ಶಿವಲೋಕ ಶಿವಸಭಾ ವರ್ಣನವು - ತೆಯಾಗಿ ಮಂದಾರಕುಸುಮಮಾಲಿಕೆಯಂ ಮುಡಿದು, ಪ್ರಸನ್ನಕಟಾಕ್ಷ ದಿಂದಾಶ್ರಿತಜನರನ್ನನುಗ್ರಹಿಸುತ್ತ ಬಲಗಡೆಗೆ ತುಸುಬಗ್ಗಿದ ಶಿರೋಭಾಗೆ ಯಾಗಿ, ಸಮಾಂಗಲ್ಯಸೌಂದರಸ ಕುಮಾರ್ ಶೃಂಗಾರಸರಸದಂತೆ ರಾಜಿಸುತ್ತಿದ್ದಳು. ವಿದ್ಯಾಧರಕಿನ್ನರಕಿಂಪುರುಷ ಗರುಡ ಗಂಧರಾದಿದೇ ವನಿತಂಬಿನೀನಿಕುರುಂಬವು ಸಾಲುಸಾಲಾಗಿ ನಿಂತು ಮಹಾದೇವಿಯ ನೋಲೈಸುತ್ತಿದ್ದಿತು. ಲಕ್ಷ್ಮಿ ಸರಸ್ವತೀ ಶಚೀಮುಖಾದಿದೇವಾಂಗನಾ ಪ್ರಮುಖಯರು ಚಾಮರಹನಾದಿಗಳಿಂದುಸಚರಿಸುತ್ತ ಮಗ್ಗುಲಲ್ಲಿದ್ದ ರು. ಶಿವನ ಪೀಠದ ಎಡಗಡೆಯಲ್ಲಿ ಗರುಡಗಳನ್ನೇರಿ ಶಂಖಚಕ್ರಗಳನ್ನು ವಿಡಿದು ಪೀತಾಂಬರವನ್ನು ಧರಿಸಿರುವ ನೀಲವಲ್ಲದ ಕೋಟ ವಿಷ್ಣುಗಳೂ, ಬಲಗಡೆಯಲ್ಲಿ ಹಂಸವನ್ನೇರಿ ಕಮಂಡುಲು ದಂಡಗಳನ್ನು ಹಿಡಿದು ನಾಲ್ಕು ಮುಖಗಳನ್ನು ಹೊಂದಿದ ರಕ್ತವದ ಕೂಟಬ್ರಹ್ಮರುಗಳೂ ಕುಳಿತಿ ದ್ದರು. ಆ ಬ್ರಹ್ಮರ ಬಲಕ್ಕೆ ಜಟಾಧಾರಿಗಳಾಗಿ ಶಾಂತಮರಿಗಳಾಗಿ ಭ •ಲಿ ಮ್ಯಾಂಗರಾಗಿ ನಾರುಡೆಗಳನ್ನುಟ್ಟು ಜಪಮಾಲಿಕೆಯಂ ಪಿಡಿದು ಮಂ ತಪುನಶ್ಚರಣವನ್ನು ಮಾಡುತ್ತಿರುವ ಜ್ಞಾನಮಯರಾದ ಮುನಿಗಳ ಸ್ಕೋ ಮವು ನಿಲವಾಗಿ ವ್ಯಕ್ತಿಗೊಂಡಿದ್ದಿತು. ಪಂಚಮುಖ ದಶಭುಜ ಧಾ ಲನತ್ರ ಫಣಿಹಾರ ಮೊದಲಾದುವುಗಳಿಂದ ತಿವಸಮಾನರೂಪನ್ನು ಧರಿಸಿರು ವ ರುದ್ರರ ಕೊಟಿಯು ಶಿವನಿಗಿರಿಗೆ ಮೂರಿಗೊಂಡಿದ್ದಿತು. ನಂದಿ, ಭ್ರಂ ಗಿ, ವೀರಭದ್ರು, ಗಣೇಶ, ಪಬ್ಬುಖ, ನೀಲಲೋಹಿತ, ಮಹಾಕಾಳ, ರುಂ ಡಧರ, ಗಜಕರ್ಣ, ಘಂಟಾಕರ್ಣ, ಗೋಕರ್ಣ, ಶಂಕುಕರ್ಣ, ವಿರೂ ಪಕ್ಷ, ಗಗನಾಂಗ, ಧಮಾಂಗ, ಮೊದಲಾದ ಮಹಾಪ್ರಮಥರುಗಳು ಒಬೆಬ್ಬರು ಒಂದೊಂದು ಪದ್ಯ ಸಂಖ್ಯಾಕವಾದ ತಮ್ಮ ಸೇನೆಯೊಡನೆ ಕೂಡಿ ಓಲೈಸುತ್ತಿದ್ದ ರು. ಪರತಾಭರಣ, ವಿಕಟಾಂಗಭೈರವ, ಚಂಡ ಕಿರಿ, ಕಂಕಾಳಧರ ಮೊದಲಾದ ಶೂರಭಟರು ಒಬ್ಬೊಬ್ಬರು ಇಪ್ಪತ್ತು ಪದ್ಮ ಸೇನೆಯೊಡನೆಯೂ, ಕಾಲಮರ್ದನ, ವಜ್ರಕಾಯ, ರುಂಡಾಭರಣ ಮೊದಲಾದ ಮಹಾಭಟರು ಒಬ್ಬೊಬ್ಬರು ಅರುವತ್ತು ನಮ್ಮ ಸೇನೆಯೊಡ ನೆಯ, ಸೋಮಪತನ, ಸೂಪತನ, ಅಂಡಾಭರಣ, ಧೂಮಕೇ ತು, ಸಹಸ್ತಕರ್ಣ, ರೇಣುಕ, ದಾರುಕ, ಮೊದಲಾದ ಶಿವಗಣಾಧೀಶರು
ಪುಟ:ಚೆನ್ನ ಬಸವೇಶವಿಜಯಂ.djvu/೧೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.