da ೧೪a ಚೆನ್ನಬಸವೇಳವಿಜಯಂ, (ಕಾಂಡ 4) | [ಅಧ್ಯಾಯ ನು ಪತ್ನಿ ಸಮೇತನಾಗಿ ವಿಮಾನದಲ್ಲಿ ಕುಳಿತು ಆಕಾಶದಲ್ಲಿ ಹೋಗುತ್ತಿ ದ್ದು, ತಪಸ್ಸಿನಲ್ಲಿರುವ ಖುಷಿಯನ್ನು ಕಂಡು ಹಾಸ್ಯಮಾಡಿ, ತನ್ನ ಹೆಂಡ ತಿಯ ತಲೆಯ ಹೂವಿನಸರದಿಂದ ಹೊಡೆದನು. ಮಮ್ಮಿಯು ಕಣ್ಣನ್ನು ತೆರೆ ದು, ಮೇಲೆ ನೋಡಿ, ಗಂಧರನನ್ನು ಕಂಡು ಕೋಪವೇರಿ, ಕಯ್ಕೆತ್ತಿ, “ ಎಲಾ ಮದಾಂಧನೇ ! ನೀನು ಗರದಿಂದ ನನ್ನನ್ನು ಮುಡಿದ ಹೂವಿನಿಂ ದಿಟ್ಟ ಕಾರಣದಿಂದ ಭೂಮಿಯಲ್ಲಿ ಮತ್ತಗಜವಾಗಿ ಹುಟ್ಟಿ ದುಷ್ಕೃತನದಿಂದ ಲೋಕಕ್ಕೆ ಕಂಟಕನಾಗಿರು ” ಎಂದು ಶಾಪವನ್ನು ಕೊಟ್ಟನು. ಅದನ್ನು ಕೇಳಿ ಗಂಧರನು ಬೆದರಿ ಚಿಂತೆಯಿಂದ ಇಳಿದು ಬಂದು, ಋಷಿಯ ಪದ ಕ್ಕೆ ನಮಸ್ಕರಿಸಿ, ಮುನಿವನೆ ! ಶಾಪವನ್ನು ವಿಮೋಚನಗೊಳಿಸಿ ರಕ್ಷೆ ಸು ಎಂದು ಬೇಡಿಕೊಳ್ಳಲು, ಮಹರ್ಮಿಯು ನೀನು ದುಷ್ಕೃಗಜವಾಗಿ ಹುಟ್ಟಿ ಯಾರಿಗೂ ಜಗ್ಗದೆ ಇರು ; ಕೊನೆಗೆ ಶಿವನಿಂದ ನಿನಗೆ ಮುಕ್ತಿ ಯಾಗುವುದು ಹೋಗು ಎಂದು ನುಡಿದನು. ಅಗಸ್ಯರ್ಪಿಯು ಸಾಮಾ ನೃನೆ ? ಶಾಪಶಕ್ತಿಯಿಂದ ಕೂಡಲೇ ಗಂಧದ ನ ವಿಮಾನವು ಬಯಲಾಯಿ ತು, ಹೆಂಡತಿಯು ಕಾಣದಂತಾದಳು. ಗಂಧರ ನಾದರೋ ಪರತಾಕಾ ರದ ಮಹಾಗಜವಾದನು. ಅದರ ಭೀಕರಸರೂಪವು ಜಗದಾಶ್ಚಗಕರ ವಾಗಿದ್ದಿತು. ಆಕಾಶದ ನಕ್ಷತ್ರ ಸಜ್ಜಿಗಳು ಆ ಆನೆಗೆ ಕಟ್ಟಿದ ಗೆಜ್ಜೆಯ ಸರಗಳಂತೆ ಕಾಣುತ್ತಿದ್ದವು. ಅದು ನಾಲ್ಕು ಸಮುದ್ರದ ನೀರನ್ನೂ ಒಂ ದೇಬಾರಿಗೆ ಸುಂಡಿಲಿಂದ ಸುರನೆ ಹೀರುವಂತೆಯೂ, ಮೇಲಕ್ಕೆ ಸುಂಡಿಲ ನ್ನು ನೀಡಿ ಉಸುರನ್ನು ಬಿಟ್ಟರೆ ಸತ್ಯಲೋಕದಲ್ಲಿರುವ ಬ್ರಹ್ಮನ ಪೀಠವಾ ದ ಕಮಲವನ್ನೂ ನಡುಗಿಸುವಂತೆ ಇದ್ದಿತು. ಸೂಗ್ಯಚಂದ್ರಬಿಂಬ ಗಳೆರಡೂ ಆ ಗಜದ ಪಕ್ಕಗಳಲ್ಲಿ ನೇತುಗಟ್ಟಿರುವ ದೊಡ್ಡ ಗಂಟೆಗಳಂತೆ ಕಾಣುತ್ತಿದ್ದುವು. ಅದರ ಓಟಕ್ಕೆ ಬ್ರಹ್ಮಾಂಡವೆಲ್ಲಾ ಅದಿರುತ್ತಿದ್ದಿತು. ಅದರ ಗರ್ಜನೆಯು ಲೋಕಕ್ಕೆಲ್ಲ ಮರ್ಧೆಯನ್ನುಂಟುಮಾಡುತ್ತಿದ್ದಿತು. ಅದರ ಕುಂಭಸ್ಥಲಗಳು ಪರ್ವತಕ್ಕೆ ಸಮನಾಗಿದ್ದು ವು. ಅದರ ಉದ್ದನಾದ ಬಾಲವು ಕಾಲನ ದಂಡದಂತೆ ಭಯಂಕರವಾಗಿದ್ದಿತು. ಅದರ ನೋಟವು ಎಲ್ಲರ ಎದೆಯನ್ನೂ ಬಿರಿಸುತ್ತಿದ್ದಿತು. ಅದರ ಕೊಂಬಿನ ತಿವಿತಕ್ಕೆ ಕುಲಾ ಚಲಗಳೆಲ್ಲ ಪುಡಿಪುಡಿಯಾಗಿ ಹೋದುವು. ಅದರ ಓಡಾಡುವ ರಭಸಕ್ಕೆ
ಪುಟ:ಚೆನ್ನ ಬಸವೇಶವಿಜಯಂ.djvu/೧೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.