ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hb೫ ] ವಿಷಕಂಠಲೀಲೆ ವಾದಿಗಳಿಗೆಲ್ಲ ಅಭಯವನ್ನು ಕೊಟ್ಟು, ಆ ಕರಮಹಾವಿಷವನ್ನು ನೋಡಿ, ಬಾರೆಂದು ಕರೆಯಲು, ಅದು ಮಹಾ ಭೀತಿಯಿಂದ ಒಟ್ಟುಗೂ ಡಿ ಬಂದು, ಶಿವನ ಅಂಗೈಯಲ್ಲಿ ಕೃಷ್ಣಮಣಿಯಂತೆ ನಿಂತಿತು. ಲೋಕ ವೆಲ್ಲ ಹರ್ಷಾದ್ದಿ ಯಲ್ಲಿ ಮುಳುಗಿ, ಶಿವನನ್ನು ಹೊಗಳಿತು. ಆಗ ಶಿವನು ಕರದಲ್ಲಿರುವ ವಿಷವನ್ನು ನೋಡುವಲ್ಲಿ ಅದರೊಳಗೆ ತನ್ನ ಪ್ರತಿಬಿಂಬವು ಕಾಣಿಸಿಕೊಂಡಿತು, ಅದನ್ನು ಹೊರಹೋಗೆಂದು ನಿಯಮಿಸಲು, ಅದು ಪುಪ್ಪದತ್ತನೆಂಬ ಹೆಸರಿನಿಂದ ಹೊರನಿಂತಿತು. ಆ ವಿಷವನ್ನು ಕುಡಿದು ಬಿಟ್ಟರೆ ಹೊಟ್ಟೆಯಲ್ಲಿರುವ ಲೋಕವು ದಹಿಸಿಹೋದೀತೆಂದು ಯೋಚಿಸಿ, ಶಂಕರನು ಅದನ್ನು ತನ್ನ ಗಂಟಲಲ್ಲಿ ಧರಿಸಿಕೊಂಡನು. ಬಳಿಕ ವಿಷ್ಣು ಬ್ರಹ್ಮಾದಿಗಳೆಲ್ಲರನ್ನೂ ಹತ್ತಿರಕ್ಕೆ ಕರೆದು, ಅಗ್ರಭಾಗವು ನಮಗೆ ಸಂದಂ ತಾಯಿತು; ಇನ್ನು ಮೊದಲಿನಂತೆಯೇ ಸಮುದ್ರವನ್ನು ಕಡೆಯಿರಿ; ನಿಮ್ಮಿ ಪ್ಲಾರ್ಥವು ಜನಿಸುವುದು, ಎಂದು ಅನುಗ್ರಹಿಸಿ, ಅಂತರ್ಹಿತನಾದನು. ಬಳಿಕ ದೇವಾಸುರರೆಲ್ಲರೂ ಶಿವನಪ್ಪಣೆಯನ್ನು ನಂಬಿ, ಮುನ್ನಿನಂತೆ ಶೇ ಪನ ತಲೆ ಬಾಲಗಳ ಕಡೆಗೆ ಹಿಡಿದು ಕಡೆಯಲಾರಂಭಿಸಿದರು, ಆಗ ಶೀತ ಮಯವಾದ ಚಂದ್ರಮಂಡಲವು ಆವಿರ್ಭವಿಸಿತು. ಅದರ ಶೈತ್ಯದಿಂದ ಸಕ ಲರ ಕೈಕಾಲ್ಗಳೊ ಸೆಳೆದುಕೊಂಡುವು ಇದರ ರೀತಿಯು ವಿಷದ ಭೀತಿ ಗೇನೂ ಕಡಿಮೆಯಾಗಲಿಲ್ಲ. ಆಗ ದೇವಾಸುರರು ಮತ್ತೆ ಶಿವನನ್ನು ಧ್ಯಾ ನಿಸಿದರು, ಸ್ವಾಮಿಯು ಪ್ರಕ್ಷನಾಗಿ, ಚಂದ್ರನ ಹದಿನಾರನೆಯೊಂದು ಭಾಗವನ್ನು ತನ್ನ ಶಿರಸ್ಸಿನಲ್ಲಿ ಧರಿಸಿ, ಚಂದ್ರನನ್ನು ಕುರಿತು ನೀನಿನ್ನು ಭೂತಲಕ್ಕೆ ಸಮೀಪದಲ್ಲಿರದೆ ೨ ಲಕ್ಷ ಯೋಜನದಲ್ಲಿರು; ಮತ್ತೂ ಭೂ ಮಿಯ ಸಕಲೌಷಧಿಗಳನ್ನೂ ದೇವತೆಗಳನ್ನೂ ನಿನ್ನ ಕಿರಣಾಮೃತದಿಂದ ರಕ್ಷಿಸಿಕೊಂಡಿರು; ಎಂದು ನಿಯಮಿನಿ ಕೈಲಾಸಕ್ಕೆ ತೆರಳಿದನು. ಬಳಿಕ ದೇವಾಸುರರು ಸಂತುಷ್ಯರಾಗಿ, ಯಥಾಪ್ರಕಾರವಾಗಿ ಕಡೆಯಲು, ಲ ಕ್ರೈ, ಐರಾವತ, ಕಾಮಧೇನು, ಕಲ್ಪವೃಕ್ಷ, ಚಿಂತಾರತ್ನ, ಅಮೃತಕ ಲಠ, ಉಜ್ಞೆಶ್ರವಸ್ಸು, ಮೊದಲಾದ ಸಂಪತ್ತುಗಳೆಲ್ಲವೂ ಒಂದೊಂದಾಗಿ ಆವಿರ್ಭವಿಸಿದವು, ವಿಷ್ಣುವು ಲಕ್ಷ್ಮಿಯನ್ನು ಪರಿಗ್ರಹಿಸಿದನು, ಉಳಿದು ನನ್ನೆಲ್ಲ ದೇವೇಂದ್ರನಿಗೆ ಕೊಟ್ಟರು. ಆಗ ರಾಕ್ಷಸರು ಎಲ್ಲವನ್ನೂ ಬಿಟ್ಟು 14