೧೪] ವಿಷ್ಣುಂಬದಿಗಳ ಪರಾಜಯ ೧೧ ತೃನು ಪ್ರಬಲಿಸಿ ನಮ್ಮ ಪಟ್ಟಣಗಳನ್ನೆಲ್ಲ ಹಿಡಿದು ಸುಲಿದು ನಮ್ಮನ್ನು ತನ್ನ ಮನೆಯ ಸೆರೆಯಲ್ಲಿಟ್ಟು ಕೊಂಡಿದ್ದನು; ಅಲ್ಲಿಂದ ತಪ್ಪಿಸಿಕೊಂಡು ಈಗ ತಮ್ಮ ಬಳಿಗೆ ಬಂದಿರುವೆವು; ನನ್ನನ್ನುದ್ಧರಿಸಬೇಕು, ಎಂದು ಬೇಡಿಕೊಂಡನು. ಶಿವನಾದರೋ ಆ ಧರನನ್ನು ನಾನು ಸಕ್ಕರಿಸು ವೆನು, ಹೆದರಬೇಡಿರಿ, ಎಂದು ನಂಬುಗೆಯನ್ನು ಕೊಟ್ಟು, ಸಮಾಧಾನಪಡಿ ನಿದನೆಂದು ಚೆನ್ನಬಸವೇಶನು ಸಿದ್ದರಾಮೇಶನಿಗೆ ನಿರೂಪಿಸಿದನೆಂಬಿಲ್ಲಿಗೆ ಹದಿನಾಲ್ಕನೆ ಅಧ್ಯಾಯವು ಸಂಪೂರ್ಣವು. ಜ್ ೧೫ನೆ ಅಧ್ಯಾಯವು. -+*#*- ಜಲಂಧರಸಾರ. - ಇತ್ರ ಜಲಂಧರಾಸುರನು ಮರುದಿವಸ ಒಡೋಲಗದಲ್ಲಿ ಕುಳಿತು ಸೆರೆಯಲ್ಲಿದ್ದ ದೇವತೆಗಳೊಬ್ಬರೂ ಇಲ್ಲವೆಂಬ ವಾರೆಯನ್ನು ಕೇಳಿ, ಅ ತ್ಯಂತ ರೋಪಾಕ್ರಾಂತನಾಗಿ, ಸತ್ಯಲೋಕ ವೈಕುಂಠಲೋಕಗಳಿಗೆ ಚಾ ರರನ್ನು ಕಳುಹಿ, ಅಲ್ಲಿಯ ಒಬ್ಬರೂ ಇಲ್ಲವೆಂಬ ವರಮಾನವನ್ನು ತಿ ೪ದುನಿಡಿದುಬಿದ್ದಿದ್ದು, ಸ್ವರ್ಗನರ್ತಪಾತಾಳಗಳಲ್ಲಿ ನನ್ನ ಪ್ಪಣೆಯು ತಡೆಯಿಲ್ಲದೆ ನಡೆಯುತ್ತಿರುವುದು, ಮೋಸದಿಂದ ತಪ್ಪಿಸಿಕೊಂಡು ಹೋ ಗಿರುವ ಈ ದೇವತೆಗಳನ್ನು ಮರೆಹಾಕಿಕೊಳ್ಳುವ ಸಮರ್ಥರಾರನ್ನೂ ನಾನು ಕಾಣೆ, ಹೀಗಿರುವಲ್ಲಿ ಇವರೆಲ್ಲಿ ಹೋದರು ? ಎಂದು ಕೇಳಲು, ಶುಕ್ಕಾಚಾರನು ಎಲೆ ಹುಜ್ಞಾ ! ಸಕಲ ಬ್ರಹ್ಮಾಂಡವನ್ನೂ ಹೊ ವೈಯಲ್ಲಿಟ್ಟುಕೊಂಡು ರಕ್ಷಿಸುವ ಜಗದೇಕನಾಯಕನಾದ ಪರಮೇಶ್ವರ ನನ್ನು ದೇವತೆಗಳೆಲ್ಲರೂ ಮರೆಹೊಕ್ಕಿರುವರು ಎಂದು ಹೇಳಿದನು. ಜ ಲಂಧರನು ಕೇಳಿ, ಕಡುಕೋಪವೇರಿ, ಆಹಾ ! ನನ್ನನ್ನು ಬಿಟ್ಟು ಲೋ ಕಕ್ಕೆಲ್ಲ ಅಧಿಪತಿಯಾದವನು ಬೇರೊಬ್ಬನಿರುವನೆಂಬ ಅಚ್ಚರಿಯ ಮಾ
ಪುಟ:ಚೆನ್ನ ಬಸವೇಶವಿಜಯಂ.djvu/೧೪೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.