೧He ೧೫o ಚನ್ನಬಸವೇಳವಿಜಯಂ (೪೫ಂಡ4) [ಅಧ್ಯಾಯ ಒಬ್ಬೊಬ್ಬರು ನೂರು ಕೋಟಿ ಸೈನಿಕರೊಡನೆಯೂ,ನಕ್ಷತ್ರಕೃಂತನ, ಮ ಹಾಕೇಶ, ಶತಸಹಸ್ತಾಕ್ಷ, ಅಂಗಾರಭಕ್ಷಣ, ವಿಶಮಾಲಿ, ವಜ್ರದಂತ ಮೊದಲಾದ ಕ್ಷೇತ್ರಪಾಲಕರೊಬ್ಬೊಬ್ಬರು ಏಳುನೂರು ಪದ್ಯ ಸೇನೆಯೊಡ ನೆಯೂ, ದಂಡಧರ, ದಂಡಬಾಹು, ದಂಡನಾಥ, ಮದೋದ್ದಂಡ ಮೊದ ಲಾದ ಸೇನಾ ಪ್ರಮುಖರು ಒಬ್ಬೊಬ್ಬರು ಹತ್ತರ್ಬುದ ಸೇನೆಯೊಡನೆಯ ಕೂಡಿ ಶಿವನಾಜ್ಞೆಯನ್ನೇ ನಿರೀಕ್ಷಿಸಿಕೊಂಡು ಸೇವಿಸುತ್ತಿದ್ದರು, ನಾಮ ದೇವರು, ಜೈಪ್ಪರು, ಶ್ರೇಷ್ಠರು, ಕಲವಿಕರಣರು, ಕಲರು, ಬಲರು, ಬಲಪ್ರಮಥರು, ಮನೋನ್ನನರು, ಸರ: ಭೂತದಮನರು ಮೊದಲಾದ ಅ ಸಂಖ್ಯರುದ್ರಗಣವು ತಮ್ಮ ತಮ್ಮ ಹೆಸರಿನ ಶಕ್ತಿಯರೊಡನೆಯ, ಅಪರಿ ಮಿತವಾದ ತಮ್ಮ ಗಣಸೇನೆಯೊಡನೆಯೂ ಕೂಡಿ, ಆ ಸಭೆಯಲ್ಲಿ ಒಳ್ಳೆ ಸುತ್ತಿದ್ದರು. ಅವರಲ್ಲದೆ ಅಸ್ಮವಸುಗಳು, ನವಗ್ರಹಗಳು, ಏಕಾದಶರು ದ್ರರು, ಚತುರ ಶಮನುಗಳು, ತಂಡತಂಡವಾಗಿ ಅಸಂಖ್ಯಾಕವಾದ ತಮ್ಮ ಸೇನೆಯೊಡನೆ ಕೂಡಿ ಬಂದು ಕಾದಿದ್ದರು, ಮತ್ತೂ ಅದಿಕಾಲಕ ರು ತಮ್ಮ ತಮ್ಮ ಕೋಟ್ಯನುಕೋಟಿ ಸೈನಿಕರಮದಿಂದ ಕೂಡಿ ಯ, ಸುರನರೋರಗನಿದ್ದ ವಿದ್ಯಾಧರಗರುಡಗಂಧರ ಕಿನ್ನರಕಿಂಪುರುಷರು ಹೃಕವಿತಾಚಾಪ್ಪರರುಗಳು” ಕೋಟಿಗಟ್ಟಲೆಯಾಗಿ ಗುಂಪನ್ನು ಕಟ್ಟಿ ತ ಮ್ಮ ತಮ್ಮ ಆಯುಧಗಳನ್ನು ಹಿಡಿದೂ ನಿಂತಿದ್ದರು. ಬೆಟ್ಟ, ಮರ, ಮೃಗ, ಸಕ್ಸಿ ಮೊದಲಾದ ಚರಾಚರವಸ್ತುಗಳಲ್ಲಿ ಅಗ್ರಗಣ್ಣವಾದುವುಗಳೆಲ್ಲ ಕೊ ಟ್ಯನುಕೋಟಿ ಯಾಗಿ ಬಂದು ಸೇವಿಸುತ್ತಿದ್ದುವು. ಆ ಮಹಾ ಶಿವಸಭೆಯ ವೈಭವವನ್ನು ವರ್ಣಿಸುವುದಕ್ಕೆ ಸಾವಿರ ನಾಲಿಗೆಗಳುಳ್ಳ ಆದಿಶೇಷಸಿಗೂ ಕೂಡ ಕಕನಲ್ಲ, ಎಲೆ ಸಿದ್ದರಾಮೇಶನೇ ! ಜಗವೇಕಶರಣ್ಣನೂ, ಜಗ ದೆಕನಂದ್ಧನೂ, ದೇವದೇವೋತ್ತಮನೂ, ಅಖಿಲಾಂಡಕೆ ಬ್ರಹ್ಮಾ? ಡನಾಯಕನೂ ತಾನೇ ಎಂಬುದನ್ನು ಈ ಮಹಾಸಭಾಧಿಪತ್ಯದಿಂದಲೇ ಜಗತ್ತಿಗೆಲ್ಲ ಬಿತ್ತರಿಸುತ್ತಿರುವ ಅನಂತಮಹಿಮ ರಿಯಾದ ಶ್ರೀ ಪರ ಮೇ ಶರನು ಪ್ರಸನ್ನ ಮುಖಮಂಡಲನಾಗಿ ಕಟಾಕ್ಷದಿಂದ ಕರುಣಾರಸಪ್ರ ವಾಹವನ್ನು ಕೆದರುತ್ತ ಭಕ್ತವತ್ಸಲ್ಯವಂ ಪ್ರಕಟಿಸುತ್ತಿರಲು, ಸಭೆಯ ಲ್ಲಿದ್ದವರೆಲ್ಲರೂ ತಮ್ಮ ತಮ್ಮ ಊಳಗವನ್ನು ಮಾಡುತ್ತಿದ್ದರು, ಹೇಗೆ?
ಪುಟ:ಚೆನ್ನ ಬಸವೇಶವಿಜಯಂ.djvu/೧೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.