Fov ಚನ್ನಬಸವೇಶವಿಜಯಂ, (ಕಂದ ೨) [ಅಧ್ಯಾಯ ನು ಉಳಿಯುವುದುಂಟೆ ? ನೀನೇ ಅದನ್ನು ಉಪಸಕ್ಕರಿಸಿಕೊಳ್ಳಬೇಕೆಂ ದು ಪ್ರಾರ್ಥಿಸಲು, ಶಂಕರನು ಆ ಕಿಡಿಯನ್ನು ಸೆಳೆದು ಕೈಯಲ್ಲಿ ಹಿಡಿದು ಸಮುದ್ರಕ್ಕೆ ಬಿಸುಟು C ಇಂದ್ರನೇ, ನಿನಗೆ ಶತ್ರುವನ್ನು ದಯಪಾಲಿಸಿರು ವೆನು ಹೋಗು ” ಎಂದು ಹೇಳಿ ಕಳುಹಿದನು. ಇಂದ್ರನು ಸಂತೋಷ ದಿಂದಮರಾವತಿಯನ್ನು ಸೇರಿದನು, ಅತ್ತ ಶಿವನು ಬಿಸುಡಿದ ಅಗ್ನಿ ಕಣವು ಶಿಶುವಾಗಿ ಗಂಗಾಸಮುದ್ರ ಸಂಗಮಸ್ಥಲದಲ್ಲಿ ಮಲಗಿ ಅಳುತ್ತಿದ್ದಿತು. ಸಮುದ್ರರಾಜನು ಶುಂಭನೆಂಬ ತನ್ನ ಮಗನು ಅಳಿದುಹೋಗಲು, ದೇ ವೇಂದ್ರನನ್ನು ಗೆಲ್ಲುವ ಪರಾಕ್ರಮದ ಮಗನೊಬ್ಬನನ್ನು ಪಡೆಯಬೇಕೆಂ ದು ಶಿವನನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದು, ಅಕಸ್ಮಾತ್ತಾಗಿ ಅಳು ತಿರುವ ಈ ಶಿಶುವನ್ನು ಕಂಡು ಸಂತೋಪ್ರದಿಂದೆತ್ತಿ ತೊಡೆಯಮೇಲೆ ಮಲಗಿಸಿಕೊಂಡನು. ಆ ಶಿಶುವಾದರೆ ಬ್ರಹ್ಮಾಂಡಕಟಾಹವು ಸಿಡಿದೊ ಡೆಯುವಂತೆ ಅಬ್ಬರಿಸಿಕೊಂಡಿತು. ಬ್ರಹ್ಮನು ಇದೆಲ್ಲಿಯ ಶಬ್ದವೆಂದು ಆಶ್ಚಗಪಟ್ಟು, ಈ ಮಗುವಿದ್ದ ಬಳಿಗೆ ಬಂದನು. ಸಮುದ್ರರಾಜನು ಬ್ರಹ್ಮನನ್ನು ನೋಡಿ, ಭಕ್ತಿಯಿಂದ ನಮಸ್ಕರಿಸಿ, ಈ ಮಗನಿಗೆ ನಾಮ ಕರಣವನ್ನು ಮಾಡಿ ಲೋಕದಲ್ಲಿ ಯಾರಿಂದಲೂ ಮರಣ ವುಂಟಾಗದಂತೆ ಆಶೀರ್ವದಿಸಿರೆಂದು ಹೇಳಿ, ಅವನ ಕೈಗೆ ನಗುವನ್ನು ಕೊಟ್ಟನು. ಬ್ರ ಹೈನು ಮಗುವನ್ನು ತೊಡೆಯಮೇಲೆ ಮಲಗಿಸಿಕೊಂಡು ಆ ಮಗುವಿನ ಶುಭಾಕೃತಿಯ ಚೆಲ್ವಿಕೆಯನ್ನು ನೋಡುತ್ತಿರಲು, ಮಗುವು ಬ್ರಹ್ಮನ ಗಡ್ಡವನ್ನು ಹಿಡಿದು ಸೆಳೆದಿತ್ತು. ಅದರಿಂದ ನೋವುಂಟಾಗಲು, ಬ್ರಹ್ಮನ ಕಣ್ಣಿನಿಂದ ನೀರು ಸುರಿದು ಮಗುವಿನ ಮೇಲೆ ಬಿದ್ದಿತು. ಬ್ರಹ್ಮನು ಗಡ್ಡವನ್ನು ಮೆಲ್ಲಗೆ ಬಿಡಿಸಿಕೊಂಡು, ಎಲೆ ಸಮುದ್ರನೇ ! ಈ ಮಗನು ನನ್ನ ಕಣ್ಣಿನ ಜಲವನ್ನು ಧರಿಸಿಕೊಂಡನಾದಕಾರಣ ಇವನಿಗೆ : ಜಲಂ ಧರ ?” ನೆಂಬ ನಾಮವು ಸಲ್ಲುವುದು, ಇವನು ಸಾಮಾನ್ಯನಲ್ಲ, ಯಾರಿಂ ದಿವನ ಜನನವಾಯಿತೋ ಅವನಿಂದಲೇ ಅಪೂರವಾದಾಯುಧದಿಂದ ಇವ ನಿಗೆ ಮರಣವಲ್ಲದೆ, ಉಳಿವ ಈ ಸಣ್ಣ ದೇವಾಸುರ ಮನುಜಕುಲದಿಂದ ಮರಣವಿಲ್ಲವೆಂದು ಆಶೀರ್ವದಿಸಿ, ಶುಕ್ರಾಚಾಗೃನ ಮೂಲಕವಾಗಿ ಅವ ನಿಗೆ ಅಸುರರಾ ಜಪಟ್ಟವನ್ನು ಕಟ್ಟಿಸಿ, ಬೀಳ್ಕೊಂಡು ತೆರಳಿದನು. ಇತ್ಯ
ಪುಟ:ಚೆನ್ನ ಬಸವೇಶವಿಜಯಂ.djvu/೧೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.