ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಜಾಸುರಸಹ್ಮಾರ ೧ಳಿ! ಬೇಡ ; ಇತಃಪರಃ ಇವನಿಗೆ ನನ್ನ ಗಣಸಮೂಹದಮೇಲೆ ಆಧಿಪತ್ಯವನ್ನು ಕೊಟ್ಟಿರುವೆನು ; ವತ್ತೂ ಇವನನ್ನು ಭಜಿಸಿದವರೆಲ್ಲರಿಗೂ ಸಕಲೇಮಾರ್ಥ ಗಳ ಸಿದ್ದಿ ಸುವಂತೆ ವರವನ್ನು ದಯಪಾಲಿಸಿರುವನು; ಎಂದು ಹೇಳಿ, ಪಾ ರತಿಯ ಮನಸ್ಸನ್ನು ಸಮಾಧಾನಪಡಿಸಿ, ಸಂತೋಷಗೊಳಿಸಿ, ಸುತ್ತಲೂ ನಿಂತಿರುವ ವಿಷ್ಣು ಬ್ರಹ್ಮಾದಿಗಳೆಲ್ಲರಿಗೂ ಅಪ್ಪಣೆಯನ್ನಿತ್ತು ಕಳುಹಿ, ಸರ ಮಂಗಳಯೊಡನೆ ಅಂತಃಪುರಕ್ಕೆ ತೆರಳಿದನೆಂದು ಚೆನ್ನ ಒಸವೇಶನು ನುಡಿದ ನೆಂಬಿಲ್ಲಿಗೆ ೧ ನೆ ಅಧ್ಯಾಯವು ಸಂಪೂರ್ಣವು. ೨ನೆ ಅಧಯವು. ಶಿವಲೋಕ ಶಿವಸಭಾ ವರ್ಣನವು. - ಎಲೈ ಸಿದ್ದರಾಮೇಶನೆ ! ಏಕಾಗ್ರಚಿತ್ತದಿಂದ ಕೇಳು, ಈ ಬ್ರ ಹ್ಯಾಂಡವನ್ನೆಲ್ಲ ಒಂದು ಸುವರ್ಣ ದೇವಾಲಯವನ್ನಾಗಿ ಭಾವಿಸಿದರೆ, ಅದರ ಮೇಲೆ ಮುತ್ತಿನಕಲಶವನ್ನಿಟ್ಟಿರುವಂತೆ ನಿಮ್ಮಲಸ್ಸಟಕವರ್ಣವಾದ ಶಿವ ಲೋಕವು ಬ್ರಹ್ಮಾಂಡವೆಲ್ಲಕ್ಕೂ ಇಷ್ಟಾರ್ಥವನ್ನು ಕೊಡುವ ಕಲ್ಪವೃಕ್ಷ ದಂತೆ ಕಾಣಿಸುತ್ತಿರುವುದು, ಅದರ ಮಹಿಮೆಯು ವೇದಗಳ ಊಹೆಗೂ ಕೂಡ ಗೋಚರವಾಗದೆ ಇರುವುದು, ಅದರಲ್ಲಿರುವ ಶಿವನ ರಾಜಧಾನಿಯು ೧೬ ಕೋಟಿಯೋಜನದ ವಿಸ್ತಾರವುಳ್ಳದಾಗಿರುವುದು, ಅದರ ಸುತ್ತಲೂ ತೇಜೋಮಯವಾದ ಕೋಟೆಯು ಆವರಿಸಿರುತ್ತಿರಲು,ಬ್ರಹ್ಮಾನಂದದಿಂದ ಪರಿಪೂರ್ಣವಾದ ದೊಡ್ಡ ಬೊಕ್ಕಸದಂತೆ ತೋರುತ್ತಿರುವುದು, ಅದಕ್ಕೆ ಎಂಟು ಬಾಗಿಲುಗಳಿರುವುವು, ಅವುಗಳೊಳಗೆ ಇಂದ್ರ ದಿಕ್ಕಿನಬಾಗಿಲಲ್ಲಿ ಸಿತಾಂಗನೆಂಬ ಭೈರವನು ಕೊಂಬಣ್ಣದ ಶರೀರರದವನಾಗಿ ಹಂಸವನ್ನೇರಿ ಬ್ರಾಹಿ ಯೆಂಬ ಶಕ್ತಿಯೊಡನೆ ಕೂಡಿ ಕಾವಲಿರುವನು. ಅಗ್ನಿ ದಿಕ್ಕಿನ ಬಾಗಿಲಲ್ಲಿ ರುರು ಎಂಬ ಭೈರವನು ಹೇಮನರ್ಣದವನಾಗಿ ಮಾಹೇಶ್ವರಿ ಯಂಬ ಶಕ್ತಿಯೊಡನೆ ಕೂಡಿ, ಆಡನ್ನು ಹತ್ತಿ ಕಾವತಿಯವನು, ಯಮುದಿ 19