ಗಜಾಸುರಸಾರ ೧೪೧ ಪ್ರಾಣತತಿಗಳೆಲ್ಲ ತೂರಿಬಿದ್ದು ಸಾಯುತ್ತಿದ್ದುವು, ಅದರಿದಿರಿಗೆ ನಿಲ್ಲುವುದ ಕೈ ಸ್ವರ್ಗಮರ್ತ್ಯಪಾತಾಳದಲ್ಲಾರಿಗೂ ಎದೆಯಿಲ್ಲದಂತಾಯಿತು. ಅದರ ಸುದ್ದಿಯನ್ನು ಕೇಳಿದಕೂಡಲೇ ಜನಗಳು ದಿಕ್ಕುಗೆಟ್ಟು ಓಡುವಂತಾಯಿ ತು, ಮೂರು ಲೋಕವೂ ಈಮಹಾಗಜದ ಭೀತಿಯಿಂದ ಕೊರಗಿ ತಮ್ಮ ನುದ್ದರಿಸುವರಾರೆಂದು ಚಿಂತಾಕುಲವಾಯಿತು. ಅಮ್ಮದಿಕಾಲಕರು ಈ ಆನೆಯ ಸುದ್ದಿಯನ್ನು ಕೇಳಿ ಯಾವಮೂಲೆಗೋಡಿಹೋದರೆ ಗೊತ್ತೆ ಯಿಲ್ಲದಂತಾದರು, ಪಾತಾಳಲೋಕದ ಸರ್ಪಗಳೆಲ್ಲವೂ ಹೆಡೆಯನ್ನು ಮು ↑ ದರಿಗಳಲ್ಲಿ ಸೇರಿ ಈಚೆಗೆ ತಲೆಯಿಕ್ಕದಂತಾದುವು, ಜಗತ್ತೆಲ್ಲ ಗಜಾ ಸುರನ ಬಾಧೆಗೀಡಾಗಿ ರೋದನಮಯವಾಯಿತು. ದೇವೇಂದ್ರಾದಿಗಳು ಕಂಗೆಟ್ಟು ಬ್ರಹ್ಮ ವಿಷ್ಣುಗಳ ಬಳಿಗೆ ಓಡಿಬಂದು ಮಹಾಗಜಾಸುರನ ಹಾ ವಳಿಯನ್ನು ಅವರೊಡರೆ ದೂರಲು, ಅವರು ಸೇನಾಸಮೇತರಾಗಿ ಹೊರಟು, ಮತ್ತಗಜಕ್ಕೆ ಇದಿರಾಗಿ ಕಾಳೆಯಗಮಾಡಿದರು. ಪ್ರಚಂಡಮಾರುತಕ್ಕೆ ಇದಿರಾದ ತರಗೆಲೆಗಳಂತೆ ಇವರ ಸೇನೆಯು ಕ್ಷಣಕಾಲದಲ್ಲಿ ಗಜಾಸುರನ ಹೊಯ್ತಿ ಗೆ ತಡೆಯಲಾರದೆ ತೂರಿಹೋಯಿತು, ಕಳೆದುಳಿದವರು ದಿಕ್ಕು ದಿಕ್ಕಿಗೆ ಪಲಾಯನಗೊಂಡು, ಕಡೆಗೆ ಹರಿಬ್ರಹ್ಮರೇ ಇದಿರಾಗಿ ಕಾದು, ಏಟನ್ನು ತಿಂದು, ನಿಲ್ಲಲಾರದೆ, ಅವರೂ ಪರಶಿವನ ಬಳಿಗೆ ಓಡಿದರು. ಸರ ರೂ ಶಂಕರನಿಗೆ ದೀರ್ಘದಂಡನಮಸ್ಕಾರಮಾಡಿ ಎದ್ದು ಕೈಮುಗಿದು ನಿಂತು ಸ್ವಾಮಿಾ ! ಗಜಾಸುರನೆಂಬ ನೀಚದೈತ್ಯನು ಹೆಚ್ಛಿಕೊಂಡು ನಮ್ಮನ್ನೆಲ್ಲ ಕಾಳೆಯಗದಲ್ಲಿ ಸೋಲಿಸಿ ಓಡಿಸಿ,ಲೋಕಗಳನ್ನೆಲ್ಲ ಸಕ್ಕರಿಸುತ್ತಿರುವನು ; ನೀನು ಜಗತ್ತಿಗೆಲ್ಲ ಉಳಿಗಾಲವನ್ನುಂಟುಮಾಡಬೇಕು ಎಂದು ಪ್ರಾರ್ಥಿ ನಿವರು, ಶಂಕರನು ದಯೆಗೊಂಡು ಹೆದರಬೇಡಿರೆಂದು ಅವರೆಲ್ಲರಿಗೂ ಅಭ ಯದಾನಮಾಡಿ, ವೃಷಭನನ್ನು ಹತ್ತಿ ಕೈಲಾಸದಿಂದ ಹೊರಟನು. ಹರಿ ಬ್ರಹ್ಮಾದಿಗಳೆಲ್ಲರೂ ತಮ್ಮ ತಮ್ಮ ವಾಹನಗಳನ್ನೇರಿ ಚತುರಂಗಸೇನಾಸ ಮೇತರಾಗಿ ಹೊರಟರು. ಗರುಡ ಗಂಧರ ಕಿನ್ನರ ಕಿಂಪುರುಷ ವಿದ್ಯಾ ಧರ ಯಾದಿಗಳೂ ಭೂತಗಣ ರುದ್ರಗಣಗಳೂ ಶಿವನ ಸುತ್ತುವರಿದು ನಡೆಗೊಂಡರು. ಈ ಮಹಾದೇವಸೇನಾಸಮುದ್ರದಲ್ಲಿ ಆಗುತ್ತಿದ್ದ ಭೇರೀ ಕಹಳಾದಿವಾವೃಧ್ವನಿಯೂ ಹಸ್ಯ ಶಾದಿಗಳ ಕೂಗೂ ಒಟ್ಟುಗೂಡಿ ದಿ
ಪುಟ:ಚೆನ್ನ ಬಸವೇಶವಿಜಯಂ.djvu/೧೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.