ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚೆನ್ನಬಸವೇಶವಿಜಯಂ (ಕಾಂಡ ೨) [ಅಧ್ಯಾಯ ವಾಗಿ ಹೇಳು, ಮರೆಮಾಡಬೇಡ ?” ಎಂದು ಕೇಳಿದನು. ಆಗ ದಾನವೇಂ ದ್ರನು ಹುಸಿನಗೆ ನಕ್ಕು, “ ನಿನಗೆ ದಾನವಾರಿಯೆಂಬ ಹೆಸರಿರುವುದೆಂಬು ದನ್ನು ಕೇಳಿ ಅದನ್ನು ಅಸಾರ್ಥಕಪಡಿಸಿ ತಪ್ಪಿಸುವುದಕ್ಕಾಗಿಯೇ ನಾನು ಬಂದಿರುವೆನು; ನನ್ನ ಹೆಸರು ಜಲಂಧರ; ನನ್ನ ಪಟ್ಟಣವು ಜಾಲಂಧವು ದೇವೇಂದ್ರನನ್ನು ನೀನು ಮರೆಹಾಕಿಕೊಂಡಿರುವ ರೋಗಕ್ಕಾಗಿ ತಕ್ಕ ಪ್ರಧವಂ ಪ್ರಯೋಗಿಸುವುದನ್ನು ನಾನುಬಲ್ಲೆನು; ನೋಡು” ಎಂದು ಹೇಳಿ, ಒಂದು ಬಾರಿಗೆ ೧೦ ಬಾಣಗಳನ್ನು ಜೋಡಿಸಿ, ವಿಷ್ಣುವಿನಮೇಲೆ ಪು ಯೋಗಿಸಿದನು, ಅವನ್ನು ಹರಿಯು ಪ್ರತಿಬಾಣದಿಂದ ಮಧ್ಯದಲ್ಲೇ ಕಡಿ ದು- “ ಆಹಾ ! ಬಡದೇವತೆಗಳ ಕೋಟೆಯನ್ನು ಹಿಡಿದುಕೊಂಡು ಅ ವರನ್ನು ಓಡಿಸಿಬಿಟ್ಟಮಾತ್ರದಿಂದಲೇ ನೀನು ಜಗಕ್ಕೆಲ್ಲಾ ದೊಡ್ಡವನೆ ? ಬಡಬಾಗ್ನಿಯಮೇಲೆ ಸಮುದ್ರವು ಉಕ್ಕಿ ಬಂದು ಬಿದ್ದಂತೆ ನೀನು ನನ್ನ ಮೇಲೆ ಬಿದ್ದಿರುವೆ. ಇದು ನಿನಗೆ ಯೋಗ್ಯವಲ್ಲ; ಈಗಳ ನನ್ನ ಪಿತ ವಾದವನ್ನು ಕೇಳಿ ನೀನು ಹಿಂದಿರುಗಿ ಹೋಗುವೆಯಾದರೆ ತೊಟ್ಟಗುವ ಬಾಣವನ್ನು ನಾನು ನಿಲ್ಲಿಸಿಬಿಡುವೆನು. ಹಾಗಲ್ಲದ ಪಕ್ಷದಲ್ಲಿ ರಕ್ತದೋ ಕುಳಿಗೆ ಸಿದ್ಧನಾಗು” ಎಂದು ಹೇಳಿ, ೫ ಬಾಣಗಳನ್ನು ದೈತ್ನಮೇಲೆ ಪ) ಯೋಗಿಸಿದನು. ಆ ಯೆಟನ ಗಾಯದಿಂದ ದೈತ್ಯನು ಬಾಣಘಾತಕ್ಕೆ ಗುರಿ ಯಾದ ಹಂದಿಯಂತೆ ನೊಂದು, ಅಬ್ಬರಿಸಿ, ನಿಮಿಷಮಾತ್ರದಲ್ಲಿ ಒಂದೆರ ಡು ಮರು ನಾಲೈದು ನೂರು ಸಾವಿರ ಲಕ್ಷಾಂತರಬಾಣಗಳನ್ನು ಹರಿ ಯಮೇಲೆ ಕರೆದುಬಿಟ್ಟನು. ಒಡನೆಯೆ ವಿಷ್ಣುವೂ ಅದಕ್ಕೆ ದ್ವಿಗುಣ ವಾಗಿ ಬಾಣವರ್ಷವನ್ನು ಕರೆದನು. ಈ ಉಭಯರ ಬಾಣಗಳೂ ಉ ಭಯ ನಾಮಂಡಲವನ್ನೆಲ್ಲ ಹೊಕ್ಕು ನೀ೪ ಆಕಾಶಮಂಡಲದಲ್ಲೆಲ್ಲ ತುಂ ಬಿಕೊಂಡುವು. ದಾನವ ಮಾಧವರಿಬ್ಬರೂ ಒಬ್ಬಗ ಬಾಣ ಧನುಸ್ಸುಗಳ ನೊಬ್ಬರು ಕತ್ತರಿಸುತ್ತಲೂ ಪ್ರತಿಧನುರ್ಬಾಣಗಳನ್ನು ಸ್ವೀಕರಿಸುತ್ತ ಲೂ, ಓರರೋರರ ರಥಗಳನ್ನು ಮುರಿದು ಹೊಸಹೊಸತೇರುಗಳನ್ನು ಹತ್ತುತ್ತಲೂ, ಪದೇಪದೆ ಮೂದಲೆಯ ಮಾತುಗಳನ್ನಾಡಿ ಬಾಣಗಳನ್ನೆ ಚು, ಕರಚಾತುರವನ್ನು ತೋರಿಸುತ್ತಲೂ, ಪರಸ್ಪರ ಘಾತದಿಂದ ಮಭೆ ಹೊಂದುತ್ತಲೂ, ಒಬ್ಬರೊಬ್ಬರ ಏಟನ್ನು ಮೆಚ್ಚಿಕೊಳ್ಳುತ್ತ