ವೀರಭದ್ರವಿಜಯವು ಹೇಳಿ, ಅವನು ಕೇಳದೆ ಹೋಗಲು ಜರೆಯುತ್ತ ನಡೆದರು, ಹೀಗೆ ಯಾ ಗಶಾಲೆಯಲ್ಲಿದ್ದ ಎಷ್ಟೋ ಜನರು ಜಾರಿಕೊಂಡರು. ದಕ್ಷನಾದರೆಯಾರು ಹೋದರೆತಾನೇ ಆಗುವುದೇನು ? ಎಂದುಕೊಂಡು, ತನ್ನ ಕೆಲಸ ದಲ್ಲಿ ತಾನು ತೊಡಗಿದನು. ರುದ್ರಾಣಿಯಾದರೋ-ಪ್ರಾಣಕಾಂತನಿಂದೆ ಯನ್ನು ಕೇಳಿ ಕಿವಿ ಮುಚ್ಚಿ, ಶಿವನು ನುಡಿದ ಭಾಷೆಯು ನಿಜವಾಯೇಂ ದು ಯೋಚಿಸಿ, ತಂದೆಯಿಂದ ತಿರಸ್ಕಾರವನ್ನು ಹೊಂದಿ ಶಿವನಿಗೆ ಮತ್ತೆ ತನ್ನ ಮುಖವನ್ನು ತೋರಿಸಬೇಕಲ್ಲ ! ಎಂದು ಲಜ್ಜಿಸಿ, ಇಂಥ ಶಿವದೂ ಪಕನ ಸಂಬಂಧವನ್ನು ಪಡೆದಿದ್ದ ತನ್ನ ದೇಹವನ್ನೇ ಇನ್ನು ಧರಿಸಿರುವುದು ಸರಿಯಲ್ಲವೆಂದು ಚಿಂತಿಸಿ, ಯೋಗಾಗ್ನಿಯಲ್ಲಿ ದೇಹವನ್ನು ವಿಸರ್ಜಿಸಿದ ಳು, ಮತ್ತೂ ಹಿಮವಂತನ ಪತ್ನಿಯಾದ ಮೇನಕಿಗೆ ಕೊಟ್ಟಿದ್ದ ವರದ ಪಾಲನೆಗಾಗಿ ಆಕೆಯ ಗರ್ಭವನ್ನು ಪ್ರವೇಶಿಸಿ ವಿಂಡವಾಗಿ ಬೆಳೆದಳು. - ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಮೂರನೆ ಅಧ್ಯಾಯವು | ವಗಿದುದು. *****- ೪ ನೆ ಅಧ್ಯಯವು. ವೀರಭದ್ರವಿಜಯವು. ದ್ರಾ ಯಣಿಯ ಶರೀರವನ್ನು ಬಿಟ್ಟು ದನ ನಂದೀಶನು ಕಂಡು ಕೋಪವೇರಿ, ಪರಶಿವನಿಗೆ ಈ ಸುದ್ದಿಯನ್ನು ತಿಳಿಸಿ ಮುಂದಣ ಕಾವ ನ್ನು ಮಾಡಬೇಕೆಂದು, ಯಾಗಶಾಲೆಯಿಂದ ಕಡುಬೇಗನೆ ಕೈಲಾಸಕ್ಕೆ ಬಂದು, ಪರಮೇಶನಿಗೆ ನಮಸ್ಕರಿಸಿ, “ ಜೀಯಾ ! ತನ್ನ ಅರ್ಧಾಂಗಿ ಯಾದ ಜಗನ್ಮಾತೆಯು ದಕ್ಷಬ್ರಹ್ಮನಿಂದ ಪ್ರತಿದೂಷಣೆ ಎನ್ನು ಕೇಳಿ ಸೈ ರಿಸಲಾರದೆ ತನ್ನ ಕೋಪಾಗ್ನಿಗೆ ದೇಹವನ್ನು ಸಮರ್ಪಿಸಿಬಿಟಳು ?” ಎಂ ದು ಬಿನ್ನೈಸಿದನು. ಕೆಳಿದ ಕೂಡಲೆ: ಪರಶಿವನ ಕೋಪಾಗ್ನಿಯು ವೇ ಲಾತೀತವಾಯಿತು. ಪ್ರಳಯಕಾಲದಲ್ಲಿ ಮಹಾಪರ್ವತಗಳನ್ನು ಸುಡು 21
ಪುಟ:ಚೆನ್ನ ಬಸವೇಶವಿಜಯಂ.djvu/೧೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.