ಈ ಪುಟವನ್ನು ಪರಿಶೀಲಿಸಲಾಗಿಲ್ಲ.

684 ಚನ್ನ ಬಸವೇಶವಿಜಯಂ, (ಕಾಂಡ 4) - {ಅಧ್ಯಾಯ ಕ್ಕಿನಲ್ಲಿ ಚಂಡನೆಂಬ ಭೈರವನು ಹಳದಿಯಬವುಳ್ಳವನಾಗಿ ಕೌಮಾರಿ ಯೆಂಬ ಶಕ್ತಿಯೊಡನೆ ಕೂಡಿ ನವಿಲನ್ನೇರಿ ವಾಸಿಸುವನು. ನಿಋತಿದಿ ಕ್ಕಿನಲ್ಲಿ ಕೂಧನೆಂಬ ಭೈರವನು ಹೊಂಬಣ್ಣದವನಾಗಿ ವೈಷ್ಣವಿಯೆಂಬ ಶಕ್ತಿಯಿಂದ ಕೊಡಿ ಗರತನರಿ ಕಾದಿರುವನು. ವರುಣದಿಕ್ಕಿನಲ್ಲಿ ಉ ತ್ತನೆಂಬ ಭೈರವನು ಕಪ್ಪು ಬಣ್ಣದವನಾಗಿ ವಾರಾಹಿಯೆಂಬ ಶಕ್ತಿಯೊಡ ನೆಕೂಡಿ ಕೋಣನನ್ನೇರಿ ಕಾವಲಿ -ವನು, ವಾಯುದಿಕ್ಕಿನಲ್ಲಿ ಕಾಪಾಲಿ ಭೈರವನು ನ್ನದ ಬಣ್ಣವುಳ್ಳವನಾಗಿ ಮಾಹೇಂದ್ರಿಯಂಬ ಶಕ್ತಿಯೊಡ ನಕೂಡಿ ಆನೆಯನ್ನೇರಿ ವಾಸವಾಗಿರುವನು. ಕುಬೇರದಿಕ್ಕಿನಲ್ಲಿ ಭೀಷಣ ನೆಂಬ ಭೈರವನು ಬೂದಿಬಣ್ಣದವನಾಗಿ ಚಾಮುಂಡಿಯೆಂಬ ಶಕ್ತಿಯೊಡನೆ ಕೂಡಿ ನಿಗ್ನ ವಾಹನನಾಗಿ ಕಾದಿರುವನು ಈಶಾನದಿಕ್ಕಿನಲ್ಲಿ ಸಕ್ನಾರ ಭೈರವನು ಹೇಮವಗ್ಗದವನಾಗಿ ಕಾ೪ಯೆಂಬ ಶಕ್ತಿಯಿಂದ ಕೂಡಿ ಇಲಿ ಯನ್ನೇರಿ ಕಾವಲಿರುವನು. ಪ್ರತಿಯೊಬ್ಬ ಭೈರವನೂ ತ್ರಿನೇತ್ರಚತುರ್ಭು ಜಗಳುಳ್ಳವರಾಗಿ ಆಯುಧಗಳನ್ನು ವಿಡಿದು ಸಮಾನಶಕ್ತಿಯವರಾದ ೨೦ ಕೋಟಿ ಪರಿವಾರದಿಂದ ಕೂಡಿರುತ್ತಿರುವರು. ಇಂತಹ ಬಾಗಿಲನ್ನು ಕಳೆದು ಒಳಗೆ ನುಗ್ಗಿ ನೋಡಿದರೆ ಕಣ್ಣಿಗೆ ಹಬ್ಬವಾಗಿ ಪುಣ್ಯದ ಪ್ರವಾಹದಂತೆ ತೋರುತ್ತಿರುವ ಬೀದಿಗಳು ೧ ಲಕ್ಷವಿರುವುವು, ಪ್ರತಿಯೊಂದು ಬೀದಿಯ ಭೂ ಮುಂದೆ ಹೊನ್ನಿನ ಬಾಗಿಲು ಶೋಭಿಸುತ್ತ, ಇಕ್ಕೆಲದಲ್ಲೂ ಸುವ ರ್ಣರಹಿತನಿರಿತವಾದ ರತ್ನಖಚಿತಮಂದಿರಗಳು ಅಗಣಿತವಾಗಿ ಸಾಲುಸಾ ಲಾಗಿ ಥಳಥಳಿಸುತ್ತಿರುವುವು ಪ್ರತಿಯೊಂದು ಬಿದಿಯಲ್ಲ ಅಲ್ಲಿಗಲ್ಲಿಗೆ ವೃಷಭಧ್ವಜಗಳನ್ನು ನಿಲ್ಲಿಸಿ ತೋರಣಗಳನ್ನು ಕಟ್ಟಿ ಭೂಮಿಯನ್ನು ಕ ಸೂರಿಕುಂಕುವಾದಿಗಳಿಂ ಸಾರಿನ ಮುತ್ತಿನ ರಂಗವಲ್ಲಿಯನ್ನಿಕ್ಕಿ ಅಲಂ ಕರಿಸಿರುವರು. ಅಲ್ಲಲ್ಲಿ ಮಂಗಳವಾದ್ಯಗಳು ಮೊಳಗುತ್ತಿರುವುವು, ನಿಪ್ಪಾ ಮಿಗಳೂ, ನಿಗಮಾಗಮವೆತರೂ, ನೀತಿಕೋವಿದರೂ, ನಿರ್ಜಿತದಾಯ ರೂ, ನಿರ್ಲಿಪ್ತಮೊಹರೂ, ನಿರ್ಗತಖೋಧರೂ, ನಿರ್ಧೂತವಾದರೂ, ನಿಶ್ಚಲಚಿತ್ತರೂ, ನಿಭಕ್ತರೂ ಆದ ಮಹಾಶಿವಗಣರ ಸೋಮವು ದಟ್ಟ ವಾಗಿ ಸಂಚರಿಸುತ್ತಿರುವುದು, ಮಾಂಗಲ್ಯ ಲಾವಣ್ಯ ಶೃಂಗಾರಸರಸ್ಪದಂ ತಿರುವ ರುದ್ರಗಣಿಕೆಯರು ವಿಲಾಸವೈಭವದಿಂದ ತಿರುಗಾಡುತ್ತಿರುವರು.