೧] ವಲಂಧರಾಸುರನ ಆಭ ೧of ಜಲಂಧರನು ದಿನೇ ದಿನೆ ಪ್ರವರ್ಧಮಾನನಾದನು. ಶುಕ್ರನು ಈ ಜಲಂಧ ರಾಸುರನಿಗೆ ಕೌಂಚಾಸುರನ ಮಗಳಾದ ವೃಂದೆಯನ್ನು ತಂದು ದೇವೇಂ ದ್ರವೈಭವದಿಂದ ವಿವಾಹ ಮಾಡಿದನು, ಈತನು ಜಾಳಂಧರವೆಂಬ ಹೆಸ ರಿನಿಂದ ಒಂದು ಹೊಸಪಟ್ಟಣವನ್ನು ಕಟ್ಟಿಸಿ, ಗಿರಿಗುಹಾದಿಗಳಲ್ಲಡಗಿ ಕೊಂಡಿದ್ದ ರಾಕ್ಷಸರನ್ನೆಲ್ಲ ಬರಮಾಡಿ ಆ ಪಟ್ಟಣದಲ್ಲಿರಿಸಿಕೊಂಡು ಪತ್ನಿ ಸಮೇತನಾಗಿ ಸುಖದಿಂದಿರುತ್ತಿದ್ದನು. ಇವನು ಸಭೆಯಲ್ಲಿ ಒಡೋಲ ಗಂಗೊಟ್ಟಿರುವಾಗ ಶುಕ್ರಾಚಾರನು ಬಲಗಡೆಯಲ್ಲ, ಬಂಧುವರ್ಗವೆಲ್ಲ ವೂ ಹಿಂಗಡೆಯಲ್ಲಿ ಕುಳಿತಿರಲು, ಕೆಮ್ರಾಸೆ, ಕಾರೊಡಲು, ಕೆಂಗಣ್ಣು, ಜುಂಜರುದಲೆ, ಕೋರೆದಾಡೆ, ಕೊಬ್ಬಿದ ಮುಖ, ತುಂಬಿದ ಖಂಡ, ಕರ ಶರೋಮಗಳನ್ನು ಹೊಂದಿ, ಭೀಕರಾಯುಧಗಳನ್ನು ಧರಿಸಿ, ಬಿರುದಾಂ ಕನಗಳನ್ನೂ ವಣಿಕಿರೀಟಭುಜಕೀರಿಗಳನ್ನೂ ಧರಿಸಿ, ನಿಡಿಲಂತೆ ಗರ್ಜಿ ಸುತ್ತ, ಪ್ರೇತದಂತ, ಸುಪಾರ್ಶ, ಪ್ರಜಂಘ, ಮಯ, ವಿಪ್ರಜಿತು, ವಿರೂ ಪಾಕ್ಷ, ವಿದಾವಣ, ಮಹಾನಾಭ, ಪ್ರಲೋವು, ಮರೀಚಿ, ಮದಿರ, ಕೇತು, ಜರ್ಝರ, ವಾಮನ, ಗಜಶಿರ, ಕೇತುವಿಗೂ, ನನುಚಿ, ಚಂಡ, ತಟಿತ್ತು, ಶುಂಭ, ಧೂಮ್ರಾಕ್ಷ, ಮಧುಮು, ಪ್ರಹೇತಿ, ಹೇತಿ ದೀರ್ಘಬಾಹು, ಖಡ್ಗ ರೊವು, ಭೀಮ, ಮೊದಲಾದ ರಾಕ್ಷಸರ ಸ್ನೇ ಮವು ಸಭೆಗೆ ಬರುತ್ತಿದ್ದಿತು. ಯಮಧಮ್ಮನ ಕರದಂಡವನ್ನೂ ಸೆಳೆಯುವಪ್ರಳಯಕಾಲದ ಭೌಗವನ ಕೋರೆದಾಡೆಯನ್ನೂ ಮುರಿಯುವ ಕಾಲ ಮೃತ್ಯುವಿನ ಗಂಟಲನ್ನೂ ಕೊಯ್ಯುವ ಬೆಟ್ಟಗಳನ್ನೂ ಕಿತ್ತು ಆಟವಾ ಡುವ-ಪ್ರಳಯಕಾಲದ ನಿಡಿಲನ್ನೂ ಹಿಡಿದು ಧರಿಸಿಕೊಳ್ಳುವ-ಮಹಾ ಶೂರರಾಕ್ಷಸರೆಲ್ಲರೂ ಬಂದು ಸಭೆಯಲ್ಲಿ ನಿಂತು, ಓಲೈಸುತ್ತಿದ್ದರು. ಹೀ ಗಿರುವಲ್ಲಿ ತನ್ನ ಸಭೆಯಲ್ಲಿದ್ದ ರಾಹುಕೇತುಗಳಬ್ಬರ ಇರುವಿಕೆಯನ್ನು ಜ ಲಂಧರನು ನೋಡಿ, ಒಂದೇ ದೇಹವು ಎರಡಾಗಿರುವುದಕ್ಕೆ ಕಾರಣವೇ ನೆಂದು ಕೇಳಲು, ಶುಕ್ರಾಚಾರನು ಪೂರ್ವದ ಸಮುದ್ರಮಥನದ ಸುದ್ದಿ ಯನ್ನೂ ಅಮೃತದ ಹಂಚುವಿಕೆಯನ್ನೂ, ವಿಷ್ಣುವು ಮೋಹಿನೃವತಾರ ದಿಂದ ಚಕ್ರವನ್ನು ಬಿಟ್ಟು ಮೋಸದಿಂದ ಅಮೃತಪಾನಮಾಡಿದ್ದ ರಾಕ್ಷ ಸನೊಬ್ಬನನ್ನು ಎರಡು ತುಂಡು ಮಾಡಿದುದನ್ನೂ ವಿವರವಾಗಿ ಹೇಳಿದನು.
ಪುಟ:ಚೆನ್ನ ಬಸವೇಶವಿಜಯಂ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.