ಚನ್ನ ಬಸವೇಕವಿಜಯಂ (ಕಾಂಡ ) (ಅಧ್ಯಾಯ ಅಮೃತಕಲಶವನ್ನು ಮಾತ್ರ ಕದ್ದು ಕೊಂಡು ಎದ್ದನು. ಇನ್ನು ರಾಕ್ಷಸರು ಅಮ್ಮತವನ್ನು ಕುಡಿದುಬಿಟ್ಟರೆ ಮರಣವಿಲ್ಲದವರಾಗಿ ತಮಗೆ ನಿತೃವೈರಿಗ ೪ಾಗಿ ನಿಲ್ಲುವರೆಂಬ ಭ ಮದಿಂದ ದೇವತೆಗಳೆಲ್ಲ ಎದೆಯಾರಿ ಬಾಯ್ಕಾಯ್ದಿ ಟ್ಟರು, ವಿಷ್ಣುವು ಉಪಾ ಯಾಂತರದಿಂದದನ್ನು ತರಬೇಕೆಂದು ಯೋಚಿ ನಿ, ಮೋಹಿನಿ ರೂಪವನ್ನು ಧರಿಸಿ, ಆ ರಾಕ್ಷಸರಿದ್ದ ವನಕ್ಕೆ ಹೋದನು. ರಾಕ್ಷಸರೆಲ್ಲರೂ ಈ ಮೋಹಿನಿಯ ಸೌಂದರದಿಂದ ಬೆರಗಾದರು. ದೇ ವರಾಕ್ಷಸರು ಅಮೃತಕಲಶಕ್ಕಾಗಿ ವಾಗ್ವಾದ ಮಾಡುತ್ತಿದ್ದರು. ಆ ಕ ಲಸವನ್ನು ನಿಲ್ಲಿಸುತ್ತೆ... ರೆಂದು ಮೋಹಿನಿಯು ಪ್ರವರಿಸಿ, ದೈತ್ಯರ ಕೈಯ ಲ್ಲಿದ್ದ ಅಮೃತಕಲಶವನ್ನು ತೆಗೆದುಕೊಂಡು, ದೇವತೆಗಳನ್ನೊಂದುಸಾಲಾ ಗಿಯೂ ರಾಕ್ಷಸರನ್ನೊಂದುಸಾಲಾಗಿಯೂ ಕುಳ್ಳಿರಿಸಿ, ಇಬ್ಬರಿಗೂ ಪಕ್ಷ ಪಾತವಿಲ್ಲದಂತೆ ಅಮೃತವನ್ನೆರೆಯುತ್ತೇನೆಂದು ಅಭಿನಯಿಸಿ, ದೇವತೆಗಳ ಸಾಲಿಗೆಲ್ಲ ಅಮೃತವನ್ನೂ, ಅದರ ಬಣ್ಣದಿಂದಲೆ ಇದ್ದ ಮದ್ಯವನ್ನು ರಾಕ್ಷಸರ ಸಾಲಿಗೂ, ಹೀಗೆ ಎರಡು ಕೈಯಲ್ಲಿ ಎರಡು ಕಲಶವನ್ನು ಹಿಡಿ ದು ಎರೆಯುತ್ತಿದ್ದನು. ಈ ಕಪಟವನ್ನು ರಾಹುವೆಂಬ ರಾಕ್ಷಸನು ತಿಳಿದು ರೂಪಾಂತರದಿಂದ ದೇವತೆಗಳ ಪಬ್ಲಿಯಲ್ಲಿ ಕುಳಿತುಕೊಂಡು ಅಮೃತ ವನ್ನು ಕುಡಿದನು. ಇದನ್ನು ಸದೃಚಂದ್ರರು ತಿಳಿದು ವಿಷ್ಣುವಿಗೆ ಸನ್ನೆ ಮಾಡಿ ತಿಳಿಸಿಬಿಟ್ಟರು. ಅವನು ಚಕ್ರವನ್ನು ಬಿಟ್ಟು ರಾಕ್ಷಸನ ಕತ್ತನ್ನು ಕತ್ತರಿಸಿದನು. ಅವತರಸಪ್ರಭಾವದಿಂದ ಆ ರುಂಡಮುಂಡಗಳೆರಡೂ ಸಜೀವಿಗಳಾಗಿ ರಾಹು ಕೇತುಗಳೆಂಬ ಹೆಸರಿನಿಂದ ನಿಂತು ಸೂರಚಂದ್ರರ ಮೇಲಣ ದ್ವೇಷವನ್ನು ತೀರಿಸಿಕೊಳ್ಳುವುದಕ್ಕಾಗಿ ಈಗಳೂ ಅವರನ್ನು ಪೀಡಿಸುತ್ತಿರುವುದರಿಂದಲೇ ಗ್ರಹಣಗಳುಂಟಾಗುತ್ತಿರುವುದು ಎಂದು ಚೆನ್ನಬಸವೇಶನ ನುಡಿದನೆಂಬಿಲ್ಲಿಗೆ ೧೧ನೇ ಅಧ್ಯಾಯವು ಮುಗಿದುದು. --
ಪುಟ:ಚೆನ್ನ ಬಸವೇಶವಿಜಯಂ.djvu/೧೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.