ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧] ಜಲಂಧರ ಸಂಹಾರ ೧೩೫ ಬಿದ್ದುವು. ಇವರುಗಳು ಬಿಟ್ಟ ಬಾಣವು ಸಕಲ ದಿಗಂತವನ್ನೂ ತುಂಬಿ ಕೊಂಡುವು. ಕೊನೆಗೆ ನಂದೀಶನು ಅತ್ಯಂತ ರೋಷಾವೇಶದಿಂದ ಭೀಕರವಾ ದೊಂದು ಬಾಣವನ್ನು ಕದ್ದಾಂತವಾಗಿ ಸೆಳೆದು ಬಿಡಲು, ಅದು ಶುಂಭನ ರಥಪತಾಕಛತ್ರ ಚಾಮರಸಾರಥಿಗಳನ್ನೆಲ್ಲ ನುಚ್ಚು ಮಾಡಿ ರಾಕ್ಷಸನ ದೇ ಹಕ್ಕೆ ಜ್ವಾಲೆಯನ್ನು ತುಂಬಿಸಿತು, ಅದುವರೆಗೂ ಹಿಮ್ಮೆಟ್ಟದೆ ಕಾದಾ ಡಿದ ಶುಂಭನಿಗೆ ಮುಂದೆ ನಿಂತು ಕಾದಲು ಅಳವಿಲ್ಲದೆ ಹೋಗಲು, ಅವನು ಪರುಷಗೆಟ್ಟು ಪಾಪಕ್ಕೆ ಹೆದರದೆ ರಣಾಂಗಣದಿಂದ ಕಾಲ್ಕೆಗೆದು ಹಿಮ್ಮ ೬ ಓಡಿಹೋದನು. ಇವನಂತೆಯೇ ಕಾದುತ್ತಿದ್ದ ದೈತ್ಯೇಂದ್ರರೆಲ್ಲರೂ ಶಾಗೆಟ್ಟು ಭೀತಿಪಟ್ಟು ಕಾಲಿಗೆ ಬುದ್ದಿ ಹೇಳಿದರು. ಶಿವಗಣಾಗ್ರಗಣ್ಯ ರೆಲ್ಲರೂ ಜಯಘೋಪವನ್ನು ಮಾಡುತ್ತ ರಾಕ್ಷಸರನ್ನು ಅಟ್ಟಿಕೊಂಡು ಕಾಂತವಾಗಿ ಸೆಳೆದು ಬಾಣಗಳನ್ನು ಪ್ರಯೋಗಿಸುತ್ತ ಹೋದರು. ಆಗ ರಾಕ್ಷಸರು ತೋಳನಿಗೆ ಹೆದರಿ ಓಡುವ ಕುರಿಗಳಂತೆ ದಿಕ್ಕು ದಿಕ್ಕಿಗೆ ಚದರಿ ಓಡಿಹೊಗಿ, ಘೋಳೆಂದು ಕೂಗಿ, ಜಲಂಧರನು ನಿಂತಿದ್ದ ಸ್ಥಾನ ದಲ್ಲಿ ಹೋಗಿ ಬಿದ್ದರು. ಸೂತು ಕೆಟ್ಟು ಬಂದ ಈ ರಾಕ್ಷಸರ ಅವಸ್ಥೆ ಯನ್ನು ದೈತ್ಯಾಧಿರಾಜನು ನೋಡಿ, ಕೋಪವೇರಿ, ಹುಬ್ಬುಗಂಟಿಕ್ಕಿ, ಕೆಂ ಗಣ್ಣಿನಲ್ಲಿ ಕಿಡಿಯನ್ನು ಸುರಿಸುತ್ತ, ತಾನೇ ಯುದ್ಧಕ್ಕೆ ಸನ್ನದ್ಧನಾಗಿ ಹೊರ ಟನು. ಅವನ ಸನ್ನೆಯಂತೆ ಬಲಶಾಲಿಯಾದ ಮುಖ್ಯಸೇನೆಯು ಅವನ ಸುತ್ತಲೂ ಆವರಿಸಿ ತೆರಳತು, ಕರಾಳಕಾಲಸ್ತೋಮದಂತೆ ಕೆರಳಿ ಈ ಉಗ್ರರಾಕ್ಷಸಸೈನ್ಯವು ಬರುವುದನ್ನು ಪರಶಿವನು ಕಂಡು, ನಸುನಗುತ್ತ, ತನ್ನ ವಿರಾಕವೆಂಬ ಧನುಸ್ಸನ್ನು ಎಡಗೈಗೆ ತೆಗೆದುಕೊಂಡು, ಮುಂದಕ್ಕೆ ಸರಿದು, ಒಂದೇ ಒಂದು ಬಾಣವನ್ನು ಹೂಡಿ ಲೀಲೆಯಿಂದ ಪ್ರಯೋಗಿಸಿ ದನು. ಆ ಬಾಣವು ದನುಜೇಂದ್ರನ ಚತುರಂಗಸೈನ್ಯವನ್ನೂ ತರಿದು ಮಲಗಿಸಿತು. ಮುಖ್ಯ ಮುಖ್ಯ ರಾಕ್ಷಸರನ್ನೆಲ್ಲ ನೀ೪ತು, ಕೆಲವರಿಗೆ ಮೂರ್ಛಿಯನ್ನುಂಟುಮಾಡಿತು, ಕ್ಷಣಕಾಲದಲ್ಲಿ ಇಂದ್ರಜಾಲದಂತೆ ರಾ ಕಸಸೈನ್ಯದಲ್ಲಿ ಅಮಿತವಾದ ಲಯವುಂಟಾಯಿತು. ಹೀಗೆ ತನಗಾದ ಪರಿ ಭವವನ್ನು ಜಲಂಧರನು ನೋಡಿ ಅತ್ಯಂತ ಕೋಪವೇರಿ, ತನ್ನ ತೇರನ್ನು ' ಆ. |