ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lಳಿ ಚೆನ್ನಬಸವೇಶವಿಜಯಂ (ಕಾಂಡ 4) [ಅಧ್ಯಾಯ ರಶಿವನು ನೋಡಿ, ಹುಸಿನಗೆ ನಕ್ಕು, “ ಎಲೆ ಸುತನೇ ! ನೀನು ಜಗತ್ತ ನಲ್ಲಿ ಗೆದ್ದು ಬರುವ ವಿರತವುಳ್ಳವನಾದಕಾರಣ ವೀರನಾಗಿಯೂ, ಈ ನಿನ್ನ ಶರೀರವು ಭದ್ರ (ಮಂಗಳ) ಮಯವಾಗಿರುವುದರಿಂದ ಭದ್ರವಾಗಿ ಯೂ ಇರುತ್ತಿದೆ, ಅದು ಕಾರಣ, ನೀನು • ವೀರಭದ್ರನು ' ಎಂದು ಶಿವನು ಹೆಸರುಕರೆದು, ಬಳಿಕ ಎಲೆ ಮಗನೇ : ದಕ್ಷನೆಂಬುವನು ನಮ್ಮನ್ನು ಓಲೈಸುತ್ತಿದ್ದ ವಿಷ್ಣು ಬಂದ್ರಾದಿಗಳನ್ನೆಲ್ಲ ಕಟ್ಟಿಕೊಂಡು ಯಜ್ಞವನ್ನು ಮಾಡುತ್ತಿರುವನು; ನನ್ನ ಪತ್ನಿಯು ಅಲ್ಲಿಗೆ ಹೋಗಿ ಅವ ನಿಂದ ಪತಿದೂಷಣೆಯನ್ನು ಕೇಳಿ ದೇಹವನ್ನು ತ್ಯಜಿಸಿದಳು; ನೀನು ಈ ಗಳೇ ಅಲ್ಲಿಗೆ ಹೋಗಿ, ಯಜ್ಞದಲ್ಲಿ ಅಗ್ರಭಾಗವನ್ನು ನನಗೆ ಕೊಟ್ಟು ಬಿಡುವಂತೆ ಅವನಿಗೆ ಮೊದಲು ಬುದ್ದಿ ಹೇಳು; ಅದನ್ನು ಕೇಳದಿದ್ದರೆ ಯಾಗವನ್ನು ಹಾಳ್ಳಾಡಿ, ಅಲ್ಲಿದ್ದವರೆಲ್ಲರನ್ನೂ ಸೆರೆಕಟ್ಟಿ ತೆಗೆದುಕೊಂಡು ಬಾ ?” ಎಂದು ನೇಮಿಸಿ ಕಳುಹಿಕೊಟ್ಟನು. ಆಗ ವೀರಭದ್ರೇಶ್ವರನು ಕೋಟಿ ನಿಡಿಲಿನಂತೆ ಆರ್ಭಟಿಸಿ ಶೌಗ್ಯದಿಂದ ಹೂಂಕರಿಸಿದನು. ಆ ಶಬ್ದ ದೊಡನೆಯೆ? ಮಹಾಭದ್ರಕಾಳಿ ಶಕ್ತಿಯ ಉದಿಸಿ ನಿಂತಳು, ಮತ್ತೂ ತನ್ನ ಸಂಕಲ್ಪಮಾತ್ರದಿಂದಲೇ ಸಮಾನರೂಪದ ಅಸಂಖ್ಯಾತಕೆಟಿ ಚ ತುಂಗಸನವನ್ನು ಸೃಜಿಸಿ, ಎಲ್ಲರನ್ನೂ ಒಡನೆ ಕರೆದುಕೊಂಡು ಭದ್ರ ಕಾಳಿಯೊಡನೆ ತಾನು ವೃಸಭವನ್ನೇರಿ ದಾನ್ಸರದಕಡೆಗೆ ನಡೆದನು, ಈ ಮಹಾಸೇನೆಯು ಛತ್ರ ಚಾಮರ ಧಜ ಪತಾಕ ವಾದ್ಯ ವೈಭವಾದಿಗಳಿಂದ ಕೂಡಿ ನಡೆತರುತ್ತಿರಲು, ಅದರ ಭಾರವನ್ನು ಹೊರಲಾರದೆ ದಿಗ್ಗ ಜಗಳು ತಲೆಯನ್ನು ಕುಗ್ಗಿಸಿದುವು. ದಾರಿ ನಡೆದು ಹೋಗುತ್ತಿರುವಲ್ಲಿ ವೀರಭದ್ರ ಶನು ಒಬ್ಬ ಗಣನಾಯಕನನ್ನು ಕರೆದು “ ನೀನು ದಕ್ಷನ ಯಾಗಶಾಲೆಗೆ ಹೋಗಿ, ನಾವು ಬರುತ್ತಾರೆಂಬುದನ್ನು ತಿಳಿಸದೆ, ಯಜ್ಞದ ಅಗ್ರಹವಿ ರ್ಭಾಗವನ್ನು ಶಿವನಿಗೆ ಸಮರ್ಪಿಸೆಂದು ಅವನಿಗೆ ಹೇಳು; ಅದಕ್ಕೇನು ಉತ್ತರ ಬರುವುದೋ ಅದನ್ನು ನಮಗೆ ತಿಳಿಸು ” ಎಂದು ಹೇಳಿ ಕಳುಹಿ ದನು. ಆತನು ಆಯುಧಧಾರಿಯಾಗಿ ವಾಯುವೇಗದಿಂದ ಬಂದು, ಜನ ಸೋಮವನ್ನು ದಾರಿ ಬಿಡಿಸಿಕೊಂಡು ನುಗ್ಗಿ ದಕ್ಷನ ಮುಂದೆ ನಿಂತು “ ಅಯ್ಯಾ ದಕ್ಷನೇ ! ನಿನ್ನ ನಡತೆಯು ಸಹ್ಮನನ್ನು ಕೆಣಕಿ ದನಗಳನ್ನು