ܫܬܵܘ ಚನ್ನಬಸವೇಕವಿಜಯಂ (+ಂಡ ೨) (ಅಧ್ಯಾಯ ತಿರುವ ಬೆಂಕಿಗೆ ಬೇಸಗೆಯ ಬಿರುಗಾಳಿಯ ಸಹಾಯಕವಾದರೆ ಅದನ್ನು ಆರಿಸುವುದಕ್ಕೆ ಯಾರಿಂದಾದೀತು ? ರುದ್ರನು ಮೊದಲೇ ವಿಪರೀ ವ, ಅದರಮೇಲೆ ಉಗ್ರ, ಇದರಮೇಲೂ ಕಿಡಿಗಣ್ಣ, ಮತ್ತೂ ಸಚ್ಚಾರ ಕಾರಣಮರಿ ; ಇಂಥ ಸ್ವಾಮಿಯು ತನ್ನ ಮೆಚ್ಚಿನ ಹೆಂಡತಿಯು ದೇಹ ತ್ಯಾಗ ಮಾಡಿದಳೆಂಬ ಸುದ್ದಿಯನ್ನೂ ಅದರಮೇಲೂ ಪತಿದೂಷಣೆಯನ್ನು ಕೇಳಲಾರದೆ ಹಾಗಾದಳ೦ಬುದನ್ನೂ ಕಿವಿಯಿಂದ ಕೇಳಿದ ಬಳಿಕ ಸೈರಿ ಸುವುದುಂಟೆ ? ಕೋಪಾಗ್ನಿಯಿಂದ ಆದ್ಯಂತವಾಗಿ ಪರಶಿವನ ದೇಹದಿಂ ದ ಮಹಾಜಾಲೆಯು ಹೊರಟಿತು. ಶಾಂತಿರಸವು ಒಣಗಿಹೋಯಿತು. ಕಣ್ಣುಗಳಿಂದ ಕಿಡಿಯು ಸುರಿಯುತ್ತಿದ್ದಿತು. ಬೆವರು ಮೂಡಿತು. ಹ ಣೆಗಣ್ಣಿನಿಂದ ಜ್ವಾಲೆಯು ಹೊರಚೆಲ್ಲಿತು. ಕಣ್ಣಾಲಿಗಳು ಚಪಲವಾದು ವು, ಮಾಸಗಳು ಕೆದರಿದುವು. ಶ್ವಾಸವು ಬಿಸಿಯಾಯಿತು. ಮುಖವು ಕೆಂಪಾಯಿತು. ರುಂಡಮಾಲೆಯು ಕಿರಿಚಿತು ಆಭರಣದ ಸರ್ಪಗಳು ವಿ ಪವನ್ನು ಕಾರಿದುವು. ಜಟಾಪಟಲವು ಬಿಚ್ಚಿ ಕೆದರಿತು. ಇವೆಲ್ಲವೂ ಜಗ ತಿನ ಲಯಕ್ಕೆ ಸೂಚಕವಾಗಿದ್ದು ವು. ಅಂತರಿಕ್ಷದಲ್ಲಿ ನಕ್ಷತ್ರಗಳು ಪಳಪ ೪ನೆ ಉದುರಿಕೊಂಡುವು. ಬೆಟ್ಟಗಳು ಛಟಛಟಲೆಂದು ಸೀಳುಬಿಟ್ಟುವು. ಸಮುದ್ರಗಳು ತಳಮಳನೆ ಕುದಿದುವು. ಭೂಮಿಯು ಧಗಧಗನೆ ಉರಿದಿತು. ದಿಗ್ಗ ಜಗಳ ಮತ್ತೂ ಆದಿಶೇಷನ ತಲೆಯ ಹೆಡೆಯೂ ಒಡೆದು ಮುತ್ತುಗ ಳೂ ರತ್ನಗಳೂ ಸಿಡಿದಾಡಿದ ವು. ಬ್ರಹ್ಮಾಂಡಮಂಡಲವನ್ನೆಲ್ಲ ಪ-ಶಿವನ ಕೋಪಾಗ್ನಿಯು ಆವರಿಸಿ ಸುಡುತ್ತಿದ್ದಿತು. ಯಾವಮಹಾದೇವನೊಬ್ಬನು ಒಲಿದರೆ ಜಗತ್ತೇ ಉದ್ಧಾರಗೊಳ್ಳುವುದೋ, ಆ ದೇವನು ಮುಳಿದರೆ ಲೋಕವೆಲ್ಲ ನಾಶಗೊಳ್ಳುವುದರಲ್ಲಾ ಸ್ವಗ್ರವೇನು ? ಕಾದ ಹಂಚು ಒಡೆದಂ ತೆ ಬ್ರಹ್ಮಾಂಡವು ಬಿರಿದುಹೋಯಿತು. ತನ್ನ ಪ್ರಾಣಪ್ರಿಯೆಯು ದೇಹ ವನ್ನು ಬಿಟ್ಟ ಅಗ್ನಿಯಿಂದಲೇ ಜಗತ್ತನ್ನೆಲ್ಲ ಸುಡಬೇಕೆಂದು ಶಿವನು ಯೋ ಚಿನಿರುವನೋ ಎಂದು ಲೋಕವೆಲ್ಲ ತಲ್ಲಣಿಸುತ್ತಿದ್ದಿತು. ಆ ಮಹಾದೇ ವನ ಮಹಾಕೋಪಾಗ್ನಿಯಿಂದೊಗೆದ ಭಯಂಕರವಾದ ಹೊಗೆಯೆ ಮಹಾ ಪುರುಷರೂಪನ್ನು ವರಿಸಿದಂತೆ ೨೦ಳವರ್<ವಾದ ಪ್ರಚಂಡಮರಿಯೊಂ ದು ಶಿವನ ಶ್ವಾಸೋಚ್ಛಾಸದಿಂದ ಬವಿಸಿದಂತೆ ಉದಿಸಿ ನಿಂತಿತು.
ಪುಟ:ಚೆನ್ನ ಬಸವೇಶವಿಜಯಂ.djvu/೧೭೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.