೧೩ ಚನ್ನಬಸವೇಶವಿಜಯಂ (Fಾದ ೩) [ಅಧ್ಯಾಯ ಗೆ ಮುದ್ರೆಯನ್ನೊ, ಸ್ವಾಹಾದೇವಿಯ ಮೊಲೆಯನ್ನು ಕಡಿದು, ಇದ ರಂತೆಯೆ ಉಳಿದ ದೇವಸ್ತ್ರೀಯರನ್ನೂ ಭಂಗಗೊಳಿಸಿದನು. ಅವನ ಸೇನೆಯು ಹೋಮಕುಂಡದ ಸುತ್ತಲೂ ಗೋಬೀಮಣ್ಣಿನ ತಿಲಕವನ್ನಿ ಟ್ಟು ಕುಳಿತಿದ್ದ ವಿಪತ ಬಟ್ಟೆಗಳನ್ನು ಕಿತ್ತು, ಕೆನ್ನೆಗೆ ಬಡಿದು, ಒಬ್ಬನ ಜಟ್ಟಿಗೆ ಮತ್ತೊಬ್ಬನ ಜಟ್ಟನ್ನು ಸೇರಿಸಿ ಕಟ್ಟಿ, ಓಡಿಸಿ (ಮುನಿಸ್ಕೋ ಮಕ್ಕೆ ಮಾತ್ರ ಯಾವಕೇಡನ್ನೂ ಮಾಡಕೂಡದೆಂದು ವೀರೇಶನು ಕಟ್ಟು ಮಾಡಿರಲು) ಅವರನ್ನು ಕೆಣಕದೆ ಬಿಟ್ಟು, ಯಾಗಶಾಲೆಯನ್ನೆಲ್ಲ ಕಿತ್ತು ಕುಣಿದಾಡಿ ಬೊಬ್ಬಿರಿದಿತು. ಅಸ್ಟ್ರಲ್ಲಿ ವೀರೇಶನು ದಕ್ಷನ ಮುಂಗಡೆ ಗೆ ಬಂದು, ಕೈಕತ್ತಿಯ ಒಂದೇ ಯೇಟಿನಿಂದ ಅವನ ತಲೆಯನ್ನು ಹೊ ಮಕುಂಡಕ್ಕೆ ಹೋಗಿ ಬಿಳುವಂತೆ ಕತ್ತರಿಸಿ ಬೊಬ್ಬಿರಿದನು, ಆಕಾಶ ದಲ್ಲಿ ದೇವದುಂದುಭಿಯಾಯಿತು, ವೀರೇಶನ ಸೇನೆಯಲ್ಲಿ ಕೋಲಾಹಲ ವನ್ನು ಮಾಡಿತು. ದಕ್ಷನ ರಾಣಿವಾಸದವರು ಓ ! ಎಂದು ಗೋ೪ಟ್ಟರು. ಆಗ ದಕ್ಷನ ಪತ್ನಿಯರು ರೋದಿಸುತ್ತ ಬಂದು, ವೀರೇಶನ ಮತ್ತೂ ಭ ದ್ರಕಾಳಿಯ ಪಾದದ ಮೇಲೆ ಬಿದ್ದು, ತಮಗೆ ಮುತ್ತೈದೆತನವನ್ನು ಕೊ ಟ್ಟು ಕಾಪಾಡಬೇಕೆಂದು ಬೇಡಿಕೊಂಡರು. ಮಹಾಕಾಳಿಯು ಕರುಣ ಗೊಂಡು, ಶರಣಾಗತರನ್ನುದ್ಧರಿಸಬೇಕೆಂದು ಪತಿಗೆ ಬಿನ್ನಯಿಸಿದಳು. ನ ಈು ಲಲ್ಲಿ ಕೈಕಟ್ಟಿ ನಿಂತಿದ್ದ ಹರ್ಯಜರು ಹಸಾದ ಹಸಾದವೆಂದು ನುಡಿ ಯುತ್ತಿದ್ದರು. ಇದರಿಂದ ವೀರಭದ್ರೇಶ್ವರನು ಶಾಂತನಾಗಿ, ಒಳಿಯಲ್ಲಿ ಬಿದ್ದಿದ್ದ ಯಜ್ಞದ ತಗರಿನ ತಲೆ ಯನ್ನೆತ್ತಿ ದಕ್ಷನ ಮುಂಡದ ಮೇಲಿಟ್ಟು ಸವರಿದನು. ಕೂಡಲೆ ದಕ್ಷನ ದೇಹದಲ್ಲಿ ಪ್ರಾಣವೂ ಕೂಡಿತು. ಅಜ ಪುತ್ರ- (ಆಡಿನ ಮಗ = ಬ್ರಹ್ಮನ ಮಗ) ಎಂಬ ನಾಮವು ಸಾರ್ಥಕ ವಾದ ಹಾಗೆ ದಕ್ಷನು ತೊರಿದನು, ಥಟ್ಟನೆದ್ದು ವಿರೇಶನ ಪಾದಕ್ಕೆ ನ ಮಸ್ಕರಿಸಿ, ತನ್ನ ಪರಾಧವನ್ನು ಕ್ಷಮಿಸಬೇಕೆಂದು ಬೇಡಿದನು, ವೀರೇಶ ನು ಅಲ್ಲಿದ್ದವರೆಲ್ಲರನ್ನೂ ಕರೆದುಕೊಂಡು ಕೈಲಾಸಕ್ಕೆ ಬಂದನು., ಬಾ ಗಿಲಲ್ಲಿ ಎಲ್ಲರನ್ನೂ ನಿಲ್ಲಿಸಿ, ನಾರದರೊಡನೆ ವೀರೇಶನು ಶಿವನ ಬಳಿಗೆ ಹೊಗಿ, ನಮಸ್ಕರಿಸಿದನು. ಪರಶಿವನು ನಾರದನ ಮುಖದಿಂದ ನಡೆದ ಸಂಗತಿಯನ್ನೆಲ್ಲ ಕೇಳಿ ಸಂತುಷ್ಮನಾಗಿ, ಪ್ರೇಮಪುತ್ರನನ್ನು ಕರೆದು ಆ
ಪುಟ:ಚೆನ್ನ ಬಸವೇಶವಿಜಯಂ.djvu/೧೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.