ ) [అధ్యాయ ಯೂ, ನಿಧಿಯನ್ನು ಕಂಡ ಬಡವನಂತೆಯೂ, ದೇವೇಂದ್ರನು ಮೈಯು ಬೈ, ರೋಮಾಂಚವೇರಿ, ಆನಂದಬಾಷ್ಟ್ರಗಳನ್ನು ಸುರಿಸಿ, “ ದೇವದೇ ವೋತ್ತಮನೇ ! ಈ ದಿವಸ ತನ್ನ ಆಗಮನದಿಂದ ನನ್ನ ಪುಣ್ಯಲತೆಯು ಫಲಿಸಿತು. ಮುಕ್ತಿ ನದಿ ಪ್ರವಾಹವೇ ಹರಿದುಬಂದಂತಾಯಿತು. ನನ್ನ ಜನ್ಮಾಂತರಗಳೆಲ್ಲ ಸಫಲವಾದುವ್ರ ?” ಎಂದು ನಾನಾವಿಧವಾಗಿ ಕೊಂಡಾ ಡಿ, ಮತ್ತೆ ನಮಸ್ಕರಿಸಿದನು. ದಂಪತಿಗಳಿರರನ್ನೂ ಪರಶಿವನು ಕರು ಣಾಕಟಾಕ್ಷದಿಂದ ನೋಡಿ ಪಿಡಿದೆತ್ತಿದನು. ಅಷ್ಟರಲ್ಲಿ " ಎಲೆ ದೇವೇಂ ದನೆ, ಪರಶಿವನ ಹಸ್ತಕಮಲದಲ್ಲಿರುವ ಬ್ರಹ್ಮನ ಕಪಾಳಕ್ಕೆ ನಿನ್ನ ಶಕ್ತಿ ವಂಚನೆಯಿಲ್ಲದಂತೆ ಭೀಕ್ಷೆಯಂ ನೀಡು ?” ಎಂದು ಆಕಾಶವಾಣಿಯಾಯಿ ತು, ಅದನ್ನು ಇಂದ್ರನು ಕೇಳಿ, ಎಚ್ಚತ್ತು, ಗಣನಾತೀತವಾದ ವಸ್ತುಗ ಳನ್ನು ತಂದು ಆ ಕಾಲಕ್ಕೆ ಭಿಕ್ಷೆಯ ನೀಡೆಂದು ಪತ್ನಿಯಾದ ಶಚಿಗೆ ಆಜ್ಞಾಪಿಸಿದನು. ಆಕೆಯು ೫ ಲಕ್ಷ ದೇವತಾಸ್ತಿ ಯರೊಡನೆ ಕೂ ಡಿ ರ ಖಚಿತವಾಬಂಗಾ ದ ಬಟ್ಟಲುಗಳಲ್ಲಿ ತಮ್ಮ ಮನೆಯಲ್ಲಿದ್ದ ಧನ ಕನಕಾದಿ ಸಕಲೈಶ್ರವನ್ನೂ ತಂದು ನೀಡುತ್ತಿದ್ದಳು. ಎಷ್ಟ್ರನ್ನು ನೀಡಿ ದರೂ ಕಪಾಲವು ತುಂಬದೆ ಇರಲು, ಇಂದ್ರನು ಚಿಂತಾರತ್ನವನ್ನೂ ಅ ಮೃತಕಲಶವನ್ನೂ ನೀಡುವುದಕ್ಕೆ ಬಂದನು. ಆಗ ಶಂಕರನು ಓ ಹೊ ಸಾಕು ಸಾಕು ನಿಲ್ಲಿಸು, ಈ ಅಮೃತವು ದೇವತೆಗಳ ಜೀವನಕ್ಕೆ ಆಧಾರವಾದುದು, ಇದನ್ನು ಕಳೆಯದೆ ಜೋಕೆಯಿಂದಿಡಬೇಕು ” ಎಂ ದು ಹೇಳಿ ನಿಲ್ಲಿಸಿ, ಅವರನ್ನನುಗ್ರಹಿಸಿ, ಅಲ್ಲಿಂದ ಅಗ್ನಿಯ ಪುರಕ್ಕೆ ಹೋ ಗಿ ಸತ್ಕಾರಗೊಂಡು, ಅಲ್ಲಿಂದ ಯಮಪುರದ ಕಡೆಗೆ ತೆರಳಿದನು. ಅಲ್ಲಿ ಹುಳುಗೊಂಡ ಮೊದಲಾದ ಅನೇಕ ಕೊಟ್ಟಂತರ ಸಾಮಾನ್ಯನರಕಗ ಭೂ, ಎಪ್ಪತ್ತೆಂಟುಕೋಟಿ ನಾಯಕನದಕಗಳ, ಅದರಲ್ಲೆಲ್ಲ ಯಾತನೆ ಗೊಳ್ಳುತ್ತಿರುವ ನಾರಕಿಗಳೂ ತುಂಬಿದ್ದ ರು. ಅವರೆಲ್ಲರೂ ಈ ಶಿವನ ದರ್ಶನಮಾತ್ರದಿಂದಲೇ ಬಂಧಮುಕ್ತರಾಗಿ ಶೈವಲೋಕಕ್ಕೆ ತೆರಳಿದರು. ಅಲ್ಲಿಂದ ನೆಟ್ಟಗೆ ಯಮನರಮನೆಗೆ ಹೋಗಿ, ಅವನಿಂದ ಸತ್ಕಾರಂಗೊಂಡು, ಅಲ್ಲಿಂದ ನಿಯ್ಯತಿ, ವರುಣ, ವಾಯು, ಕುಬೇರ, ಈಶಾನರ ಲೋಕಗಳ ಗೆಲ್ಲ ಹೋಗಿ, ಅವರಿಂದ ಯಥೋಚಿತಭಿಕ್ಷೆಯನ್ನು ಪಡೆದು ಹೊರಟು,
ಪುಟ:ಚೆನ್ನ ಬಸವೇಶವಿಜಯಂ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.