ಬೀರಧಿವಿಜಯವು ೧44 ನಕ್ಷತ್ರಮಾಲೆಯನ್ನು ತಳೆದಿರುವ ಮೇಘಜಾಲದಂತೆ ತೋರುತ್ತಿದ್ದ ಆ ಮೂರಿಗೆ ಬಂದು ಸಹಸ್ರ ಮುಖಗಳೂ, ಎರಡು ಸಾವಿರ ತೋಳುಗಳೂ, ಮೂರು ಸಾವಿರ ಕಣ್ಣುಗಳೂ ಭೀಕರವಾದ ಕೋರೆದಾಡೆಗಳೂ ವಿರಾಜಿ ಸುತ್ತಿದ್ದುವು. ಆ ಮಹಾವಿರಾಡೂಪನಿಗೆ ಬ್ರಹ್ಮಾಂಡದ ಉಪರಿಭಾಗವೇ ಶಿರಸ್ಸಿನಂತೆಯೂ, ಸೂರಮಂಡಲವೇ ಎದೆಯ ಮೇಲಣ ಪದಕದಂತೆ ಯ, ನಕ್ಷತ್ರಪಚ್ಚಿಯೇ ಕಂಠಸದಂತೆಯೂ ತೋರುತ್ತಿದ್ದುವು. ಆ ಮಹಾವರಿಯು ಕೋ ಟಿವಿಡಿಲಿನಂತೆ ಆರ್ಭಟಿಸಿ ನಿಂತು ಅತ್ತಿತ್ತ ಅಲೆ ದಾಡಿದನು. ಪದವಿನ್ಯಾಸಕ್ಕೆ ಜಗತ್ತೆಲ್ಲ ತೂಗಾಡಿತು. ಸರ್ಪಮಾಲೆ ರುಂಡಮಾಲೆಗಳನ್ನು ಧರಿಸಿ, ಹಸ್ತಗಳಲ್ಲಿ ಹಲಗೆ ಕತ್ತಿ ತೋಮರ ಕುಂತ ಮುಸಲ ಚಕ್ರ ಮುದ್ಧರ ಧನುರ್ಬಾಣ ಪ್ರಸ ಪಟ್ಟಸ ಕುಂತ ಕುಠಾರ ಮೊದಲಾದ ಆಯುಧಗಳನ್ನು ಹಿಡಿದು, ಆದಿಶೇಷನನ, ವೀರಗಾಸೆಯಾಗಿ ಕಟ್ಟಿ, ಸುರನರೋರಗ ರಾಕ್ಷಸಾದಿಗಳಲ್ಲಿ ಯಾರು ಪ್ರತಿಭಟಿಸಿದರೂ ಸೀ • ತೋರಣಗಟ್ಟುವ ಬಿರುದಿನ ಪೆಂಡೆಯನ್ನು ಪಾದದಲ್ಲಿ ಕಟ್ಟಿ, ಪೂರಾ ಗೀಸರನಾದ ಆ ಘೋರವರಿಯು ಪರಶಿವನ ಪಾದಕ್ಕೆ ನಮಸ್ಕರಿಸಿ, ಕೈಮುಗಿದು ನಿಂತು, “ ಸ್ವಾಮಿಾ ! ಅಪ್ಪಣೆಯನ್ನು ಕೊಡು, ಭೂಮಿ ಯನ್ನು ನೀಳಲೋ ? ಬೆಟ್ಟಗಳನ್ನು ಕೀಳಲೋ ? ಸೂನನ್ನು ತುಳಿದು ಹಾಕಿ ? ಸಮುದ್ರಗಳನ್ನು ಮುಚ್ಚಿಬಿಡಲೋ ? ಬ್ರಹ್ಮಾಂಡವನ್ನು ಹೋಳುಮಾಡಲೋ ? ಹೇಳು; ಇದಿರಾಗುವವರು ಯಾರಿದ್ದರೂ ನೀ೪ ತಂದೊಪ್ಪಿಸುತ್ತೇನೆ; ಬ್ರಹ್ಮನ ಮೂಳೆಯನ್ನಾದರೂ ಮುರಿದು ತರುತ್ತೆ ನೆ; ಬ್ರಹ್ಮಾಂಡವನ್ನೆಲ್ಲ ಪುಡಿಮಾಡಿ ತಂದೊಪ್ಪಿಸುತ್ತೇನೆ; ವಿಷ್ಣುವಿನ ಪ್ರಾಣವನ್ನಾದರೂ ತೆಗೆದುಕೊಳ್ಳುತ್ತೇನೆ; ಇಂದ್ರಾದಿದಿತ್ಸಾಲಕರ ಸಂಪ ಇನ್ನಾದರೂ ಸುಟ್ಟು ಬರುತ್ತೇನೆ; ಪಾತಾಳಲೋಕದವರನ್ನೆಲ್ಲ ಕಾಲಿನಿಂ ದ ಹೊಸಗಿ ಬರುತ್ತೇನೆ, ದಿಗ್ಗಜಗಳ ಕೊಂಬುಗಳನ್ನೂ ಕಿತ್ತು ತರು ತೇನೆ; ಆದಿಶೇಷನ ಎದೆಯನ್ನೂ ನೀಳುತ್ತೇನೆ; ಉತ್ತರ ಕೊಡು; ಈ ಏಳು ಲೋಕಗಳಲ್ಲಿ ಮಲತವರು ಯಾರಿದ್ದರೂ ಹೇಳು, ಕ್ಷಣಕಾಲದಲ್ಲಿ ಎದೆ ಮಟ್ಟ ತುಳಿದು ಪ್ರಾಣವನ್ನು ತೆಗೆದುಕೊಳ್ಳುತ್ತೇನೆ; ಬೆಸನಕೊಡು ಕೊಡು ?” ಎಂದು ಪ್ರಾರ್ಥಿಸುತ್ತಿರುವ ಮಗನ ಕೌಲ್ಯಾಟೋಪವನ್ನು ಪ
ಪುಟ:ಚೆನ್ನ ಬಸವೇಶವಿಜಯಂ.djvu/೧೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.